For Quick Alerts
  ALLOW NOTIFICATIONS  
  For Daily Alerts

  ಸೆಟ್‌ ಮುಂದೆಯೇ ಅಪಘಾತದಲ್ಲಿ ಬಿಗ್‌ಬಾಸ್ ವ್ಯವಸ್ಥಾಪಕಿ ಮೃತ

  |

  ಹಿಂದಿ ಬಿಗ್‌ಬಾಸ್ ಸೆಟ್‌ನ ಬಳಿ ದಾರುಣ ಘಟನೆ ನಡೆದಿದೆ. ಬಿಗ್‌ಬಾಸ್‌ ಸೆಟ್‌ನ ಬಳಿಯೇ ನಡೆದ ರಸ್ತೆ ಅಪಘಾತದಲ್ಲಿ ಬಿಗ್‌ಬಾಸ್ ಟ್ಯಾಲೆಂಟ್ ವಿಭಾಗದ ಮ್ಯಾನೇಜರ್ ಮೃತಪಟ್ಟಿದ್ದಾರೆ.

  ಬಿಗ್‌ಬಾಸ್‌ 14 ಕ್ಕೆ ಟ್ಯಾಲೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 24 ವರ್ಷದ ಯುವತಿ ಪಿಸ್ತಾ ದಾಕಡ್ ಹಾಗೂ ಇನ್ನೊಬ್ಬರು ನಿನ್ನೆ (ಜನವರಿ 15) ರ ಸಂಜೆ ಬೈಕ್‌ನಲ್ಲಿ ಮನೆಗೆ ತೆರಳುವ ಹೊತ್ತಿನಲ್ಲಿ ನಡೆದ ಅಪಘಾತದಲ್ಲಿ ಪಿಸ್ತಾ ದಾಕಡ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

  ಜನವರಿ 15 ರಂದು ಸಲ್ಮಾನ್ ಖಾನ್ ಜೊತೆಗೆ ಮುಂಬೈನ ಫಿಲಂ ಸಿಟಿಯಲ್ಲಿ 'ವೀಕೆಂಡ್ ವಾರ್' ಎಪಿಸೋಡ್ ಚಿತ್ರೀಕರಣದಲ್ಲಿ ಪಿಸ್ತಾ ದಾಕಡ್ ಭಾಗವಹಿಸಿದ್ದರು. ಚಿತ್ರೀಕರಣ ಮುಗಿಸಿ ಆಕೆಯ ಸಹಾಯಕಿಯೊಂದಿಗೆ ಆಕ್ಟಿವಾ ಬೈಕ್‌ನಲ್ಲಿ ಮನೆಗೆ ಹೋಗಬೇಕಾದರೆ ರಸ್ತೆ ಗುಂಡಿಗೆ ಬೈಕ್‌ ಬಿದ್ದು ಇಬ್ಬರೂ ಕೆಳಕ್ಕೆ ಬಿದ್ದಿದ್ದಾರೆ. ಆಗ ಹಿಂದೆಯೇ ಬರುತ್ತಿದ್ದ ವ್ಯಾನಿಟಿ ವ್ಯಾನ್ ಒಂದು ಪಿಸ್ತಾ ಮೇಲೆ ಹರಿದಿದೆ. ಪಿಸ್ತಾ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

  ಎಂಡೆಮೋಲ್ ಶೈನ್ ಇಂಡಿಯಾ ಹೆಸರಿನ ಪ್ರೊಡಕ್ಷನ್ ಕಂಪೆನಿಯ ಉದ್ಯೋಗಿ ಆಗಿದ್ದ ಪಿಸ್ತಾ, ಬಿಗ್‌ಬಾಸ್, ಕತರೋಂಕೆ ಖಿಲಾಡಿ ಇನ್ನೂ ಹಲವು ರಿಯಾಲಿಟಿ ಶೋ ಗಳಿಗೆ ಟ್ಯಾಲೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದರು.

  BMC ನೋಟೀಸ್ ಗೆ ತಕ್ಕ ಉತ್ತರ ನೀಡ್ತಾರಾ Sonu Sood | Filmibeat Kannada

  ಹಲವು ಟಿವಿ ನಿರೂಪಕರು, ಬಾಲಿವುಡ್ ನಟ-ನಟಿಯರೊಂದಿಗೆ ಉತ್ತಮ ಪರಿಚಯವನ್ನು ಪಿಸ್ತಾ ಹೊಂದಿದ್ದರಂತೆ. ಸಲ್ಮಾನ್ ಖಾನ್ ಜೊತೆಗೆ ಕೆಲವು ಚಿತ್ರಗಳನ್ನು ಪಿಸ್ತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  English summary
  Bigg Boss talent manager Pista Dhakad died near the Bigg Boss 14 set in film city.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X