For Quick Alerts
  ALLOW NOTIFICATIONS  
  For Daily Alerts

  BBK9 Grand Finale: ಪ್ರಬಲ ಪೈಪೋಟಿಯಲ್ಲಿ ಬಿಗ್ ಬಾಸ್ ಸೀಸನ್ 9 ಅನ್ನು ಗೆದ್ದ ರೂಪೇಶ್ ಶೆಟ್ಟಿ!

  |

  ಬಿಗ್ ಬಾಸ್ ಕನ್ನಡ ಸೀಸನ್‌ 9 ಯಶಸ್ವಿಯಾಗಿ ಮುಗಿದಿದೆ. 18 ಮಂದಿ ಸ್ಪರ್ಧಿಗಳ ನಡುವೆ ಟಫ್ ಕಾಂಪಿಟೇಷನ್‌ ಕೊಟ್ಟು ಬಿಗ್ ಬಾಸ್ ಮನೆಯಲ್ಲಿ ಕೊನೆಗೆ ಐದು ಮಂದಿ ಉಳಿದುಕೊಂಡಿದ್ದರು. ಕೊನೆಯ ಐವರು ಮಂದಿಯಲ್ಲಿ ಗೆಲ್ಲೋದ್ಯಾರು? ಅನ್ನೋದು ಕುತೂಹಲ ಘಟ್ಟಕ್ಕೇರಿತ್ತು.

  ಐವರು ಮಂದಿಯಲ್ಲಿ ಮೊದಲು ದಿವ್ಯಾ ಉರುಡುಗ ಎಲಿಮಿನೇಟ್ ಆದರು. ಉಳಿದ ನಾಲ್ಕು ಮಂದಿಗಳಲ್ಲಿ ಕೊನೆಯಲ್ಲಿ ಉಳಿದುಕೊಂಡವರು ರಾಕೇಶ್ ಅಡಿಗ ಹಾಗೂ ರೂಪೇಶ್ ಶೆಟ್ಟಿ. ಇವರಿಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ರಾಕೇಶ್ ಅಡಿಗವನ್ನು ಹಿಂದಿಕ್ಕಿ ಬಿಗ್ ಬಾಸ್ ಕಿರೀಟವನ್ನು ರೂಪೇಶ್ ಶೆಟ್ಟಿ ಮುಡಿಗೇರಿಸಿಕೊಂಡಿದ್ದಾರೆ.

  ರೂಪೇಶ್ ಶೆಟ್ಟಿ ಬಿಗ್ ಬಾಸ್ ವಿನ್ನರ್

  ರೂಪೇಶ್ ಶೆಟ್ಟಿ ಬಿಗ್ ಬಾಸ್ ವಿನ್ನರ್

  ರೂಪೇಶ್ ಶೆಟ್ಟಿ ಓಟಿಟಿಯಿಂದ ಇಲ್ಲಿವರೆಗೂ ಜರ್ನಿಯನ್ನು ಮುಂದುವರೆಸಿಕೊಂಡು ಬಂದಿದ್ದರು. ಆರಂಭದಿಂದಲೂ ರೂಪೇಶ್ ಶೆಟ್ಟಿ ಫುಲ್ ಆಕ್ಟಿವ್ ಆಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಏರಿಳಿತಗಳನ್ನು ಕಂಡಿದ್ದರು. ಟಾಸ್ಕ್‌ನಲ್ಲಿ ಗೆದ್ದು ಬೀಗಿದ್ದರು. ಸೋತು ಸೆಪ್ಪೆಯಾಗಿದ್ದರು. ಏನೇ ಇದ್ದರೂ ಮತ್ತೆ ಚೇತರಿಸಿಕೊಂಡು ಆಟದಲ್ಲಿ ಭಾಗಿಯಾಗಿದ್ದರು. ಈಗ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿ ಮನೆಯಿಂದ ಹೊರಬಂದಿದ್ದಾರೆ.

  ಎರಡರಲ್ಲೂ ರೂಪೇಶ್ ವಿನ್ನರ್

  ಎರಡರಲ್ಲೂ ರೂಪೇಶ್ ವಿನ್ನರ್

  ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಜೋಡಿ ಓಟಿಟಿ ಹಾಗೂ ಸೀಸನ್ 9 ಎರಡರಲ್ಲೂ ಗಮನ ಸೆಳೆದಿತ್ತು. ಸಾನ್ಯಾ ಹೊರ ಹೋಗುತ್ತಿದ್ದಂತೆ ರೂಪೇಶ್ ಶೆಟ್ಟಿ ಡಲ್ ಆಗಬಹುದು ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ, ಆ ಎಲ್ಲಾ ಊಹೆಗಳನ್ನೂ ತಪ್ಪು ಎಂದು ಸಾಬೀತು ಮಾಡಿದ್ದರು. ರಾಕೇಶ್ ಅಡಿಗಗೆ ಓಟಿಟಿ ಹಾಗೂ ಸೀಸನ್ 9 ಎರಡರಲ್ಲೂ ರೂಪೇಶ್ ಶೆಟ್ಟಿ ಪೈಪೋಟಿ ನೀಡಿರೋದು ವಿಶೇಷ. ಕರಾವಳಿ ಭಾಗದ ಪ್ರತಿಭೆ ಎರಡೂ ಪ್ರಕಾರಗಳಲ್ಲೂ ಗೆದ್ದು ಬೀಗಿದ್ದಾರೆ.

  ರೂಪೇಶ್ ಶೆಟ್ಟಿಗೆ ಸಿಗುವ ಹಣವೆಷ್ಟು?

  ರೂಪೇಶ್ ಶೆಟ್ಟಿಗೆ ಸಿಗುವ ಹಣವೆಷ್ಟು?


  ರೂಪೇಶ್ ಶೆಟ್ಟಿ ಬಿಗ್ ಬಾಸ್ ಗೆದ್ದಿದ್ದಕ್ಕೆ 60 ಲಕ್ಷ ರೂಪಾಯಿ ಅವರ ಪಾಲಾಗಿದೆ. 50 ಲಕ್ಷ ರೂಪಾಯಿ ಬಿಗ್ ಬಾಸ್ ಕಡೆಯಿಂದ ಹಾಗೂ 10 ಲಕ್ಷ ರೂಪಾಯಿ ವಿಶೇಷ ಸ್ಪಾನ್ಸರ್ಸ್‌ನಿಂದ ಸಿಕ್ಕಿದೆ. ಆದರೆ, ಶೇ.30ರಷ್ಟು ತೆರಿಗೆ ಹಣ ಕಡಿತಗೊಂಡು 42 ಲಕ್ಷ ರೂಪಾಯಿ ರೂಪೇಶ್ ಶೆಟ್ಟಿ ಜೇಬು ಸೇರಲಿದೆ. ಇದು ಕೂಡ ದೊಡ್ಡ ಮೊತ್ತವೇ. ಸೀಸನ್ ಉದ್ದಕ್ಕೂ ತಾಳ್ಮೆಯನ್ನೇ ಪ್ರದರ್ಶಿಸಿದ್ದ ರಾಕೇಶ್‌ ಅಡಿಗಗೆ ಕೊಂಚ ಹಿನ್ನೆಡೆಯಾಗಿದೆ.

  ರೂಪೇಶ್ ಸಿನಿಮಾ ರಿಲೀಸ್

  ರೂಪೇಶ್ ಸಿನಿಮಾ ರಿಲೀಸ್

  ಬಿಗ್ ಬಾಸ್ ಕನ್ನಡ ಓಟಿಟಿಯಿಂದಲೂ ರೂಪೇಶ್ ಶೆಟ್ಟಿ ಗಮನ ಸೆಳೆದಿದ್ದರು. ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುವುದಕ್ಕೂ ಮುನ್ನ ಸಿನಿಮಾವೊಂದರಲ್ಲಿ ನಟಿಸಿದ್ದರು. ಅದೇ 'ಮಂಕು ಭಾಯ್ ಫಾಕ್ಸಿ ರಾಣಿ'. ಈ ಸಿನಿಮಾ ರೂಪೇಶ್ ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೇ ಪ್ರಚಾರವನ್ನು ಶುರುಮಾಡಿತ್ತು. ಬಿಗ್‌ಬಾಸ್ ಪ್ರವೇಶ ಮಾಡಿದ ಬಳಿಕ ಜನಪ್ರಿಯತೆ ಸಿಕ್ಕಿದ್ದು, ಸಿನಿಮಾ ಬಿಡುಗಡೆಯಲ್ಲಿ ಭಾಗಿಯಾಗಲಿದ್ದಾರೆ.

  English summary
  Bigg Boss Kannada 9 Grand Finale: Roopesh Shetty Announced As Winner, Know More.
  Saturday, December 31, 2022, 23:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X