For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ಸ್ಪಾಟಲ್ಲಿ ಕಾರು ಡಿಕ್ಕಿ ಹೊಡೆದು ಬಾಲಕ ಸಾವು

  By Prasad
  |

  ಹೈದರಾಬಾದ್, ಅ. 26 : ತೆಲುಗು ಕಿರುತೆರೆ ಧಾರಾವಾಹಿಗಾಗಿ ಶೂಟಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ನಟಿ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಶೂಟಿಂಗ್ ನೋಡುತ್ತಿದ್ದ 6 ವರ್ಷದ ಬಾಲಕ ಸಾವಿಗೀಡಾದ ದುರಂತ ಘಟನೆ ಹೈದರಾಬಾದ್ ಹೊರವಲಯದಲ್ಲಿ ಶುಕ್ರವಾರ ನಡೆದಿದೆ.

  ಮೃತ ಬಾಲಕನನ್ನು ಸಾತ್ವಿಕ್ ರೆಡ್ಡಿ ಎಂದು ಗುರುತಿಸಲಾಗಿದೆ. ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ಎಪಿ 31 ಸಿಎ 4902 ನಂಬರಿನ ಕಾರು ಚಲಾಯಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಬಾಲಕನಿಗೆ ಡಿಕ್ಕಿ ಹೊಡೆದಿದ್ದಾಳೆ. ಬಾಲಕ ಸ್ಥಳದಲ್ಲಿಯೇ ಅಸುನೀಗಿದ್ದಾನೆ ಎಂದು ಚಂದ್ರನಗರ ಪೊಲೀಸರು ತಿಳಿಸಿದ್ದಾರೆ.

  ಶೂಟಿಂಗ್ ನೋಡಲು ಅನೇಕ ಜನರು ಈ ಸ್ಥಳದಲ್ಲಿ ನೆರೆದಿದ್ದರು. ಕಾರು ಓಡಿಸುತ್ತಿದ್ದ ನಟಿ ನಿಯಂತ್ರಣ ತಪ್ಪಿ ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾಳೆ. ನಂತರ ಶೂಟಿಂಗ್ ನೋಡುತ್ತಿದ್ದ ಸಾತ್ವಿಕ್ ರೆಡ್ಡಿಗೆ ಬಲವಾಗಿ ಗುದ್ದಿದೆ. ಕಾರು ಚಲಾಯಿಸುತ್ತಿದ್ದ ನಟಿಯ ಬಳಿ ಡ್ರೈವಿಂಗ್ ಲೈಸೆನ್ಸ್ ಕೂಡ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

  ಈ ಘಟನೆಯಲ್ಲಿ ಓರ್ವ ಬಾಲಕಿಯೂ ತೀವ್ರವಾಗಿ ಗಾಯಗೊಂಡಿದ್ದು, ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಮಾಡಿದ ತೆಲುಗು ನಟಿಯ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ. ನಟಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

  English summary
  A six-year-old boy Satvik Reddy was killed on the spot, after the car driven the the Telugu actor hit him. The Telugu television serial actor was driving the car and lost control while shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X