»   » ಬಿಗ್ ಬಾಸ್ ಸೀಸನ್ 2 : ಪ್ರಸಾರದ ದಿನಾಂಕ ಬದಲು

ಬಿಗ್ ಬಾಸ್ ಸೀಸನ್ 2 : ಪ್ರಸಾರದ ದಿನಾಂಕ ಬದಲು

Posted By:
Subscribe to Filmibeat Kannada

ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ಬಿಗ್ ಬಾಸ್ ಸೀಸನ್ 2 ರಿಯಾಲಿಟಿ ಶೋ ಈ ಹಿಂದೆ ಪ್ರಕಟವಾದಂತೆ ಜೂನ್ 22ರಂದು ಆರಂಭವಾಗುತ್ತಿಲ್ಲ. ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಕನ್ನಡದ ಒನ್ ಅಂಡ್ ಓನ್ಲಿ ರಿಯಾಲಿಟಿ ಶೋ ಒಂದು ವಾರದ ನಂತರ ಆರಂಭವಾಗುತ್ತಿದೆ.

ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರುವ ಬಿಗ್ ಬಾಸ್ ಸೀಸನ್ 2 ಕಾರ್ಯಕ್ರಮ ಭಾನುವಾರ ಜೂನ್ 29ರಂದು ಆರಂಭವಾಗಲಿದೆ ಎಂದು ಸುವರ್ಣ ವಾಹಿನಿಯ ಅಧಿಕಾರಿಗಳು ಒನ್ ಇಂಡಿಯಾಗೆ ತಿಳಿಸಿದ್ದಾರೆ. (ಬಿಗ್ ಬಾಸ್ ಮನೆಗೆ ಅಡಿಯಿಡಲಿರುವ ಸೆಲೆಬ್ರಿಟಿಗಳು)

Bigg Boss Season 2 start on June 29 in Suvarna TV

ಕೆಲವೊಂದು ತಾಂತ್ರಿಕ ಕಾರಣಗಳಿಂದ ಈ ರಿಯಾಲಿಟಿ ಶೋ ಆರಂಭಕ್ಕೆ ತೊಂದರೆಯಾಗಿದೆ. ಕೆಲವು ಮಾಧ್ಯಮಗಳು ಪ್ರಕಟಿಸಿದಂತೆ ಕಾರ್ಯಕ್ರಮ ಒಂದು ತಿಂಗಳು ವಿಳಂಬವಾಗಲಿದೆ ಎನ್ನುವ ಸುದ್ದಿ ನಿರಾಧಾರ ಎಂದು ಸುವರ್ಣ ವಾಹಿನಿಯ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

ಜೂನ್ 23ರಂದು ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ. ಕಾರ್ಯಕ್ರಮದ ಬಗೆಗಿನ ಎಲ್ಲಾ ವಿವರಗಳನ್ನು ಅಂದು ಮಾಧ್ಯಮದವರಿಗೆ ನೀಡಲಾಗುತ್ತದೆ. ಒಟ್ಟಿನಲ್ಲಿ ಜೂನ್ 29ರಂದು ಕಾರ್ಯಕ್ರಮ ಆರಂಭವಾಗುವುದು ನಿಶ್ಚಿತ ಎಂದು ಸುವರ್ಣ ವಾಹಿನಿ ಸ್ಪಷ್ಟಪಡಿಸಿದೆ.

ಬಿಗ್ ಬಾಸ್ ಮೊದಲ ಆವೃತ್ತಿ ಈಟಿವಿ ಕನ್ನಡದಲ್ಲಿ ಮೂಡಿಬಂದಿತ್ತು, ಈ ಬಾರಿ 24 ಕ್ಯಾರೆಟ್ ಮನರಂಜನಾ ವಾಹಿನಿ ಸುವರ್ಣದಲ್ಲಿ ಮೂಡಿಬರುತ್ತಿದೆ. ಮೊದಲ ಆವೃತ್ತಿಯಲ್ಲಿ ಸುದೀಪ್ ಅವರ ನಿರೂಪಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ, ಟಿವಿ ಇತಿಹಾಸದಲ್ಲೇ ಹೊಸ TRP ದಾಖಲೆ ಬರೆದಿತ್ತು.

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಬಿಗ್ ಬಾಸ್ ಸೀಸನ್ 2' ತನ್ನ ಅಧಿಕೃತ ಲಾಂಛನವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಇದು ಈ ವರ್ಷದ ಬೃಹತ್ ರಿಯಾಲಿಟಿ ಶೋ ಆಗಲಿದೆ ಎಂಬ ವಿಶ್ವಾಸವನ್ನು ವಾಹಿನಿ ವ್ಯಕ್ತಪಡಿಸಿದೆ.

English summary
Bigg Boss Season two to start on June 29 in Suvarna TV channel. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada