»   » ನರೇಂದ್ರ ಮೋದಿಯನ್ನು ’ಚೋರ್’ ಎಂದ ಬಿಗ್ ಬಾಸ್ ಸ್ಪರ್ಧಿ

ನರೇಂದ್ರ ಮೋದಿಯನ್ನು ’ಚೋರ್’ ಎಂದ ಬಿಗ್ ಬಾಸ್ ಸ್ಪರ್ಧಿ

Posted By:
Subscribe to Filmibeat Kannada

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಿವೆ. ಅರ್ಮಾನ್ ಕೊಹ್ಲಿ ಬಂಧನದ ನಂತರ ರಿಯಾಲಿಟಿ ಶೋನ ಇನ್ನೊಬ್ಬ ಸ್ಪರ್ಧಿ ಎಜಾಜ್ ಖಾನ್ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯನ್ನು 'ಚೋರ್' ಎಂದು ಸಂಭೋಧಿಸಿ ಅನಾವಶ್ಯಕ ವಿವಾದಕ್ಕೆ ಕಾರಣನಾಗಿದ್ದಾನೆ.

ಈ ಸಂಬಂಧ ಈಗಾಗಲೇ ಎಜಾಜ್ ಖಾನ್ ವಿರುದ್ದ ಕೇಸ್ ದಾಖಲಾಗಿದ್ದು ಕೊಹ್ಲಿಯಂತೆ ಈತನೂ ಬಂಧನಕ್ಕೊಳಗಾದರೆ ಆಶ್ಚರ್ಯ ಪಡಬೇಕಾಗಿಲ್ಲ. ಮೋದಿ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಮುಂಬೈ ಪೊಲೀಸರು ಎಜಾಜ್ ಖಾನ್ ವಿರುದ್ದ ಕೇಸ್ ದಾಖಲಿಸಿ ಕೊಂಡಿದ್ದಾರೆ.

ಲೋನಾವಾಲದಲ್ಲಿರುವ ಬಿಗ್ ಬಾಸ್ 7 ಮನೆಯ ಮುಂದೆ ಬಿಜೆಪಿ ಕಾರ್ಯಕರ್ತರು ಎಜಾಜ್ ಖಾನ್ ಹೇಳಿಕೆ ವಿರುದ್ದ ಪ್ರತಿಭಟನೆಗೆ ಇಳಿದಿದ್ದಾರೆ.

ಎಜಾಜ್ ಖಾನ್ ಈ ರಿಯಾಲಿಟಿ ಶೋನಲ್ಲಿ ತನ್ನ ಹೌಸ್ ಮೇಟ್ ಗಳಾದ ಗೌಹರ್, ಕುಶಾಲ್, ಅರ್ಮಾನ್ ಮತ್ತು ತನಿಶಾ ಜೊತೆ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿಯವರನ್ನು 'ಚೋರ್' ಎಂದು ಸಂಭೋಧಿಸಿದ್ದಾನೆ.

ಮುಂದಾಗುವ ತೊಂದರೆಯನ್ನು ಗಮನದಲ್ಲಿ ಇಟ್ಟುಕೊಂಡು ಕಲರ್ಸ ವಾಹಿನಿ ಎಜಾಜ್ ನೀಡಿದ ಹೇಳಿಕೆಯನ್ನು ಪ್ರಸಾರ ಮಾಡದಿದ್ದರೂ ಯುಟ್ಯೂಬ್ ಮೂಲಕ ಈತ ನೀಡಿದ ಹೇಳಿಕೆ ಬಹಿರಂಗಗೊಂಡಿದೆ.

ಬಿಜೆಪಿ ಪ್ರತಿಭಟನೆ

ಎಜಾಜ್ ನೀಡಿದ ಹೇಳಿಕೆ ಯುಟ್ಯೂಬ್ ನಲ್ಲಿ ಬಹಿರಂಗ ಗೊಳ್ಳುತ್ತಿದ್ದಂತೆ ರಾಜಕೀಯ ವಲಯದಲ್ಲಿ ಕೋಲಾಹಲ ಉಂಟಾಗಿದ್ದು, ಬಿಗ್ ಬಾಸ್ 7 ಪ್ರಸಾರ ಮಾಡುತ್ತಿರುವ ಕಲರ್ಸ್ ವಾಹಿನಿಗೂ ತೊಂದರೆ ಬರುವ ಸಾಧ್ಯತೆ ಇಲ್ಲದಿಲ್ಲ ಎಂದು ಬಿಜೆಪಿ ಮುಖಂಡ ಸಂದೀಪ್ ಉಪಾಧ್ಯಾಯ ಹೇಳಿದ್ದಾರೆ.

ಕೇಸ್ ದಾಖಲು

ಮುಂಬೈ ಪೊಲೀಸರಿಂದ ಈ ಕೇಸು ಈಗ ಲೋನಾವಾಲ ಪೊಲೀಸರಿಗೆ ಹಸ್ತಾಂತರಗೊಂಡಿದೆ. ಬಿಜೆಪಿ ಶಾಸಕ ಬೊರಿವಿಲಿ ಗೋಪಾಲ್ ಶೆಟ್ಟಿ ಬಿಗ್ ಬಾಸ್ ಸ್ಪರ್ಧಿಯ ವಿರುದ್ದ ದೂರು ನೀಡಿದ್ದಾರೆ.

ಎಜಾಜ್ ಖಾನ್

ಎಜಾಜ್ ಖಾನ್ ತಾನು ಆಡುವ ಮಾತಿನ ಮೇಲೆ ನಿಗಾ ವಹಿಸಿಕೊಳ್ಳದಿದ್ದರೆ ಇನ್ನಷ್ಟು ತೊಂದರೆ ಎದುರಿಸ ಬೇಕಾಗುವುದಂತೂ ಖಂಡಿತ. ಬಿಗ್ ಬಾಸ್ 7 ಸ್ಪರ್ಧೆ ಈಗ ನಿರ್ಣಾಯಕ ಹಂತ ತಲುಪಿದ್ದು ಎಜಾಜ್ ಖಾನ್ ಈಗಾಗಲೇ ಸೇಫ್ ಆಗಿದ್ದಾರೆ ಎನ್ನುತ್ತದೆ ಮೂಲಗಳು.

ವಿಲನ್ ಪಾತ್ರಧಾರಿ

ಎಜಾಜ್ ಖಾನ್ ಬೆಳ್ಳಿ ಪರದೆಯ ಮೇಲೆ ಹಲವು ಚಿತ್ರಗಳಲ್ಲಿ ಖಳನಟನ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು, ಈಗ ಬಿಜೆಪಿ ಕಾರ್ಯಕರ್ತರ ಪಾಲಿಗೂ ವಿಲನ್ ಆಗಿ ಪರಿಣಮಿಸಿದ್ದಾನೆ.

ಬಿಗ್ ಬಾಸ್ ನಂತರ

ಬಿಗ್ ಬಾಸ್ 7 ರಿಯಾಲಿಟಿ ಶೋ ಮುಕ್ತಾಯಗೊಂಡ ನಂತರ ಎಜಾಜ್ ಖಾನಿಗೆ ಇನ್ನಷ್ಟು ತೊಂದರೆ ಎದುರಾಗುವ ಸಾಧ್ಯತೆ ಇದೆ. ಬಿಜೆಪಿ ಕಾರ್ಯಕರ್ತರು ಈತನ ವಿರುದ್ದ ತಿರುಗಿ ಬೀಳುವ ಸಾಧ್ಯತೆಯಿದೆ.

English summary
Bigg Boss 7 contestant Ajaz Khan is in trouble as he was caught calling BJP supremo Narendra Modi a "chor" (thief). A case has been registered in court.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada