ಬಿಗ್‌ಬಾಸ್ ನಿರೂಪಕ ಕಮಲ್ ಹಾಸನ್ ಮೇಲೆ ಪಕ್ಷಪಾತದ ಆರೋಪ
ಬಿಗ್‌ಬಾಸ್ ತಮಿಳು ಪ್ರಸಾರವಾಗುತ್ತಿದೆ. ಕಮಲ್ ಹಾಸನ್ ನಿರೂಪಿಸುತ್ತಿರುವ ಈ ಶೋ ಅಕ್ಟೋಬರ್ 4 ರಂದು ಪ್ರಾರಂಭವಾಗಿದ್ದು, ಯಶಸ್ವಿಯಾಗಿ ನಡೆಯುತ್ತಿದೆ.
ನಟ ಕಮಲ್ ಹಾಸನ್ ಅವರ ಚತುರ ನಿರೂಪಣೆಯಿಂದ ಪ್ರೇಕ್ಷಕರನ್ನು ಸೆಳೆದಿದೆ ಬಿಗ್‌ಬಾಸ್ 4 ತಮಿಳು. ಆದರೆ ಈಗ ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಯೊಬ್ಬರು ಕಮಲ್ ಹಾಸನ್ ಮೇಲೆ ಗುರುತರವಾದ ಆರೋಪ ಹೊರಿಸಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿರುವ ಅನಿತಾ ಸಂಪತ್, ಕಮಲ್ ಹಾಸನ್ ಮೇಲೆ ಪಕ್ಷಪಾತದ ಆರೋಪ ಹೊರಿಸಿದ್ದಾರೆ. 'ಕಮಲ್ ಹಾಸನ್ ಬಿಗ್‌ಬಾಸ್ ಮನೆಯಲ್ಲಿರುವ ಕೆಲವರ ಪರವಾಗಿ, ಕೆಲವರ ವಿರುದ್ಧವಾಗಿ ಇದ್ದಾರೆ' ಎಂದಿದ್ದಾರೆ. ಅಷ್ಟೇ ಅಲ್ಲ, ನಿರೂಪಕ ಕಮಲ್‌ಹಾಸನ್ ಅನ್ನು ಶೋ ನಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ!

ಕಮಲ್ ಹಾಸನ್ ಪಕ್ಷಪಾತಿ: ಸ್ಪರ್ಧಿ ಅನಿತಾ
ಸ್ಪರ್ಧಿಗಳೊಂದಿಗೆ ವೀಕೆಂಡ್ ಸಂವಾದದ ವೇಳೆ ಕಮಲ್ ಹಾಸನ್ ಅವರು ಅನಿತಾ ಜೊತೆಗೆ ಮಾತನಾಡಿದರು. ಸಂವಾದ ಮುಗಿದ ಬಳಿಕ 'ನನ್ನ ಅನಿಸಿಕೆಗಳನ್ನು ಹೇಳುವುದಕ್ಕೆ ಕಮಲ್ ಹಾಸನ್ ನನಗೆ ಸೂಕ್ತ ಅವಕಾಶ ನೀಡಲಿಲ್ಲ, ಅವರು ಬೇಕೆಂದೇ ಹೀಗೆ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.

ಕಮಲ್ ಹಾಸನ್ ಅನ್ನು ನಾಮಿನೇಟ್ ಮಾಡಿದ ಸ್ಪರ್ಧಿ!
ಬಿಗ್‌ಬಾಸ್ ಬಳಿ ದೂರು ಸಹ ಹೇಳಿರುವ ಅನಿತಾ ಸಂಪತ್, 'ಕಮಲ್ ಹಾಸನ ಪಕ್ಷಪಾತಿಯಾಗಿದ್ದು, ಶೋ ಅನ್ನು ಸರಿಯಾಗಿ ನಡೆಸುತ್ತಿಲ್ಲ, ಹಾಗಾಗಿ ಈ ವಾರದ ಎಲಿಮಿನೇಶನ್‌ಗೆ ಗೆ ನಾನು ಕಮಲ್ ಹಾಸನ್ ಅನ್ನು ನಾಮಿನೇಟ್ ಮಾಡುತ್ತಿದ್ದೇನೆ' ಎಂದಿದ್ದಾರೆ.

ಬಿಗ್‌ಬಾಸ್ ಸ್ಪರ್ಧಿಗಳೇ ಒಪ್ಪುತ್ತಿಲ್ಲ
ಆದರೆ ಅನಿತಾ ಮಾಡಿರುವ ಆರೋಪವನ್ನು ಬಿಗ್‌ಬಾಸ್ ಮನೆಯ ಒಳಗಿರುವ ಅವರ ಜೊತೆಗಾರರೇ ಒಪ್ಪುತ್ತಿಲ್ಲ. ಅನಿತಾ, ಕಮಲ್ ಹಾಸನ್ ವಿರುದ್ಧ ಆರೋಪ ಮಾಡಿದಾಗ ಬಿಗ್‌ಬಾಸ್ ಸ್ಪರ್ಧಿಗಳು ಅದನ್ನು ಖಂಡಿಸಿದ್ದಾರೆ.
Recommended Video

ನೆಟ್ಟಿಗರಿಂದ ಸಖತ್ ಟ್ರೋಲ್
ನೆಟ್ಟಿಗರು ಸಹ ಅನಿತಾ ರನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಮನೆಯಲ್ಲಿರುವವರ ಮೇಲೆಲ್ಲಾ ಜಗಳವಾಡಿದ ಬಳಿಕ ಅನಿತಾ ಈಗ ನಿರೂಪಕರ ಮೇಲೆ ಜಗಳ ಆಡುತ್ತಿದ್ದಾರೆ, ಮುಂದೆ ಬಿಗ್‌ಬಾಸ್ ವಿರುದ್ಧವೇ ಜಗಳ ಆಡುತ್ತಾರೆ ಎಂದಿದ್ದಾರೆ ನೆಟ್ಟಿಗರು.


Click it and Unblock the Notifications











