Don't Miss!
- Sports
Ranji Trophy: ದೇವದತ್ ಪಡಿಕ್ಕಲ್ ಭರ್ಜರಿ ಶತಕ: ಕರ್ನಾಟಕ ತಂಡಕ್ಕೆ ಇನ್ನಿಂಗ್ಸ್ ಮುನ್ನಡೆ
- News
ಬಿಬಿಎಂಪಿಯಿಂದ ಫೆಬ್ರುವರಿ. 2 ರಿಂದ 5 ರವರೆಗೆ 'ಖಾತಾ ಮೇಳ' ಆಯೋಜನೆ
- Lifestyle
ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶ್ರೀದೇವಿ ಡ್ರಾಮ ಕಂಪನಿಯಲ್ಲಿ ನರೇಶ್-ಪವಿತ್ರಾ ಮದುವೆ: ವಿಡಿಯೋ ವೈರಲ್!
ತೆಲುಗು ಕಿರುತೆರೆಯಲ್ಲಿ ಕಾಮಿಡಿ ಶೋ ಮೂಲಕ ನಿರೂಪಕ ಹೈಪರ್ ಆದಿ ಜನಪ್ರಿಯರಾಗಿದ್ದಾರೆ. ಹೈಪರ್ ಆದಿಯ ಪಂಚಿಂಗ್ ಡೈಲಾಗ್‌ಗೆ ಕನ್ನಡದಲ್ಲೂ ಅಭಿಮಾನಿಗಳಿದ್ದಾರೆ. 'ಜಬರ್ದಸ್ತ್' ಕಾಮಿಡಿ ಶೋ ಮೂಲಕ ಕ್ರೇಜ್ ಗಿಟ್ಟಿಸಿಕೊಂಡಿದ್ದರು. ಈಗ 'ಜಬರ್ದಸ್ತ್' ಬಳಿಕ 'ಶ್ರೀದೇವಿ ಡ್ರಾಮಾ ಕಂಪನಿ' ಅನ್ನೋ ಶೋ ನಡೆಸಿಕೊಡುತ್ತಿದ್ದಾರೆ.
ಮೊದಲು 'ಜಬರ್ದಸ್ತ್' ಸ್ಕ್ರಿಪ್ಟ್ ರೈಟರ್ ಆಗಿ ಎಂಟ್ರಿ ಕೊಟ್ಟ ಹೈಪರ್ ಆದಿ ಬಳಿಕ ಕಾಮಿಡಿಯನ್ ಆಗಿಜನಪ್ರಿಯರಾಗಿದ್ದರು. 'ಜಬರ್ದಸ್ತ್' ಕಾಮಿಡಿ ಶೋ ಮೂಲಕ ಉತ್ತಮ ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಬಳಿಕ ಸಿನಿಮಾಗಳಲ್ಲೂ ಹೈಪರ್ ಆದಿ ನಟಿಸಿದ್ದಾರೆ. ಸದ್ಯ 'ಶ್ರೀದೇವಿ ಡ್ರಾಮಾ ಕಂಪನಿ'ಯಲ್ಲಿ ಇತ್ತಷ್ಟು ಜಬರ್ದಸ್ತ್ ಕಾಮಿಡಿ ಮಾಡುತ್ತಿದ್ದಾರೆ.
ಪವಿತ್ರಾ
ಲೋಕೇಶ್
ಜೊತೆ
ಮೈಸೂರಿನ
ಹೋಟೆಲ್ನಲ್ಲಿರುವ
ವಿಷಯ
ಪತ್ನಿಗೆ
ತಿಳಿಸಿದ್ದೇ
ನರೇಶ್:
ಕಥೆಯಲ್ಲಿ
ಟ್ವಿಸ್ಟ್?
ಇತ್ತೀಚೆಗೆ ಟಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಹಾಟ್ ಟಾಪಿಕ್ ಆಗಿರುವ ಪವಿತ್ರ ಲೋಕೇಶ್ ಹಾಗೂ ನರೇಶ್ ವಿವಾದದ ಕುರಿತು ಹೈಪರ್ ಆದಿ ವ್ಯಂಗ್ಯ ಮಾಡಿದ್ದಾರೆ. ಇವರು ಮಾಡಿರುವ ವ್ಯಂಗ್ಯ ನಿರೀಕ್ಷೆ ಮಾಡಿದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ಆ್ಯಂಕರ್ ಅನಸೂಯಾ ಸಖತ್ ಕೌಂಟರ್ ಕೊಟ್ಟಿದ್ದು ಕಿಕ್ ಕೊಡುತ್ತಿದೆ.

ಹೈಪರ್ ಆದಿಯ ನಾಟಕ ಕಂಪನಿ
'ಶ್ರೀದೇವಿ ನಾಟಕ ಕಂಪನಿ'ಯಲ್ಲಿ ಆಂಧ್ರ ಹಾಗೂ ತೆಲಂಗಾಣದಲ್ಲಿ ಕಾಮಿಡಿ ಕಿಕ್ ಕೊಡುತ್ತಿದೆ. ಈ ಶೋನಲ್ಲಿ ರಶ್ಮಿ ಪ್ರಮುಖ ನಿರೂಪಕಿಯಾಗಿದ್ದರೆ, ಇತ್ತ ಆಟೋ ರಾಮಪ್ರಸಾದ್ ಭರ್ಜರಿ ಟಾಂಗ್ ಕೊಡುತ್ತಿದ್ದಾರೆ. ಇನ್ನೊಂದು ಕಡೆ ಹೈಪರ್ ಆದಿ ಕೂಡ ಕೌಂಟರ್ ಕೊಡುವುದನ್ನು ಮುಂದುವರೆಸಿದ್ದಾರೆ. ಕೆಲವು ದಿನಗಳಿಂದ 'ಜಬರ್ದಸ್ತ್'ಗಿಂತ 'ಶ್ರೀ ದೇವಿಯ ಡ್ರಾಮಾ ಕಂಪನಿ'ಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಟಿಆರ್‌ಪಿಯಲ್ಲೂ ಈ ಕಾಮಿಡಿ ಶೋ ಟಾಪ್ ಲಿಸ್ಟ್‌ನಲ್ಲಿದೆ ಎನ್ನಲಾಗಿದೆ.
ರಮ್ಯಾ
ಕೈಗೆ
ಸಿಕ್ಕಿಬಿದ್ದ
ಮೇಲೆ
ನರೇಶ್
-ಪವಿತ್ರಾ
ಲೋಕೇಶ್
ತೆಗೆದುಕೊಂಡ
ಖಡಕ್
ನಿರ್ಧಾರವೇನು?

ಡ್ರಾಮ ಕಂಪನಿಯ ಭರ್ಜರಿ ಕಾಮಿಡಿ
ಕಳೆದ ವೀಕೆಂಡ್‌ನಲ್ಲಿ ಶ್ರೀ ದೇವಿ ಡ್ರಾಮ ಕಂಪನಿಯಲ್ಲಿ ಭರ್ಜರಿ ಕಾಮಿಡಿ ನಡೆದಿದೆ. ಎಲ್ಲಾ ಸ್ಪರ್ಧಿಗಳೂ ವೀಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದಾರೆ. ನಿರೂಪಕ ರಶ್ಮಿ, ಆಟೋ ರಾಮಪ್ರಸಾದ್ ಹಾಗೂ ಹೈಪರ್ ಆದಿ ಈ ಕಾಮಿಡಿ ಶೋನ ಪ್ರಮುಖ ಆಕರ್ಷಣೆಗಳು. ಈ ಮೂವರು ಸೇರಿದಂತೆ ಕಾಮಿಡಿಗೇನು ಕಮ್ಮಿ ಇರುವುದಿಲ್ಲ. ಖಡಕ್ ಸ್ಕ್ರಿಪ್ಟ್ ಮಾಡುವ ಹೈಪರ್ ಆದಿ ಶೋಗಳಿಗಾಗಿ ಜನರಉ ಕಾದು ನೋಡುತ್ತಿರುತ್ತಾರೆ. ಕಳೆದ ಭಾನುವಾರ ಸಂಚಿಕೆಯ ಪ್ರಮುಖ ಆಕರ್ಷಣೆ ನರೇಶ್ ಹಾಗೂ ಪವಿತ್ರಾ ಸ್ಕಿಟ್ ಗಮನ ಸೆಳೆದಿತ್ತು.

ಡ್ರಾಮ ಕಂಪನಿಯಲ್ಲಿ ಸಖತ್ ಪಂಚ್
ಹೈಪರ್ ಆದಿ ವಿಶೇಷತೆನೇ ಅದು. ಪ್ರಸ್ತುತ ಟ್ರೆಂಡಿಂಗ್‌ನಲ್ಲಿರುವ ವಿಷಯವನ್ನು ಹೈಪರ್ ಆದಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕಳೆದ ವೀಕೆಂಡ್‌ನಲ್ಲೂ ಅಷ್ಟೆನೇ. ಕಳೆದೊಂದು ತಿಂಗಳಿನಿಂದ ಸುದ್ದಿಯಲ್ಲಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಲಿವ್ ಇನ್ ರಿಲೇಷನ್‌ಶಿಪ್ ವಿಚಾರವನ್ನು ಮುಖ್ಯ ವಿಷಯವನ್ನಾಗಿಟ್ಟುಕೊಂಡು ಕಾಮಿಡಿ ಪಂಚ್ ಕೊಟ್ಟಿದ್ದರು. ಸ್ಕಿಟ್ ಕೊನೆಯಲ್ಲಿ ನರೇಶ್ ಹಾಗೂ ಪವಿತ್ರಾ ಮದುವೆ ಮಾಡಿಸಿ ಸುದ್ದಿಯಾಗಿದೆ. ಇದೇ ವಿಡಿಯೋ ಈ ವೈರಲ್ ಆಗಿದೆ.

ನರೇಶ್-ಪವಿತ್ರಾ ಮದುವೆ
'ಶ್ರೀದೇವಿ ನಾಟಕ ಕಂಪನಿ'ಯಲ್ಲಿ ಪವಿತ್ರಾ ಮತ್ತು ನರೇಶ್‌ಗೆ ಸಂಬಂಧಿಸಿದ ವಿವಾದವನ್ನೂಎತ್ತಿ ಹಿಡಿಯಲಾಗಿದೆ. ಡ್ರಾಮದಲ್ಲಿ ಪೊಟ್ಟಿ ನರೇಶ್ ಮತ್ತು ಇನ್ನೊಬ್ಬ ಕಾಮಿಡಿಯನ್ ಪವಿತ್ರಾ ಅವರನ್ನಿಟ್ಟುಕೊಂಡು ಹೈಪರ್ ಆದಿ ಕಾಮಿಡಿ ಸ್ಕಿಟ್ ರಚಿಸಿದ್ದರು. ಇದರಲ್ಲಿ ವೇದಿಕೆ ಮೇಲೆ ಪರೋಕ್ಷವಾಗಿ ನರೇಶ್ ಹಾಗೂ ಪವಿತ್ರಾ ವಿವಾದವನ್ನು ತಂದು ಕಾಮಿಡಿ ಮಾಡಿದ್ದಾರೆ. ಅಲ್ಲದೆ ವೇದಿಕೆ ಮೇಲೆ ಹಾರ ಬದಲಾಯಿಸುವಂತಹ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ.