For Quick Alerts
  ALLOW NOTIFICATIONS  
  For Daily Alerts

  ಮಂತ್ರ ಪಠಿಸುತ್ತಾ ಕನ್ನಡದ ಕೋಟ್ಯಾಧಿಪತಿಯಾದ ಹುಸೇನ್

  |

  ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದ ಗರಿಷ್ಠ ಮೊತ್ತ ಒಂದು ಕೋಟಿ ರೂಪಾಯಿ ಮೊತ್ತವನ್ನು ಗೆದ್ದು ಕೊಪ್ಪಳದ ಹುಡುಗ ಹೊಸ ದಾಖಲೆ ನಿರ್ಮಿಸಿದ್ದಾನೆ.

  ಬಡ ರೈತ ಕುಟುಂಬದಿಂದ ಬಂದು ಐಎಎಸ್ ಓದಬೇಕೆಂದು ಕನಸು ಕಾಣುತ್ತಿರುವ ಗಂಗಾವತಿಯ (ಕೊಪ್ಪಳ ಜಿಲ್ಲೆ) ಹುಸೇನ್ ಬಾಷಾ ಕಾರ್ಯಕ್ರಮದ ಎಲ್ಲಾ ಹದಿನೈದು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ ಕೋಟಿ ಗೆದ್ದು ಸಾರ್ಥಕತೆಯ ನಗು ಬೀರಿದ್ದಾನೆ.

  ಸಹೋದರಿಯರಿಗೆ ಉತ್ತಮ ವಿದ್ಯಾಭ್ಯಾಸ, ತಂದೆಯ ಸಾಲ ತೀರಿಸುವುದು, ಪೋಷಕರಿಗೆ ಆಸರೆಯಾಗುವುದು ಹೀಗೆ ಹತ್ತು ಹಲವಾರು ಜವಾಬ್ದಾರಿಯನ್ನು ಹೊತ್ತು ಬೆಂಗಳೂರಿಗೆ ಬಂದ ಹುಸೇನ್, ಮೊದಲು ಜೀವನೋಪಾಯಕ್ಕೆ ಕಂಡುಕೊಂಡ ಹಾದಿ ಇಲೆಕ್ತ್ರಿಷಿಯನ್ ಕೆಲಸ ನಂತರ ಟ್ರಕ್ ಡ್ರೈವರ್.

  ಸೋಮವಾರದಿಂದ ಗುರುವಾರದವರೆಗೆ ರಾತ್ರಿ ಎಂಟು ಗಂಟೆಗೆ ಪ್ರಸಾರವಾಗುವ ಈ ಕಾರ್ಯಕ್ರಮದ ಪ್ರಾಯೋಜಕರು ಸನ್ ಫೀಸ್ಟ್ ಮತ್ತು ನ್ಯೂಜನ್ ಟೆಕ್ನಾಲಜಿ. ಹುಸೇನ್ ಕೋಟಿ ಗೆಲ್ಲುವ ಕಾರ್ಯಕ್ರಮ ಮೂರು ಕಂತುಗಳಲ್ಲಿ ಇದೇ ತಿಂಗಳ 23,25 ಮತ್ತು 29ರಂದು ಪ್ರಸಾರವಾಗಲಿದೆ.

  ಕೋಟಿ ಗೆದ್ದ ಕೊಪ್ಪಳದ ಹುಡುಗ

  ಕೋಟಿ ಗೆದ್ದ ಕೊಪ್ಪಳದ ಹುಡುಗ

  ಭಗವದ್ಗೀತೆಯ ಶ್ಲೋಕಗಳನ್ನು ಬಹುಸಂಖ್ಯಾತರು ನಾಚಿಸುವಂತೆ ನಿರರ್ಗಳವಾಗಿ ಪಠಿಸುವ 25 ವರ್ಷದ ಹುಸೇನ್ ಕಾರ್ಯಕ್ರಮದುದ್ದಕ್ಕೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನೀಡಿದ ಪ್ರೋತ್ಸಾಹಕ್ಕೆ ಧನ್ಯವಾದ ಹೇಳಿದ್ದಾರೆ. ತುಮಕೂರು ಸಿದ್ದಗಂಗಾ ಮಠದ ಶತಾಯುಷಿ, ನಡೆದಾಡುವ ದೇವರು ಡಾ. ಸಿದ್ದಗಂಗಾ ಶ್ರೀಗಳು ಈತನಿಗೆ ಪ್ರೇರಣೆಯಂತೆ.

  ಕೋಟಿ ಗೆದ್ದ ಕೊಪ್ಪಳದ ಹುಡುಗ

  ಕೋಟಿ ಗೆದ್ದ ಕೊಪ್ಪಳದ ಹುಡುಗ

  ಹುಸೇನ್ ಬಗ್ಗೆ ನನಗೆ ತುಂಬಾ ಹೆಮ್ಮೆಯೆನಿಸುತ್ತದೆ, ಈ ಕಾರ್ಯಕ್ರಮ ಹುಸೇನ್ ಬದುಕನ್ನೇ ಬದಲಾಯಿಸಿತು. ಅವರ ಜ್ಞಾನ ಮತ್ತು ಆತ್ಮಸ್ಥೈರ್ಯವನ್ನು ನಾನು ತುಂಬಾ ಮೆಚ್ಚುತ್ತೇನೆ ಎಂದು ಪುನೀತ್, ಹುಸೇನ್ ಬೆನ್ನು ತಟ್ಟಿದ್ದಾರೆ.

  ಕೋಟಿ ಗೆದ್ದ ಕೊಪ್ಪಳದ ಹುಡುಗ

  ಕೋಟಿ ಗೆದ್ದ ಕೊಪ್ಪಳದ ಹುಡುಗ

  ಒಂದು ಕೋಟಿ ಗೆಲ್ಲುವ ಸಾಕಷ್ಟು ಸಾಮಾನ್ಯ ಜನರು ನಮ್ಮ ಮುಂದೆ ಇನ್ನೂ ಇದ್ದಾರೆ ಎನ್ನುವುದಕ್ಕೆ ಹೆಮ್ಮೆಯಾಗುತ್ತದೆ. ಹುಸೇನ್ ಒಂದು ಕೋಟಿ ಗೆದ್ದ ಕ್ಷಣ ನನ್ನ ಜೀವನದ ಅತ್ಯಂತ ಸಂತಸದ ಕ್ಷಣ ಎಂದು ಕಾರ್ಯಕ್ರಮದ ನಿರೂಪಕ ಪುನೀತ್ ರಾಜಕುಮಾರ್ ಭಾನುವಾರ ( ಏ 14) ನಡೆದ ಪತ್ರಿಕಾಘೊಷ್ಠಿಯಲ್ಲಿ ಹೇಳಿದ್ದಾರೆ.

  ಕೋಟಿ ಗೆದ್ದ ಕೊಪ್ಪಳದ ಹುಡುಗ

  ಕೋಟಿ ಗೆದ್ದ ಕೊಪ್ಪಳದ ಹುಡುಗ

  ಸುವರ್ಣ ವಾಹಿನಿಯ ಬ್ಯೂಸಿನೆಸ್ ಹೆಡ್ ಅನೂಪ್ ಚಂದ್ರಶೇಖರ್ ಮಾತನಾಡುತ್ತಾ, ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಒಂದು ಕೋಟಿ ಗೆದ್ದ ಪ್ರಥಮ ವಿಜಯಶಾಲಿಯನ್ನು ಘೋಷಿಸಲು ತುಂಬಾ ಹೆಮ್ಮೆಯೆನಿಸುತ್ತದೆ. ಈ ಕಾರ್ಯಕ್ರಮ ಆರಂಭಿಸಿದ್ದು ಸಾಮಾನ್ಯ ಜನರ ಬದುಕನ್ನು ಬದಲಾಯಿಸಿಕೊಳ್ಳಲು ಎಂದಿದ್ದಾರೆ.

  ಕೋಟಿ ಗೆದ್ದ ಕೊಪ್ಪಳದ ಹುಡುಗ

  ಕೋಟಿ ಗೆದ್ದ ಕೊಪ್ಪಳದ ಹುಡುಗ

  ಕೊಪ್ಪಳ ಗಂಗಾವತಿಯ ಹುಸೇನ್ ಕಾರ್ಯಕ್ರಮದ ಬೃಹತ್ ಮೊತ್ತವನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾನೆ. ಅವನಿಗೂ ಮತ್ತು ಅವನ ಕುಟುಂಬಕ್ಕೆ ಶುಭಾಶಯ ಕೋರುತ್ತೇನೆ ಎಂದು ವಾಹಿನಿಯ ಬ್ಯೂಸಿನೆಸ್ ಹೆಡ್ ಮೆಚ್ಚುಗೆಯ ಮಾತನ್ನಾಡಿದ್ದಾರೆ.

  English summary
  First ever contestant in the Kannada small screen. Hussain Basha from Koppal won the maximum prize money of One crore in Kannadada Kotyadhipati reality show. This programme will be aired on April 23, 25 and April 29.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X