»   » ಈ ವಾರದ 'ವೀಕೆಂಡ್' ಅತಿಥಿ ರಂಗಭೂಮಿ ಕಲಾವಿದೆ 'ಬಿ.ಜಯಶ್ರೀ'

ಈ ವಾರದ 'ವೀಕೆಂಡ್' ಅತಿಥಿ ರಂಗಭೂಮಿ ಕಲಾವಿದೆ 'ಬಿ.ಜಯಶ್ರೀ'

Posted By:
Subscribe to Filmibeat Kannada

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಈ ವಾರದ ಅತಿಥಿ ಯಾರು ಎಂಬ ಬಗ್ಗೆ ದೊಡ್ಡ ಕುತೂಹಲವಿತ್ತು. ಈ ಕುತೂಹಲಕ್ಕೀಗ ತೆರೆ ಬಿದ್ದಿದ್ದು, ಈ ವಾರದ ಸಾಧಕರು ಯಾರು ಎಂಬುದನ್ನು 'ಜೀ ಕನ್ನಡ' ವಾಹಿನಿ ಬಹಿರಂಗಗೊಳಿಸಿದೆ. ಅಂದ್ಹಾಗೆ, ಈ ವಾರ ಸಾಧಕರ ಸೀಟ್ ನಲ್ಲಿ ಹಿರಿಯ ರಂಗಭೂಮಿ ಕಲಾವಿದೆ ಬಿ.ಜಯ ಶ್ರೀ ಅವರು ಕುಳಿತುಕೊಳ್ಳಲಿದ್ದಾರೆ.

ಶನಿವಾರದ ಸಂಚಿಕೆಯಲ್ಲಿ ಬಿ.ಜಯ ಶ್ರೀ ಮತ್ತು ಭಾನುವಾರದ ಸಂಚಿಕೆಯಲ್ಲಿ ವಿಜಯ ಸಂಕೇಶ್ವರ್ ರವರು ಅತಿಥಿಯಾಗಿ ಭಾಗವಹಿಸಿದ್ದಾರೆ. ಇದೀಗ ಬಿ.ಜಯ ಶ್ರೀ ಅವರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಪ್ರೋಮೋ ರಿಲೀಸ್ ಆಗಿದೆ.[ಸಾಧಕರ ಸೀಟ್ ಮೇಲೆ ಕೂರಲು ವಿಜಯ್ ರಾಘವೇಂದ್ರ ಅರ್ಹರೇ.?]

B.Jayashree in Weekend with Ramesh-3

ಬಿ.ಜಯಶ್ರೀ ಅವರು ರಂಗಭೂಮಿಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ನಟಿ ಹಾಗೂ ಗಾಯಕಿಯಾಗಿ ದೊಡ್ಡ ಹೆಸರು ಮಾಡಿದ್ದಾರೆ. ಇನ್ನು ಭಾರತ ಸರ್ಕಾರ ಅವರ ಸಾಧನೆಯನ್ನು ಗುರುತಿಸಿ 2013ರಲ್ಲಿ'ಪದ್ಮಶ್ರೀ' ಪ್ರಶಸ್ತಿ ಸಹ ನೀಡಿ ಗೌರವಿಸಿದೆ.[ಯಾರು ಎಷ್ಟೇ ಹೇಳಿದ್ರೂ, 'ವೀಕೆಂಡ್ ವಿತ್ ರಮೇಶ್' ಬಗ್ಗೆ ವೀಕ್ಷಕರ ಕೋಪ ಕಮ್ಮಿ ಆಗ್ತಿಲ್ಲ.!]

B.Jayashree in Weekend with Ramesh-3

ಬಿ.ಜಯ ಶ್ರೀ ಅವರನ್ನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಕರೆಸಿರುವ ಬಗ್ಗೆ ಅನೇಕರು ಫೇಸ್ ಬುಕ್ ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಇಡೀ ರಂಗಭೂಮಿಗೆ ನೀಡಿದ ಗೌರವ ಎಂದು ಅಭಿಪ್ರಾಯ ಪಟ್ಟಿದ್ದಾರೆ.

English summary
Kannada Theatre Actor, Director and Singer B.Jayashree in Zee Kannada Channel's popular show Weekend with Ramesh-3

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada