»   » ಏಳು ಬೀಳು ನಡುವಿನ ನಟ ಜಗ್ಗೇಶ್ ಪಯಣ

ಏಳು ಬೀಳು ನಡುವಿನ ನಟ ಜಗ್ಗೇಶ್ ಪಯಣ

Posted By:
Subscribe to Filmibeat Kannada

ಜಗ್ಗೇಶ್ ತಾವು ದೊಡ್ಡ ನಟನಾಗಲು ಚಿತ್ರರಂಗಕ್ಕೆ ಕಾಲಿಟ್ಟಾಗ ಪ್ರೊಡಕ್ಷನ್ ಬಾಯ್ ಗಳಿಂದಲೂ ಅವಮಾನ ಎದುರಿಸಿದವರು. ಆಗಿನ ಸೋಲು ಒಂದು ರೀತಿಯದ್ದಾದರೆ, ತಾವು ಚಿತ್ರರಂಗದಲ್ಲಿ ನಟನಾಗಿ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಸ್ಟಾರ್ ಆಗಿದ್ದಾಗಲೂ ಮೊತ್ತೊಮ್ಮೆ ದೊಡ್ಡ ಮಟ್ಟದ ಸೋಲನ್ನು ಅನುಭವಿಸುತ್ತಾರೆ.['ವೀಕೆಂಡ್' ವೇದಿಕೆ ಮೇಲೆ ನಿಂತು ಸ್ಯಾಂಡಲ್ ವುಡ್ ಗೆ ಸಂದೇಶ ಕೊಟ್ಟ ಜಗ್ಗೇಶ್!]

ಜಗ್ಗೇಶ್ ವಿಶೇಷವಾಗಿ 'ಮೇಕಪ್' ಎಂಬ ಸಿನಿಮಾವನ್ನು ತಮ್ಮ ನಿರ್ಮಾಣದಲ್ಲಿ ಮಾಡುತ್ತಾರೆ. ಅದು ಯಾವುದೋ ಒಂದು ಕಾರಣಕ್ಕೆ ಮಿಸ್ ಆಗಿ ಯಶಸ್ವಿ ಕಾಣದೆ ಲಾಸ್ ಆಗುತ್ತದೆ. ಆಗ ಮೊತ್ತೊಮ್ಮೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸೋಲು ಅನುಭವಿಸುತ್ತಾರೆ. ಆಗ ಅವರು ಹೇಗೆಲ್ಲಾ ಕಷ್ಟಪಟ್ಟರು. ಪುನಃ ಚಿತ್ರರಂಗದಲ್ಲಿ ಯಶಸ್ವಿ ಆಗಿದ್ದು ಹೇಗೆ? ಎಂಬ ಏಳು-ಬೀಳಿನ ಪಯಣದ ಬಗ್ಗೆ 'ವೀಕೆಂಡ್ ವಿತ್ ರಮೇಶ್ 3' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಅಂದಿನ ದಿನದ ಮೆಲುಕು ಇಲ್ಲಿದೆ.

ಜಗ್ಗೇಶ್ ಗೆ ಒಳ್ಳೆ ಪಾತ್ರಗಳು ಬರಲಿಲ್ಲ

"ಮೇಕಪ್ ಆದ ನಂತರ ನನಗೆ ಒಳ್ಳೆ ಪಾತ್ರಗಳು ಬರಲಿಲ್ಲ. ಆ ಸಮಯದಲ್ಲಿ ನನ್ನ ದೊಡ್ಡ ಮಗನೇ ಕುಳಿತು ಕೊಂಡು ಅಪ್ಪ ನೀವು ಬೇರೆ ತರನೇ ಸಿನಿಮಾ ಮಾಡಿ ಎಂದು ಹೇಳಿ.. 'ಬಿಗ್ ಮಾಮಾ ಸೌಜ್' ಅನ್ನೋ ಪಿಕ್ಚರ್ ನ ಮೈಂಡ್ ನಲ್ಲಿ ಇಟ್ಟುಕೊಂಡು ಅದೆಲ್ಲಾ ಆಯಿತು. ಅವನದು ಕೈ ವಿಶಾಲ. ಸ್ವಲ್ಪ ಚೆನ್ನಾಗೆ ಮಾಡಬೇಕು. ಆದ್ರೆ ನನ್ನ ಮ್ಯಾಥ್ ಮೆಟಿಕ್ಸ್ ರಾಂಗ್ ಆಯ್ತು. 1.52 ಕೋಟಿ ರೂ ಬಜೆಟ್ ಆಯಿತು. ಬಿಡುಗಡೆ ಮಾಡಿದಾಗ 71 ಲಕ್ಷ ಕವರೇಜ್ ಆಯಿತು. ಮಿಕ್ಕ ದುಡ್ಡೆಲ್ಲಾ ಹೋಯಿತು" - ಜಗ್ಗೇಶ್, ನಟ[ಅವಮಾನ ಸಹಿಸದೆ ನಾನ್ ವೆಜ್ ಮುಟ್ಟಲ್ಲ ಅಂತ ಶಪಥ ಮಾಡಿದ್ದ ಜಗ್ಗೇಶ್.!]

ನಂತರ ದಾರಿ ಇಲ್ಲದ ಹಾಗೆ ಆಯಿತು..

"ಆ ಸಂದರ್ಭ ನನಗೆ ದೊಡ್ಡ ಮಟ್ಟದ ಲಾಸ್ ಅವತ್ತಿನ ಕಾಲಕ್ಕೆ. ಬಹುಶಃ ಇವತ್ತಿನ ಬೆಲೆ ಅದು ಮೋರ್ ದ್ಯಾನ್ 20 ಕೋಟಿ ಅಂದ್ರು ಬಹುಶಃ ತಪ್ಪಾಗಲ್ಲ. ಅದನ್ನ ನಾನ್ ಬಣ್ಣಕ್ಕಾಗಿ ಕಳೆದೆ. ದಟ್ ವಾಸ್ ದ ಪ್ಯಾಷನ್" - ಜಗ್ಗೇಶ್, ನಟ[ಸುಪ್ರೀಂ ಕೋರ್ಟ್ ನಲ್ಲಿ ಲ್ಯಾಂಡ್ ಮಾರ್ಕ್ ಆದ ಜಗ್ಗೇಶ್-ಪರಿಮಳ ಪ್ರೇಮ ಪ್ರಕರಣದ ತೀರ್ಪು]

ಎಲೆಕ್ಷನ್ ಗೆ ಬಳಸಿಕೊಂಡರು

"ಆದಾದ ನಂತರ ನನ್ನನ್ನ ಎಲೆಕ್ಷನ್ ಗೂ ಬಳಸಿಕೊಂಡ್ರು. ಅಲ್ಲೂ ಕೂಡ ನಾನು ಸೋತೆ. ಬಹುಶಃ 2004 ಅದು. ನನ್ನ ಜೀವನದ ತುಂಬಾ ಕಠಿಣವಾದ ದಿನಗಳು. ಅವತ್ತಿನ ಕೆಲವು ನಿರ್ಮಾಪಕರು ಜಗ್ಗೇಶ್ ಅವರೇ ಇಷ್ಟು ಅನ್ ಫಿಟ್ ನಿಮಗೆ ದುಡ್ಡು ಕೊಡೋಕೆ. ನಿಮಗೆ ಅಷ್ಟು ಕೊಡೋಕೆ ಆಗಲ್ಲ. ನೀವು ಇಷ್ಟಕ್ಕೆ ಮಾಡಿ. ಅಂತ ಬಹಳ ಕೆಟ್ಟದಾಗಿ ಮಾತಾಡೋಕೆ ಶುರು ಮಾಡಿದ್ರು" - ಜಗ್ಗೇಶ್, ನಟ

ನನಗೋಸ್ಕರ ನನ್ ಹೆಂಡ್ತಿ ಕೆಲಸಕ್ಕೆ ಹೋದ್ಲು...

"ಪಾಪ ನನಗೋಸ್ಕರ ನನ್ ಹೆಂಡ್ತಿ ಕೆಲಸಕ್ಕೆ ಹೋಗೋಕೆ ಶುರು ಮಾಡಿದ್ಲು. ಯಾವುದೋ ಆಫೀಸ್ ಗೆ 30 ಸಾವಿರ ಸಂಬಳಕ್ಕೆ ಕೆಲಸಕ್ಕೆ ಹೋದ್ಲು. ಮಕ್ಕಳಿಗೆ ನಾನು ಅವಾಗ ಯಾವುದೇ ಫೆಸೀಲಿಟಿ ಕೊಡೋಕೆ ಆಗ್ಲಿಲ್ಲ. ತುಂಬಾ ಬೇಜಾರು ಆಯ್ತು. ಐ ಶುಡ್ ಥ್ಯಾಂಕ್ ಮೈ ಹೌಸ್ ಪೀಪಲ್. ಪಾಪ ಒಂದು ದಿನ ಕೂಡ ನನಗೆ ಯಾವುದೇ ಬೇಡಿಕೆ ಇಟ್ಟವರಲ್ಲ. ಆಡೋದಲ್ಲಿ ಹೋಗೋರು. ನಡೆದುಕೊಂಡು ಹೋಗೋರು. ಯಾವ ಸ್ವಾಭಿಮಾನ ಇಲ್ಲ. ಯಾವ ಆರ್ಟಿಸ್ಟ್ ಮಗನು ಅಲ್ಲ. ಅವರ ಪಾಡಿಗೆ ಅವರು ಇದ್ದರು" - ಜಗ್ಗೇಶ್, ನಟ

ಲೈಫ್ ನಲ್ಲಿ ಏನಾದ್ರು ಮಾಡ್ಲೇಬೇಕು ಅಂತ ಡಿಸೈಡ್ ಮಾಡಿದೆ..

"ರಮೇಶ್ ಮತ್ತೆ ವಾಪಸ್ಸು ಕೂತೆ. ಪ್ಲಾನ್ ಮಾಡಿದೆ. ಲೈಫ್ ನಲ್ಲಿ ಏನಾದ್ರು ಮಾಡಬೇಕು ಅಂತ ಡಿಸೈಡ್ ಮಾಡ್ತಿದ್ದೆ. ಕರೆಕ್ಟ್ ಆಗಿ ಆ ಟೈಮ್ ನಲ್ಲಿ ನಿಂತು ಹೋಗಿದ್ದ 'ಮಠ' ಸಿನಿಮಾ ಬಿಡುಗಡೆ ಆಗುತ್ತೆ. ಅವತ್ತಿನ ಕೆಲ ಮಾಧ್ಯಮಗಳು ಬರೆದಿತ್ತು.. ನೂರನೇ ಚಿತ್ರ ಬಹುತೇಕರು 'ಮಠ' ಸೇರ್ ತಾರೆ. ಅದರಲ್ಲಿ ಜಗ್ಗೇಶ್ ಖಂಡಿತವಾಗಿಯೂ ಈ ಬಾರಿ 'ಮಠ' ಸೇರುತ್ತಾರೆ ಅಂತ ಬರೆದಿದ್ರು. ದುಃಖ ಆಯ್ತು ನಂಗೆ"- ಜಗ್ಗೇಶ್, ನಟ

ಜಗ್ಗೇಶ್ ರನ್ನು ಕೈಬಿಡದ ಒಬ್ಬರೇ ವ್ಯಕ್ತಿ ಇವರು..

"ಯಾವತ್ತು ನನ್ನ ಬಂಧು, ನನ್ನ ಬಾಂಧವ, ನನ್ನ ಕಷ್ಟದಲ್ಲಿ, ಒಬ್ಬರು ಯಾವತ್ತು ಇದ್ದೇ ಇರುತ್ತಾರೆ. ಇಡೀ ವಿಶ್ವ ನನ್ನ ಬಿಟ್ಟು ಹೋದ್ರು ಅವರು ಮಾತ್ರ ನನ್ನ ಜೊತೆ ಇದ್ದೇ ಇರುತ್ತಾರೆ. ಅದು ನಾನು ನಂಬಿರೋ ರಾಘವೇಂದ್ರ ಸ್ವಾಮಿಗಳು. ರಾಯರು ತಿರುಗಿ ವಾಪಸ್ಸು ಬರ್ತಾರೆ. ನನ್ನ 'ಮಠ' ಮಠ ಸೇರುತ್ತಾರೆ ಅಂತ ಹೇಳಿದ್ರಲ್ಲಾ. ಅದು ಮೆಗಾ ಹಿಟ್ ಆಗುತ್ತೇ" ಎಂದು ಮಠ ಚಿತ್ರದ ಯಶಸ್ಸಿನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು.

'ಮಠ' ನಂತರ ಹಿಟ್ ಆದ ಸಿನಿಮಾಗಳು

" 'ಮಠ' ಹಿಟ್ ಆದ ನಂತರ ಇಮೀಡಿಯೆಟ್ ಆಗಿ ಎಸ್ ವಿ ಬಾಬು ಬರ್ತಾರೆ. 'ಹನಿಮೂನ್ ಎಕ್ಸ್ ಪ್ರೆಸ್' ಚಿತ್ರ ತೆಗೀತಾರೆ. ಮೆಗಾ ಹಿಟ್ ಆಗುತ್ತೆ. 'ತೆನಾಲಿ ರಾಮ' ನಿಮ್ಮ ಜೊತೆ ಮಾಡ್ತೀನಿ. ಮೆಗಾ ಹಿಟ್ ಆಗುತ್ತೆ. ತಿರುಗ ಎಂಗ್ ಸ್ಟಾರ್ಟ್ ಆಗುತ್ತೆ ಅಂದ್ರೆ, ಜಗ್ಗೇಶ್ ಅವರೇ ನಿಮಗೆ ಸಂಭಾವನೆ ಅಷ್ಟು ಕೊಡೋಕೆ ಆಗಲ್ಲ ಅಂದ್ರಲ್ಲ. ಅವರೇ ನನ್ನ ಮುಂದೆ ಬಂದು ನಿಂತು ಕೊಳ್ಳೋಕೆ ಆಗಿಲ್ಲ. ಯಾಕಂದ್ರೆ ಐದು ಪಟ್ಟು ಜಾಸ್ತಿ ಇತ್ತು ನನ್ನ ಸಂಭಾವನೆ" - ಜಗ್ಗೇಶ್, ನಟ

ಈಗ ನಾನ್ ಯಾವ್ ಬಿಲ್ಡಪ್ ನಂಬಲ್ಲ..

" ಐ ಯಾಮ್ ಸೋ ಹ್ಯಾಪಿ ರಮೇಶ್. ಇವತ್ತು ತಿರುಗ ನಂಗೆ ನೂರು ಜನರನ್ನು ಸಾಕೋ ರೀತಿ ರಾಯರು ನನ್ನನ್ನು ಬೆಳೆಸಿದ್ದಾರೆ. ನಾನು ವೆರಿ ಕೇರ್ ಫುಲ್. ನಾನ್ ಯಾವ ಬಿಲ್ಡಪ್ ನಂಬಲ್ಲ. ನಾನೊಬ್ಬ ಏಕಾಂಗಿ. ನಾನು ಒಬ್ಬನೇ ಕುಳಿತಿರುತ್ತೇನೆ. ನನಗೆ ಇಷ್ಟ ಆಯಿತಾ ಬಂದು ಮಿಂಗಲ್ ಆಗ್ತೀನಿ. ಕಷ್ಟವಾಯಿತಾ ಯಾರ ಕೈಗೂ ಸಿಗಲ್ಲ" - ಜಗ್ಗೇಶ್, ನಟ

English summary
Kannada Actor Jaggesh spoke about Kannada Movie 'Makeup' in Zee Kannada Channel's popular show 'Weekend with Ramesh-3'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada