»   » ಅರ್ಜುನ್ ಜನ್ಯಗೆ 'ಗುರು-ಗಾಡ್ ಫಾದರ್'' ಎರಡು ಒಬ್ಬರೇ! ಯಾರದು?

ಅರ್ಜುನ್ ಜನ್ಯಗೆ 'ಗುರು-ಗಾಡ್ ಫಾದರ್'' ಎರಡು ಒಬ್ಬರೇ! ಯಾರದು?

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಮೂಲ ಹೆಸರು ಲೋಕೇಶ್ ಕುಮಾರ್. ಲೋಕೇಶ್ ಕುಮಾರ್ ಗೆ ಕನ್ನಡದ ಖ್ಯಾತ ಸಾಹಿತಿ ಕೆ.ಕಲ್ಯಾಣ್ ಅರ್ಜುನ್ ಎಂದು ನಾಮಕರಣ ಮಾಡುತ್ತಾರೆ. ಆದರೆ ಅವರು ಅರ್ಜುನ್ ಜನ್ಯ ಆಗಿ ಪರಿಚಯವಾಗಿದ್ದು ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಸುದೀಪ್ ಅವರ 'ಕೆಂಪೇಗೌಡ' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ ನಂತರ.['ಲೋಕೇಶ್ ಕುಮಾರ್'ಗೆ ಅರ್ಜುನ್ ಎಂದು ಹೆಸರಿಟ್ಟಿದ್ದು ಒಬ್ಬ ಸಾಹಿತಿ!]

ಅರ್ಜುನ್ ಜನ್ಯ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ, ಬಹುಬೇಡಿಕೆ ಸಂಗೀತ ನಿರ್ದೇಶಕನಾಗಿ ರೂಪುಗೊಳ್ಳಲು ಅವರಿಗೆ ಸಂಗೀತ ತರಬೇತಿ ನೀಡಿದ, ಆರಂಭಿಕ ದಿನಗಳಲ್ಲಿ ಅವರಿಗೆ ಅವಕಾಶ ನೀಡಿದ ಹಲವರು ಕಾರಣರು. ಆದರೆ ನಿಮಗೆಲ್ಲಾ ತಿಳಿಯದ ಒಂದು ವಿಷಯ ಅಂದ್ರೆ, ಅರ್ಜುನ್ ಜನ್ಯ ಒಬ್ಬರನ್ನು ಯಾವಾಗಲು 'ನನ್ನ ಗುರು ಮತ್ತು ಗಾಡ್ ಫಾದರ್' ಎರಡು ಅವರೇ ಎಂದು ಕರೆಯುವ ಬಗ್ಗೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ 'ಗುರು ಮತ್ತು ಗಾಡ್ ಫಾದರ್' ಎಂದು ಒಬ್ಬರನ್ನೇ ಕರೆಯುವುದು ಯಾರನ್ನು ಎಂಬುದನ್ನು 'ವೀಕೆಂಡ್ ವಿತ್ ರಮೇಶ್' ಸೀಸನ್ 3 ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಅರ್ಜುನ್ ನಿಂದ ಅರ್ಜುನ್ ಜನ್ಯ ಆಗಿ ಪರಿಚಯವಾಗಿದ್ದು ಹೇಗೆ ಎಂಬ ಮಾಹಿತಿಯೂ ಇಲ್ಲಿದೆ.

'ಕೆಂಪೇಗೌಡ' ಸಿನಿಮಾಗೆ ಸಂಗೀತ ನಿರ್ದೇಶನ ಅವಕಾಶ ಸಿಕ್ಕಿದ್ದು ಹೇಗೆ?

"ನನಗೆ ಮೊದಲು ಮುಂಗಾರು ಮಳೆ ಕ್ಯಾಮೆರಾಮ್ಯಾನ್ ಕೃಷ್ಣ ಅವರು ಕರೆ ಮಾಡಿ, ಸುದೀಪ್ ಸರ್ ನಿಮ್ಮನ್ನ ಮೀಟ್ ಮಾಡಬೇಕಂತೆ. ಶೇಷಾದ್ರಿ ಪುರಂ'ನಲ್ಲಿ ಇದ್ದಾರೆ, ತಕ್ಷಣ ಬಂದುಬಿಡಿ ಅಂದ್ರು. ತಕ್ಷಣ ನಾನು ಅಡ್ರೆಸ್ ತಕ್ಕೊಂಡು ಹೋದೆ. ನಾನು ಹೋದಾಗ ಸುದೀಪ್ ಸರ್ ಫೋನ್ ನಲ್ಲಿ ಟೆಕ್ಸ್ಟ್ ಮಾಡ್ತಾ ಕುಳಿತಿದ್ರು. ಹೋದ ತಕ್ಷಣ ನಮಸ್ಕಾರ ಸರ್ ಅಂದೆ. ಅವರು 'ಹಾಯ್ ಅರ್ಜುನ್ ಬನ್ನಿ ಕುಳಿತುಕೊಳ್ಳಿ ಅಂದ್ರು"- ಅರ್ಜುನ್ ಜನ್ಯ, ಸಂಗೀತ ನಿರ್ದೆಶಕ[ಅರ್ಜುನ್ ಜನ್ಯ 'ಸಂಗೀತ ಲೋಕ'ಕ್ಕೆ ಬರಲು ಬಲವಾದ ಕಾರಣ ಏನು?]

3 ಹಾಡುಗಳನ್ನು ಕೊಟ್ರೆ 5 ಹಾಡುಗಳನ್ನು ಕೇಳಿದ್ದ ಅರ್ಜುನ್

"ನಾನು ಒಂದು ಸಿನಿಮಾ ಮಾಡ್ತೀದಿನಿ. 'ಸಿಂಗಂ' ರಿಮೇಕ್. ಅದರಲ್ಲಿ ನಾನು ಎರಡು ಹಾಡು ಅಂಗೇ ಇಟ್ಟುಕೊಳ್ಳುತ್ತಿದ್ದೇನೆ. ಮೂರು ಹಾಡು ನಿಮ್ಮತ್ರ ಮಾಡಿಸೋಣ ಅಂತಿದೀವಿ. ಮಾಡಿ ಅಂದ್ರು ಸುದೀಪ್ ಸರ್. ನಾನು ಅದಿಕ್ಕೆ ಸರ್ ಆಪ್ಶನ್ ಆಗಿರೋ ಆ ಎರಡು ಹಾಡನ್ನು ನಾನೇ ಟ್ರೈ ಮಾಡ್ತೀನಿ ಸರ್. ಅದು ಚೆನ್ನಾಗಿದ್ರೆ ಇಟ್ಕೊಳಿ ಅಂದೆ. ಅದಿಕ್ಕೆ ಸರ್ ಅಫ್ ಕೋರ್ಸ್ ಯಾವಾಗ ಯಾರಿಂದ ಏನ್ ಬರುತ್ತೆ ಅಂತ ಹಳೋಕೆ ಆಗಲ್ಲ. ನೀವು ಮಾಡಿಕ್ಕೊಂಡು ತಗೋಂಡು ಬನ್ನಿ ಅಂದ್ರು" - ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ[ನೀರಿಲ್ಲದ ಬಾವಿಗೆ ಅರ್ಜುನ್ ಜನ್ಯ ಬಿದ್ದಿದ್ಯಾಕೆ?]

ಕಿಚ್ಚ ಸುದೀಪ್ ಫಸ್ಟ್ ಟೈಮ್ ಒಂದೇ ಸರಿ ಓಕೆ ಮಾಡಿದ ಹಾಡು...

"ಎರಡು ದಿನ ಬಿಟ್ಟು ನಾನು ಮೊದಲು ರೆಡಿ ಮಾಡಿ ತಕ್ಕೊಂಡೋಗಿದ್ದು 'ಥರ.. ಥರ.. ಇಡಿಸಿದೇ...' ಸಾಂಗ್. ಅದನ್ನ ಪ್ಲೇ ಮಾಡಿ ಕೇಳಿದ ನಂತರ ಸುದೀಪ್ ಸರ್ 'ನಿಮಗೆ ಒಂದ್ ವಿಷ್ಯ ಗೊತ್ತಾ' ಅಂದ್ರು. ಹೇಳಿ ಅಂದೆ. ನಾನು ಒಂದೇ ಸರಿ ಟ್ಯೂನ್ ಕೇಳಿ ಯಾವುದನ್ನು ಇದುವರೆಗೆ ಓಕೆ ಮಾಡಿಲ್ಲ. ಬಟ್ ದಿಸ್ ಟೈಮ್ ನಿಮ್ಮ ಹಾಡನ್ನು ಒಂದೇ ಸರಿ ಓಕೆ ಮಾಡ್ತಿದೀನಿ ಅಂದ್ರು. ಅದು ನನಗೆ ತುಂಬಾ ಒಳ್ಳೇ ಮೂಮೆಂಟ್"- ಅರ್ಜನ್ ಜನ್ಯ, ಸಂಗೀತ ನಿರ್ದೇಶಕ[ಇದು.. ಜನ್ಯ ಜಗಜ್ಜಾಹೀರು ಮಾಡಿದ ಅಪರೂಪದ ಲವ್ ಸ್ಟೋರಿ..]

ಅರ್ಜುನ್ ಜನ್ಯ 'ಸುದೀಪ್' ರವರನ್ನು ಗುರು ಅನ್ನೋದು ಏಕೆ?

" ಸುದೀಪ್ ಸರ್ ಅಷ್ಟು ಹತ್ತಿರದಿಂದ ನನಗೆ ಮೊದಲು ಗೊತ್ತಿರಲಿಲ್ಲ. ಅವರ ಹತ್ತಿರ ಹೋಗ್ತಾ ಹೊಗ್ತಾ ಅವರಿಂದ ಕಲಿತಿದ್ದು ತುಂಬಾ ಇದೆ. ಮ್ಯೂಸಿಕ್ ಕಲಿಸಿದ್ರೇನೆ ಗುರು ಆಗಲ್ಲ. ಫಸ್ಟ್ ಸಿನಿಮಾ ಕೊಟ್ರೇನೆ ಗಾಡ್ ಫಾದರ್ ಆಗೋದಿಲ್ಲ. ನಾನ್ ಯಾಕ್ ಸುದೀಪ್ ಸರ್ ನ ಗುರು ಅಂತಿನಿ ಅಂದ್ರೆ ನನ್ನ ಜೀವನದಲ್ಲಿ ತುಂಬಾ tough situation ಕೊಟ್ಟು, ಅದನ್ನ ಹ್ಯಾಂಡಲ್ ಮಾಡು ಅಂತ ಬಿಟ್ಟು, ಆ ಕೆಲಸ ಮಾಡಿದ ನಂತರ ಸಖತ್ತಾಗಿ ಮಾಡಿದಿಯಾ ಕಣೋ ಅಂತ ಬೆನ್ನು ತಟ್ಟಿದ್ದು ಸುದೀಪ್ ಸರ್. ಇದಕ್ಕೆ ಅವರನ್ನು ಗುರು ಅಂತಿನಿ' ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ

ಗಾಡ್‌ ಫಾದರ್ ಎನ್ನುವುದೇಕೆ?

'ಆ ಸಿನಿಮಾ ಕೊಟ್ಟಾದ ಮೇಲೆ ಆಗೋಯ್ತು, ಅರ್ಜುನ್ ಕೆಲಸ ಮುಗಿತು ಅಂತ ಅಲ್ಲ. ಕರ್ನಾಟಕ ಬಿಟ್ಟು ಹೈದರಾಬಾದ್, ಚೆನ್ನೈ ಎಲ್ಲೇ ಹೋದ್ರು ನಮ್ಮೂರಲ್ಲಿ ಅರ್ಜುನ್ ಜನ್ಯ ಅಂತ ಒಬ್ಬ ಇದಾನೆ. ಸೂಪರ್ ಆಗಿ ಮ್ಯೂಸಿಕ್ ಮಾಡ್ತಾನೆ. ನೀವು ಟ್ರೈ ಮಾಡಿ ಅಂತ ಬೇರೆಯವರಿಗೆಲ್ಲ ಹೇಳುತ್ತಾರೆ. ಸುದೀಪ್ ಸರ್ ಅಂತ ಸೂಪರ್ ಸ್ಟಾರ್, ಒಬ್ಬ ಚಿಕ್ಕ ಟೆಕ್ನೀಷಿಯನ್ ಬಗ್ಗೆ ಇಷ್ಟೊಂದು ಹೇಳ್ತಾರೆ ಅಂದ್ರೆ ಆ ಮೌಲ್ಯದ ಬಗ್ಗೆ ನನಗೆ ಗೊತ್ತು. ಅದಿಕ್ಕೆ ನಾನು ಸುದೀಪ್ ಸರ್ ನ ಗಾಡ್ ಫಾದರ್ ಅನ್ನುವುದು" - ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ.

ಅರ್ಜುನ್ ಜನ್ಯ ಬಗ್ಗೆ 'ವೀಕೆಂಡ್ ವಿತ್ ರಮೇಶ್'ನಲ್ಲಿ ಸುದೀಪ್ ಹೇಳಿದ್ದು...

"ಅರ್ಜುನ್ ನನ್ನ ಹುಡುಗ ಅನ್ನುವುದಕ್ಕಿಂತ ಹೆಚ್ಚಾಗಿ ನನ್ನ ಸಹೋದರ ಇದ್ಹಂಗೆ. 'ಕೆಂಪೇಗೌಡ' ಆದ ಮೇಲೆ ಇವತ್ತೇನು ಅವರು ಹೆಸರು ಮಾಡಿದ್ದಾರೆ. ಇದು ನನ್ನಿಂದ ಅಲ್ಲ. ಅವರ ಟ್ಯಾಲೆಂಟ್ ನಿಂದ. 'ಕೆಂಪೇಗೌಡ' ಗೆ ಯಾರನ್ನ ಹಾಕ್ಕೊಂಡು ಮಾಡೋಣ ಅಂದಾಗ. ಅರ್ಜುನ್ ಅನ್ನೋ ಹೆಸರು ಬಂತು. ಆ ಹೆಸರೇ ನನಗೆ ಇಷ್ಟ ಆಯ್ತು. ಆಗ ನಾನು ಆ ವ್ಯಕ್ತಿ ಯಾರು ಅಂತಾನೆ ನೋಡಿರಲಿಲ್ಲ. ಕರೆಸಿ ಅವರನ್ನು ಅಂದೆ" ಸುದೀಪ್, ನಟ

ಸುದೀಪ್ ಫ್ಲ್ಯಾಶ್ ಬ್ಯಾಕ್ ನೆನಪಿಸಿದ್ದ ಅರ್ಜುನ್

"ಕೆಲವು ಕಡೆ ಅವರನ್ನು ಐರನ್ ಲೆಗ್ ಅಂತಿದ್ರು. ಅವರು ಮಾಡಿದ ಸಿನಿಮಾ ಹೋಡಲ್ಲ ಅಂದಿದ್ದು ಕೇಳಿಬಂತು. ಆಗ ನನಗೆ ನನ್ನ ಫ್ಲ್ಯಾಶ್ ಬ್ಯಾಕ್ ನೆನಪಾಯಿತು. ಯಾಕಂದ್ರೆ ನನ್ನನ್ನ ಮೊದಲು ಐರನ್ ಲೆಗ್ ಅಂತ ಕರೀತಿದ್ರು. 'ಐರನ್ ಲೆಗ್' ಅಂತಾರೆ ಅಂದ ಮೇಲೆ ಇನ್ನೂ ಇಷ್ಟ ಆಗಿ ನನಗೆ ಹಠ ಬಂದು. ಐ ವಿಲ್ ಟೇಕ್ ಹಿಮ್ ಅಂದೆ" - ಸುದೀಪ್, ನಟ

ಫಸ್ಟ್ ಎಂಟ್ರಿ ಕೊಟ್ಟಾಗ ರೆಹಮಾನ್ ತರನೇ ಕಂಡಿದ್ದ ಅರ್ಜುನ್

"ಫಸ್ಟ್ ಎಂಟರ್ ಆದಾಗ ಎ ಆರ್ ರೆಹಮಾನ್ ರೆಪ್ಲಿಕಾ ಎಂಟ್ರಿ ಕೊಂಟ್ಟಗೆ ಆಯಿತು. ಕೂದಲು.. ಹೇರ್ ಸ್ಟೈಲ್ ಹಾಗೆ ಇತ್ತು ಸ್ವಲ್ಪ. ವ್ಯಕ್ತಿ ನೋಡಿದ ತಕ್ಷಣ ಇಷ್ಟ ಆದ್ರು. ಮಾಡಿ ಅಂದೆ. ಸಾಂಗ್ ಕೊಟ್ಟಿದ ದಿನ ಸಾಯಂಕಾಲದ ಒಳಗಡೆನೇ ಒಂದು ಸಾಂಗ್ ಮಾಡಿ ಕಳಿಸಿದ್ರು. ಅವರ ಸ್ಪೀಡ್ ಇಷ್ಟ ಆಯ್ತು. ಆಫೀಸ್ ನಲ್ಲಿ ಮಾತುಕತೆಗೆ ಸಿಕ್ಕಾಗ ಅವರ ಹಂಬಲ್ ನೆಸ್ ಇಷ್ಟ ಆಯ್ತು. 'ಕೆಂಪೇಗೌಡ' ಆದ ನಂತರ ಏನ್ ನಡೆಯಿತು ಅನ್ನೋದು ಇತಿಹಾಸ" ಸುದೀಪ್, ನಟ

ಅರ್ಜುನ್ 'ಅರ್ಜುನ್ ಜನ್ಯ' ಆಗಿದ್ದು ಯಾವಾಗ?

" ಕೆಂಪೇಗೌಡ ರಿಲೀಸ್ ಆಗಬೇಕಾದ್ರೆ ಟೈಟಲ್ ಕಾರ್ಡ್ ಗೆ ಅರ್ಜುನ್ ಅಂತ ಬರಿಬೇಕಾದ್ರೆ ನನ್ನ ತಲೆಗೆ ಬಂದಿದ್ದು ಶಂಕದಿಂದ ಹೊರಗಡೆ ಬಂದ ಒಂದು ಸೌಂಡ್, ಒಂದು ಯುದ್ಧ ಪ್ರಾರಂಭವಾಗುವ ಸೌಂಡ್. ಅದೇ ಜನ್ಯ. ಅರ್ಜುನ್ ಜನ್ಯ ಹೆಸರು ಇಟ್ಟಿದಕ್ಕು, ಅವರು ಮಾಡುತ್ತಿರುವ ಕೆಲಸಕ್ಕೂ ಇವತ್ತು ನನಗೆ ಹೆಮ್ಮೆ ಅನಿಸುತ್ತಿದೆ. ಯಾಕಂದ್ರೆ ಆ ನಾಮಕರಣ ನಾನ್ ಮಾಡಿದ್ದು ಅಂತ. ಅಲ್ಲದೇ ಅವರಿಗೆ ಯಾರಿಗೂ ನೋ ಅನ್ನೋಕೆ ಬರೋದಿಲ್ಲ. ಅದನ್ನ ಹೇಳಿದ್ರೆ ಬಹುಶಃ ಅವತ್ತು ನನ್ನ ಪ್ರಕಾರ ಅವರು ಇನ್ನೂ ಹತ್ತು ಹೆಜ್ಜೆ ಮುಂದೆ ಹೋಗ್ತಾರೆ" - ಸುದೀಪ್, ನಟ

English summary
Music Director Arjun Janya called Sudeep as his 'Guru and God Father' in Weekend with Ramesh 3'. Here is why..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada