»   » ನೀರಿಲ್ಲದ ಬಾವಿಗೆ ಅರ್ಜುನ್ ಜನ್ಯ ಬಿದ್ದಿದ್ಯಾಕೆ?

ನೀರಿಲ್ಲದ ಬಾವಿಗೆ ಅರ್ಜುನ್ ಜನ್ಯ ಬಿದ್ದಿದ್ಯಾಕೆ?

Posted By:
Subscribe to Filmibeat Kannada

ಕನ್ನಡದ ಸ್ಟಾರ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನೋಡಲು ತುಂಬಾ ಸಾಫ್ಟ್ ಆಗಿ, ಒಳ್ಳೆ ಚಾಕಲೆಟ್ ಹೀರೋ ಥರ ಇದ್ದಾರೆ. ಆದ್ರೆ, ಅವರು ಚಿಕ್ಕವಯಸ್ಸಿನಲ್ಲಿ ಹೇಗಿದ್ರು ಅಂತ ಯಾರಿಗೂ ಗೊತ್ತಿಲ್ಲ. ಜನ್ಯಗೆ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟವಂತೆ. ಕ್ರಿಕೆಟ್ ಆಟಕ್ಕಾಗಿ ಸಖತ್ ರಿಸ್ಕ್ ತಗೊಳ್ತಿದ್ರಂತೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಒಮ್ಮೆ ನೀರಿಲ್ಲದ ಬಾವಿಗೆ ಅರ್ಜುನ್ ಜನ್ಯ ಬಿದ್ದಿದ್ದರಂತೆ.['ಲೋಕೇಶ್ ಕುಮಾರ್'ಗೆ ಅರ್ಜುನ್ ಎಂದು ಹೆಸರಿಟ್ಟಿದ್ದು ಒಬ್ಬ ಸಾಹಿತಿ!]

ಇದು ಸಿರಿಯಸ್ ಎನಿಸಿದ್ರು ಒಂದು ಇಂಟ್ರೆಸ್ಟಿಂಗ್ ಕಥೆ. ಅರ್ಜುನ್ ಜನ್ಯ ಅವರು ಬಾವಿಗೆ ಬಿದ್ದ ಕಥೆಯನ್ನ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅವರ ಸಹೋದರ ಕಿರಣ್ ಬಿಚ್ಚಿಟ್ಟರು. ಮುಂದೆ ಓದಿ.....

ಅತಿಥಿಯಾಗಿ ಬಂದ ಅರ್ಜುನ್ ಸಹೋದರ

'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದ ಅರ್ಜುನ್ ಜನ್ಯ ಅವರ ಎಪಿಸೋಡ್ ಗೆ ಅರ್ಜುನ್ ಅವರ ಸಹೋದರ ಕಿರಣ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಸಾಕಷ್ಟು ನೆನಪುಗಳನ್ನ ಹಂಚಿಕೊಂಡರು.[ಅರ್ಜುನ್ ಜನ್ಯ 'ಸಂಗೀತ ಲೋಕ'ಕ್ಕೆ ಬರಲು ಬಲವಾದ ಕಾರಣ ಏನು?]

ಅಣ್ಣನ ಜೊತೆಯಲ್ಲಿ ಕ್ರಿಕೆಟ್ ಆಡುತ್ತಿದ್ದರು!

ಅರ್ಜುನ್ ಜನ್ಯ ಅವರ ಮನೆ ಎದುರುಗಡೆ ಜಾಗ ಇತ್ತು. ಅದನ್ನ ಆಟದ ಮೈದಾನ ಮಾಡಿಕೊಂಡು ಕ್ರಿಕೆಟ್ ಆಡುತ್ತಿದ್ದರು. ಅಲ್ಲೊಂದು ಬಾವಿ ಯಿತ್ತು. ಆ ಬಾವಿಗೆ ಬಾಲ್ ಬೀಳುತ್ತಿತ್ತು. ಆಗ ಅರ್ಜುನ್ ಜನ್ಯ ಅವರನ್ನ ಬಾವಿಯಲ್ಲಿ ಇಳಿಸುತ್ತಿದ್ದರಂತೆ.

ಬಕೆಟ್ ನಲ್ಲಿ ಕೂರಿಸಿ ಬಾವಿಗೆ ಇಳಿಸುತ್ತಿದ್ದರು!

ಬಾವಿಗೆ ಬಿದ್ದ ಕ್ರಿಕೆಟ್ ಬಾಲನ್ನು ಎತ್ತಲು ಗೆಳಯರೆಲ್ಲ ಸೇರಿ, ಬಕೆಟ್ ನಲ್ಲಿ ಕೂರಿಸಿ ಅರ್ಜುನ್ ಜನ್ಯ ಅವರಿಗೆ ಹಗ್ಗ ಕಟ್ಟಿ ಬಾವಿಗೆ ಇಳಿಸುತ್ತಿದ್ದರಂತೆ.

ಹಗ್ಗ ಕಟ್ಟಾಗಿ ಬಾವಿಗೆ ಬಿದ್ದಿದ್ದರು

ಬಕೆಟ್ ನಲ್ಲಿ ಕಟ್ಟಿ ಅರ್ಜುನ್ ಅವರನ್ನ ಇಳಿಸುವಾಗ ಹಗ್ಗ ಕಟ್ಟಾಗಿ ಬಾವಿಗೆ ಬಿದ್ದಿದ್ದರಂತೆ. ಆದ್ರೆ, ಆ ಬಾವಿಯಲ್ಲಿ ನೀರು ಇರಲಿಲ್ಲವೆಂಬುದು ಖುಷಿಯ ವಿಚಾರ.

ಹಗ್ಗ ಕೊಟ್ಟು ಮತ್ತೆ ಮೇಲಕ್ಕೆ ಬಂದಿದ್ದರು

ಬಾವಿಗೆ ಬಿದ್ದಿದ್ದ ಜನ್ಯ ಅವರನ್ನ ಸ್ನೇಹಿತರೆಲ್ಲ ಸೇರಿ ಮತ್ತೆ ಹಗ್ಗ ಕೊಟ್ಟು ಮೇಲೆಕ್ಕತ್ತಿದ್ದರಂತೆ.

English summary
Weekend With Ramesh : Music Director Arjun Janya Shares Memories with Brother

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada