»   » ರಾಜಕೀಯಕ್ಕೆ ನಟ ದರ್ಶನ್ ಇಳಿಯೋದು ನಿಜನಾ?

ರಾಜಕೀಯಕ್ಕೆ ನಟ ದರ್ಶನ್ ಇಳಿಯೋದು ನಿಜನಾ?

Posted By:
Subscribe to Filmibeat Kannada

ಈ ಪ್ರಶ್ನೆ ಸದ್ಯಕ್ಕೆ ದರ್ಶನ್ ಅಭಿಮಾನಿಗಳನ್ನೂ ಹಾಗೂ ಅವರನ್ನು ಹತ್ತಿರದಿಂದ ಬಲ್ಲವರನ್ನು ಕಾಡುತ್ತಲೇ ಇದೆ. ಸ್ವತಃ ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನು ಹೇಳುತ್ತಾರೆಂದರೆ, ಸಿನಿಮಾ ರಾಜಕೀಯಾನೇ ಇನ್ನೂ ಸರಿಯಾಗಿ ಅರ್ಥವಾಗಿಲ್ಲ ಎಂದಿದ್ದಾರೆ.

ಇನ್ನು ರಾಜಕೀಯದ ಮಾತು ತುಂಬಾ ದೂರವಾದದ್ದು ಎಂಬುದು ಅವರ ಮಾತಿನ ಅರ್ಥ ಎಂದು ಬಿಡಿಸಿ ಹೇಳಬೇಕಾಗಿಲ್ಲ ಅಲ್ಲವೇ? ತಮ್ಮ ಖಾಸಗಿ ವಿಚಾರಗಳ ಬಗ್ಗೆ ಅವರು ನೇರವಾಗಿ ರಾಜ್ ಮ್ಯೂಸಿಕ್ ವಾಹಿನಿಯ ಖತರ್ನಾಕ್ ಕಾರ್ಯಕ್ರಮ 'ಸುಗುಣಾಸ್ ಸ್ಟ್ರೈಟ್ ಹಿಟ್' ನಲ್ಲಿ ಮಾತನಾಡಿದ್ದಾರೆ.


ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ 'ಸುಗುಣಾಸ್ ಸ್ಟ್ರೈಟ್ ಹಿಟ್' ಕಾರ್ಯಕ್ರಮ ರಾಜ್ ಮ್ಯೂಸಿಕ್ ವಾಹಿನಿಯಲ್ಲಿ ಸೋಮವಾರ (ಜೂನ್ 17) ರಾತ್ರಿ 9 ಗಂಟೆಗೆ ವೀಕ್ಷಿಸಬಹುದು. ಸುಗುಣಾ ಅವರ ನೇರ ಪ್ರಶ್ನೆಗಳಿಗೆ ದರ್ಶನ್ ನೇರವಾಗಿಯೇ ಉತ್ತರಿಸಿದ್ದಾರೆ.

ನಟ ದರ್ಶನ್ ಅವರಿಗೆ ಕೇಳಲಾಗಿರುವ ಕೆಲವು ಪ್ರಶ್ನೆಗಳು ಹೀಗಿವೆ. ಇಲ್ಲಿವರೆಗಿನ ನಿಮ್ಮ ಜೀವನದಲ್ಲಿ ನಡೆದ ಘಟನೆಗಳಿಗೆ ರಿಗ್ರೇಟ್ ಮಾಡಿದ್ದೀರಾ? ಎಂಬ ಪ್ರಶ್ನೆಗೆ ಇಲ್ಲ ಎಂದಿದ್ದಾರೆ ದರ್ಶನ್. ಇನ್ನು ದರ್ಶನ್ ಹೇಳಿರುವುದೇನೆಂದರೆ ನಾನು ಯಾವತ್ತೂ ನನ್ನ ಹೆಂಡ್ತಿ ಮಕ್ಕಳನ್ನು ಮೀಡಿಯಾ ಮುಂದೆ ಕರೆದುಕೊಂಡು ಹೋಗಿಲ್ಲ ಎಂಬ ಉತ್ತರವನ್ನೂ ಕೊಟ್ಟಿದ್ದಾರೆ. (ಹ್ಯಾಟ್ರಿಕ್ ಹೀರೋ ಶಿವಣ್ಣ ಅಮ್ಮಾವ್ರ ಗಂಡನಾ?)

ಪ್ರತಿಯೊಬ್ಬ ಸ್ಟಾರ್ ಗೂ ಒಂದೊಂದು ಶೋಕಿ, ಕ್ರೇಜ್ ಅಂಥ ಇದ್ದೇ ಇರುತ್ತದೆ. ಅದನ್ನು ಮೀಡಿಯಾ ಮುಂದೆ ಇಡಬಾರದು ಅಂತೀರಾ? ಇದೇ ರೀತಿಯ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಇಂದು ರಾತ್ರಿ ಪ್ರಸಾರವಾಗುತ್ತಿರುವ ರಾಜ್ ಮ್ಯೂಸಿಕ್ ಚಾನಲ್ ನೋಡಲೇಬೇಕು. ಡೋಂಟ್ ಮಿಸ್. (ಒನ್ಇಂಡಿಯಾ ಕನ್ನಡ)

English summary
Challenging Star Darshan faced may questions on Raj Musix Kannada's programme Suguna's Straight Hit. The programme aired on 17th June at 9 pm. Darshan denies to enter in politics.
Please Wait while comments are loading...