ಬಿಗ್ ಬಾಸ್ ಅಶ್ವಿನಿ ಗೌಡ ಹೆಸರು ವಿನೋದ್ ರಾಜ್ ಜೊತೆ ಲಿಂಕ್ ಆಗಿದ್ದೇಕೆ? ಇಬ್ಬರ ಈ ಫೋಟೋದ ಅಸಲಿಯತ್ತೇನು?

ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭದ ವಿಘ್ನದ ನಡುವೆ ಮತ್ತೆ ಶುರುವಾಗಿದೆ. ಚಿಕ್ಕದೊಂದು ಗ್ಯಾಪ್‌ನ ಬಳಿಕ ಬಿಗ್ ಬಾಸ್ ಮನೆ ರಣರಂಗವಾಗಿದೆ. ಈಗಾಗಲೇ ಮನೆಯೊಳಗೆ ಇರುವ 17 ಮಂದಿ ಸ್ಪರ್ಧಿಗಳಲ್ಲಿ ಅಶ್ವಿನಿ ಗೌಡ ಸ್ಟ್ರಾಂಗ್ ಸ್ಪರ್ಧಿ ಅಂತ ಅನ್ನೋ ಭರವಸೆಯನ್ನು ಕೊಟ್ಟಿದ್ದಾರೆ. ಮನೆಯನ್ನು ಬಹುತೇಕ ತನ್ನ ಕಂಟ್ರೋಲ್‌ಗೆ ತೆಗೆದುಕೊಂಡಿದ್ದಾರೆ. ಆರಂಭದಲ್ಲಿಯೇ ಅಶ್ವಿನಿ ಗೌಡ ಗಿಲ್ಲಿ ನಟನೊಂದಿಗೆ ವಾಗ್ಯುದ್ಧಕ್ಕೆ ಇಳಿದಿದ್ದರು. ಅಲ್ಲಿಂದ ಮನೆಯೊಳಗೆ ಅಶ್ವಿನಿ ಗೌಡ ಡಾಮಿನೇಷನ್ ಎದ್ದು ಕಾಣುತ್ತಿದೆ.

ಅಶ್ವಿನಿ ಗೌಡ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ ಅವರ ಜೀವನದ ಕುರಿತು ಒಂದೊಂದು ಇಂಟ್ರೆಸ್ಟಿಂಗ್‌ ಸ್ಟೋರಿಗಳು ಹೊರಬರುತ್ತಿವೆ. ಅಶ್ವಿನಿ ಗೌಡ ಮದುವೆ, ವಿಚ್ಚೇದನದಿಂದ ಹಿಡಿದು, ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇಗೆ? ಅನ್ನೋದು ಚರ್ಚೆಯಾಗುತ್ತಿದೆ. ಇದೇ ವೇಳೆ ಹಿರಿಯ ನಟ ವಿನೋದ್ ರಾಜ್ ಅವರೊಂದಿಗೆ ಅಶ್ವಿನಿ ಗೌಡ ಹೆಸರು ತಳುಕು ಹಾಕಿಕೊಂಡಿದ್ದ ಸಂಗತಿಯನ್ನು ರಿವೀಲ್ ಮಾಡಿದ್ದಾರೆ.

Bigg Boss Kannada 12 Ashwini Gowda name linked with Vinod Raj long back photo also went viral

ಹೌದು, ಅಶ್ವಿನಿ ಗೌಡ ಬಿಗ್ ಬಾಸ್ ಮನೆ ಸೇರುತ್ತಿದ್ದಂತೆ ಮತ್ತೆ ಅವರ ಸುತ್ತ ಸುತ್ತಿಕೊಂಡಿದ್ದ ವಿವಾದಗಳನ್ನು ರಿಕಾಲ್ ಮಾಡಲಾಗುತ್ತಿದೆ. ರಘುರಾಮ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಅಶ್ವಿನಿ ಗೌಡ ಈ ವಿವಾದವನ್ನು ನೆನಪಿಸಿಕೊಂಡಿದ್ದರು. ವಿನೋದ್ ರಾಜ್ ಜೊತೆ ತನ್ನ ಹೆಸರು ಹೇಗೆ ತಳುಕು ಹಾಕಿಕೊಂಡಿತ್ತು. ಅನ್ನೋದನ್ನು ರಿವೀಲ್ ಮಾಡಿದ್ದರು. ಅಷ್ಟೇ ಅಲ್ಲದೆ ಇಬ್ಬರ ಫೋಟೋ ಬಗ್ಗೆನೂ ಕ್ಲಾರಿಟಿ ಕೊಟ್ಟಿದ್ದರು.

ಇದೇ ಸಂದರ್ಶನದಲ್ಲಿ 17ನೇ ವರ್ಷಕ್ಕೆ ಮದುವೆ ಆಗಿದ್ದ ವಿಷಯವನ್ನೂ ರಿವೀಲ್ ಮಾಡಿದ್ದಾರೆ. ಇಬ್ಬರೂ ಬೇರೆಯಾಗಿದ್ದರೂ, ಎರಡೂ ಕುಟುಂಬಗಳಿಗೆ ಮಗನೇ ಸೇತುವೆಯಾಗಿದ್ದಾರೆಂದು ಹೇಳಿಕೊಂಡಿದ್ದಾರೆ. ಎರಡೂ ಕುಟುಂಬಗಳು ತನ್ನ ಮಗನನ್ನು ತುಂಬಾನೇ ಪ್ರೀತಿ ಮಾಡುತ್ತೆ ಎಂದಿದ್ದರು. ತನಗಿಂತ ಹೆಚ್ಚಾಗಿ ತಂದೆ-ಮಗ ಇಬ್ಬರೂ ಕ್ಲೋಸ್ ಫ್ರೆಂಡ್ ಆಗಿದ್ದಾರೆ. ಹಾಗೇ ಮಗನನ್ನು ಸದ್ಯಕ್ಕೆ ಚಿತ್ರರಂಗಕ್ಕೆ ಕರೆದುಕೊಂಡು ಬರುವ ಉದ್ದೇಶವಿಲ್ಲ ಎಂದೂ ಹೇಳಿಕೊಂಡಿದ್ದರು.

ಮದುವೆ ಬಳಿಕ ಅವರಿಗೆ ಮಗ ಜನಿಸಿದ್ದ. ಆಗ ಮಗನಿಗೆ ಕೇವಲ 8 ತಿಂಗಳು. ಜೀವನದಲ್ಲಿ ಏನಾದರೂ ಮಾಡಬೇಕು ಅನ್ನೋ ಹಂಬಲವಿತ್ತು. ಹೀಗಾಗಿ ಶೇಷಾದ್ರಿಪುರಂನಲ್ಲಿದ್ದ ಇನ್‌ಸ್ಟಿಟ್ಯೂಟ್ ಒಂದರಲ್ಲಿ ಫಿಲ್ಮ್‌ ಡೈರೆಕ್ಷನ್ ಕೋರ್ಸ್‌ಗೆ ಸೇರಿಕೊಂಡಿದ್ದರು. ಅಲ್ಲಿ 40 ಜನ ಹುಡುಗರಿದ್ದರು. ಇವರು ಒಬ್ಬರೇ ಮಹಿಳೆ. ಇಲ್ಲಿಂದ ಸಿನಿಮಾ ಇಂಡಸ್ಟ್ರಿ ಕಡೆ ಅವರ ಪಯಣ ಮುಂದುವರೆದಿತ್ತು. ಈ ವೇಳೆ ಇವರೊಂದಿಗೆ ಒಂದೊಂದೇ ವಿವಾದ, ಗಾಳಿ ಸುದ್ದಿಗಳು ಅಂಟಿಕೊಂಡಿದ್ದವು. ಅದರಲ್ಲೊಂದು ವಿನೋದ್ ರಾಜ್ ಜೊತೆಗಿನ ಮ್ಯಾಟರ್ ಕೂಡ ಒಂದು.

Bigg Boss Kannada 12 Ashwini Gowda name linked with Vinod Raj long back photo also went viral

"ಅದೇನು ಮಾಡಿದ್ರು ಅಂದರೆ, ನಮ್ಮ'ಯಾರದು' ಸಿನಿಮಾದ ಹಾಡಿನ ಸ್ಟಿಲ್ ತೆಗೆದುಕೊಂಡಿದ್ದಾರೆ. ಅದರಲ್ಲಿ ಅವರು ನನ್ನನ್ನು ಅಪ್ಪಿಕೊಂಡಿರುವ ಸ್ಟಿಲ್ ಅದು. ಕ್ಯಾಪ್ಷನ್‌ನಲ್ಲಿ ಮಾತ್ರ ವಿನೋದ್ ರಾಜ್‌ ಅವರು ಇಷ್ಟು ವರ್ಷ ಆದರೂ ಯಾಕೆ ಮದುವೆ ಆಗಿಲ್ಲ ಅಂತ ಕೊಟ್ಟಿದ್ದಾರೆ. ಯಾರೇ ಆದರೂ ಆ ಕ್ಯೂರಿಯಾಸಿಟಿಗೆ ಓಪನ್ ಮಾಡಿ ನೋಡಿಯೇ ನೋಡುತ್ತಾರೆ. ಮುಂದೆ ನೋಡ್ತಾ ನೋಡ್ತಾ ಇದು ಸಿನಿಮಾದ ಒಂದು ಸ್ಟಿಲ್ ಅನ್ನೋದು ಗೊತ್ತಾಗಿದೆ. ಹೀಗೆ ನನ್ನ ಬಗ್ಗೆ ಏನೂ ಮಾಡದೇನೆ ವಿವಾದವನ್ನು ಸೃಷ್ಠಿ ಮಾಡಿದ್ದರು." ಎಂದು ಅಶ್ವಿನಿ ಗೌಡ ಕ್ಲಾರಿಟಿ ಕೊಟ್ಟಿದ್ದರು.

ಅಶ್ವಿನಿ ಗೌಡ ಚಿತ್ರರಂಗಕ್ಕೆ ಬಂದ್ಮೇಲೆ ಇನ್ನೊಂದು ಟೀಕೆಗೆ ಗುರಿಯಾಗಿದ್ದರು. ಮದುವೆಯಾಗಿ ಮಗು ಇರುವ ನಟಿ ಮೂರನೇ ಕ್ಲಾಸ್ ಮಂಜದಲ್ಲಿ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆಂದು ಹೀಯಾಳಿದಿದ್ದರು. ಆ ಸಮಯ ತನ್ನ ಕುಟುಂಬ ಹೇಗೆ ಬೆಂಬಲ ನೀಡಿತ್ತು ಅನ್ನೋದನ್ನು ರಿವೀಲ್ ಮಾಡಿದ್ದಾರೆ. 'ಮೂರನೇ ಕ್ಲಾಸ್ ಮಂಜ' ಸಿನಿಮಾ ಬೋಲ್ಡ್ ಸೀನ್ಸ್ ಇತ್ತು. ಅದಾಗಲೇ ಮದುವೆ ಆಗಿತ್ತು. ಆ ದೃಶ್ಯಗಳಲ್ಲಿ ನಟಿಸಿದಾಗ ಮನೆಯವರ ರಿಯಾಕ್ಷನ್ ಹೇಗಿತ್ತು? ಅನ್ನೋದನ್ನು ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. "ನಾವು ಚಿತ್ರರಂಗಕ್ಕೆ ಬರುತ್ತೇವೆ ಎಂದಾಗ ಕುಟುಂಬ ಬೆಂಬಲ ತುಂಬಾನೇ ಬೇಕಾಗುತ್ತೆ. ಪುರುಷರಿಗೇ ಆಗಬಹುದು. ಮಹಿಳೆಯರಿಗೇ ಆಗಬಹುದು. ಎಂಡ್‌ ಆಫ್ ದಿ ಡೇ ಎಲ್ಲಾ ಮುಗಿಸಿ ನಾವು ಮನೆಗೆ ಹೋದಾಗ ನೆಮ್ಮದಿ ಇರಬೇಕು. ಈ ಫೀಲ್ಡ್‌ಗೆ ಬಂದಾಗ ಎಲ್ಲಾ ವಿವಾದಗಳು ಬರುತ್ತವೆ ಅನ್ನೋದು ಗೊತ್ತಿದೆ. ನನಗೆ ಏನೂ ಆಗಿಲ್ಲ ಯಾಕೆ ಅಂದರೆ, ನಾನು ಎಲ್ಲವನ್ನೂ ಹೇಳುತ್ತಿದ್ದೆ. ನಾನು ಮದುವೆ ಆಗಿದ್ದ ಕುಟುಂಬ ತುಂಬಾನೇ ಬ್ರಾಡ್‌ ಮೈಂಡ್ ಇದ್ದವರಾಗಿದ್ದರು. ನನ್ನ ತಂದೆ-ತಾಯಿ ಆಗಿದ್ದರೂ ನನ್ನನ್ನು ಸ್ಟಾಪ್ ಮಾಡುತ್ತಿದ್ದರು. ಆದರೆ, ನನ್ನ ಗಂಡನ ಕುಟುಂಬ ಪ್ರೋತ್ಸಾಹ ಕೊಡುತ್ತಿದ್ದರು" ಎಂದಿದ್ದಾರೆ.

More from Filmibeat

English summary
Bigg Boss Kannada 12 Ashwini Gowda name linked with Vinod Raj long back photo also went viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X