For Quick Alerts
  ALLOW NOTIFICATIONS  
  For Daily Alerts

  ಸುವರ್ಣ ಧಾರಾವಾಹಿಯಲ್ಲಿ ಅನ್ನಪೂರ್ಣೆಯಾಗಿ ಭಾರತಿ

  |

  ದಿವಂಗತ ವಿಷ್ಣುವರ್ಧನ್ ಅವರ ಧರ್ಮಪತ್ನಿ ಭಾರತಿ ವಿಷ್ಣುವರ್ಧನ್ ಇನ್ಮುಂದೆ ಶ್ರೀಮತಿ ದೇವಿ ಅನ್ನಪೂರ್ಣೇಶ್ವರಿಯಾಗಿ ಬದಲಾಗಲಿದ್ದಾರೆ. ಇದೇನಪ್ಪಾ.. ಅಚ್ಚರಿ, ಈಗೇಕೆ ಭಾರತಿ ಮೇಡಂ ತಮ್ಮ ಹೆಸರನ್ನು ಅನ್ನಪೂರ್ಣೇಶ್ವರಿ ಎಂದು ಬದಲಾಯಿಸಿಕೊಂಡರು ಎಂದು ದಿಗಿಲುಗೊಳ್ಳ ಬೇಡಿ. point to be noted.. ಈ ಬದಲಾವಣೆ ಅವರ ನಿಜ ಬದುಕಿನಲ್ಲ.

  ಇದು ಧಾರವಾಹಿಯೊಂದಕ್ಕೆ ಭಾರತಿ ನಿರ್ವಹಿಸುತ್ತಿರುವ ಪಾತ್ರವೊಂದರ ಹೆಸರು. ಸುವರ್ಣವಾಹಿನಿ ಒಂದರ ಹಿಂದೊಂದು ಧಾರವಾಹಿಗಳನ್ನು ಆರಂಭಿಸುತ್ತಿದೆ. ಅದರಲ್ಲಿ 'ಭಾಗ್ಯವಂತರು' ಕೂಡಾ ಒಂದು. ಇದೇ ತಿಂಗಳು 30ನೇ ತಾರೀಕಿನಿಂದ ಸೋಮವಾರದಿಂದ ಶುಕ್ರವಾರದ ವರೆಗೆ ಪ್ರತಿರಾತ್ರಿ 9ಗಂಟೆಗೆ ಪ್ರಸಾರ ಕಾಣಲಿರುವ ಈ ಧಾರಾವಾಹಿಯ ವಿಶೇಷತೆ ಏನಂದರೆ ಭಾರತಿ ವಿಷ್ಣುವರ್ಧನ್.

  ಈ ಮೊದಲು ಜನನಿ ಎಂಬ ಧಾರವಾಹಿ ಮೂಲಕ ಕಿರುತೆರೆ ಪ್ರವೇಶಿಸಿದ್ದ ಭಾರತಿ, ಮುಕ್ತ ಮುಕ್ತದ ನಂತರ ಮತ್ತೊಮ್ಮೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಧಾರಾವಾಹಿಯಲ್ಲಿ ಅವರು ದೇವಿ ಅನ್ನಪೂರ್ಣೇಶ್ವರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ತಮ್ಮ ಜೊತೆ ಯಜಮಾನರ ಖ್ಯಾತಿಯನ್ನು ಹೊತ್ತು ತಂದಿದ್ದಾರೆ.

  ದಿ. ವಿಷ್ಣುವರ್ಧನ್ ಅವರಿಗೆ ರಾಜ್ಯಾದ್ಯಂತ ಅಪಾರ ಅಭಿಮಾನಿ ಬಳಗವಿದೆ. ವಿಷ್ಣು ಇವತ್ತು ನಮ್ಮಿಂದ ದೂರವಾಗಿದ್ದರೂ ಅವರ ನೆನಪುಗಳಿಂದ, ಅವರ ಸಿನಿಮಾಗಳಿಂದ ಜನಮಾನಸದಲ್ಲಿ ಸದಾ ಹಸಿರು. ಭಾರತಿ ಭಾಗ್ಯವಂತರು ಧಾರಾವಾಹಿಯಲ್ಲಿ ವಿಷ್ಣು ಪತ್ನಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  ವಿಷ್ಣುವರ್ಧನ್ ಅಭಿನಯಿಸಿದ 'ಸಿಂಹಾದ್ರಿಯ ಸಿಂಹ'ದಲ್ಲಿ ವಿಷ್ಣು ಅವರದ್ದು ವಿಶಿಷ್ಟ ಜಮೀನ್ದಾರಿ ಗೆಟಪ್ ಇತ್ತು. ಸಿನಿಮಾ ಪ್ರೇಕ್ಷಕರು ಅದನ್ನು ಅಪಾರವಾಗಿ ಮೆಚ್ಚಿದ ಚಿತ್ರ ಭರ್ಜರಿ ಜಯಭೇರಿ ಬಾರಿಸಿತ್ತು. ಈಗ ಅದೇ ಗೆಟಪ್ ನ ದೊಡ್ಡ ಒಂದು ಭಾವಚಿತ್ರ ಭಾರತಿ ಅಭಿನಯಿಸುತ್ತಿರುವ ಭಾಗ್ಯವಂತರು ಧಾರಾವಾಹಿಯ ಹಿನ್ನಲೆಯಲ್ಲಿ ಕಾಣಿಸಿಕೊಳ್ಳಲಿದೆ.

  ಗತಿಸಿಹೋದ ಯಜಮಾನರ ವಂಶದ ಕೀರ್ತಿ ಉಳಿಸಿ ಬೆಳೆಸುವ ಕಾರ್ಯ ಮಾಡುವ ಶ್ರೀಮಂತ ಮನೆತನದ ದೇವಿ ಅನ್ನಪೂರ್ಣೇಶ್ವರಿಯಾಗಿ ಭಾರತಿ ಮೇಡಂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಜೊತೆ ವಿಷ್ಣು ಭಾವಚಿತ್ರವೂ ಕಾಣಸಿಕ್ಕಿದರೆ ಧಾರಾವಾಹಿಗೆ ಮತ್ತಷ್ಟು ಮೆರುಗು, ಜನಪ್ರಿಯತೆ ದೊರೆಯುತ್ತದೆ ಎನ್ನುವುದು ಭಾಗ್ಯವಂತರು ತಂಡದ ಲೆಕ್ಕಾಚಾರ.

  ಈ ಧಾರಾವಾಹಿಯ ನೆಪದಲ್ಲಿ ಸಿಂಹಾದ್ರಿಯ ಸಿಂಹ ವಿಷ್ಣುವರ್ಧನ್ ಭಾವಚಿತ್ರ ಮತ್ತು ಅವರ ಧರ್ಮಪತ್ನಿ ಭಾರತಿಯವರ ಅಭಿನಯ ಎರಡನ್ನೂ ಕಿರುತೆರೆ ಪ್ರೇಕ್ಷಕರು ಆಸ್ವಾದಿಸಬಹುದು.

  English summary
  Bharati Vishnuvardhan again acting in TV serial. The serial titled Bhagyavantaru starting from July 30 onwards in Suvarna TV

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X