For Quick Alerts
  ALLOW NOTIFICATIONS  
  For Daily Alerts

  ನಿರಂಜನ್ ದೇಶಪಾಂಡೆ ಪ್ರಕಾರ ನಟ ನೀನಾಸಂ ಸತೀಶ್ 'ಸ್ವಾರ್ಥಿ'ಯಂತೆ.!

  By Harshitha
  |

  'ಲೂಸಿಯಾ', 'ಲವ್ ಇನ್ ಮಂಡ್ಯ', 'ರಾಕೆಟ್', 'ಬ್ಯೂಟಿಫುಲ್ ಮನಸ್ಸುಗಳು' ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿರುವ ನಟ ನೀನಾಸಂ ಸತೀಶ್ 'ಸ್ವಾರ್ಥಿ'ಯಂತೆ.!

  ಹಾಗಂತ ಹೇಳಿರುವುದು 'ಬಿಗ್ ಬಾಸ್' ಮನೆಗೆ ಹೋಗಿ ಬಂದಿದ್ದ ನಟ, ಆರ್.ಜೆ ಹಾಗೂ ನಿರೂಪಕ ಆಗಿರುವ ನಿರಂಜನ್ ದೇಶಪಾಂಡೆ.

  ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಕುರಿ ಪ್ರತಾಪ್, ಶಾಲಿನಿ ಜೊತೆ ಅತಿಥಿಯಾಗಿ ಭಾಗವಹಿಸಿದ ನಿರಂಜನ್ ದೇಶಪಾಂಡೆ, ನೀನಾಸಂ ಸತೀಶ್ ರವರನ್ನ 'ಸ್ವಾರ್ಥಿ' ಅಂತ ಕರೆದರು.

  'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ 'ದಿಢೀರ್ ಬೆಂಕಿ' ಸುತ್ತಿನಲ್ಲಿ, ''ಈ ಮಾತುಗಳನ್ನು ಕೇಳಿದಾಗ ನಿಮಗೆ ಯಾರು ನೆನಪಾಗುತ್ತಾರೆ'' ಎನ್ನುತ್ತಾ 'ಸ್ವಾರ್ಥಿ' ಎಂಬ ಪದವನ್ನ ನಿರೂಪಕ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಮುಂದಿಟ್ಟರು.

  ಆಗ ಹಿಂದು-ಮುಂದು ಯೋಚನೆ ಮಾಡದೆ 'ನೀನಾಸಂ ಸತೀಶ್' ಎಂದುಬಿಟ್ಟರು ನಿರಂಜನ್ ದೇಶಪಾಂಡೆ. ಅದು 'ದಿಢೀರ್ ಬೆಂಕಿ' ಸುತ್ತು ಆಗಿದ್ರಿಂದ, 'ಸ್ವಾರ್ಥಿ' ಎಂದು ಹೇಳಿದ್ಯಾಕೆ ಎಂಬುದಕ್ಕೆ ನಿರಂಜನ್ ವಿವರಣೆ ಕೊಡಲಿಲ್ಲ. ನಿರೂಪಕ ಅಕುಲ್ ಕೂಡ ವಿವರಣೆ ಕೇಳಲಿಲ್ಲ.

  English summary
  Niranjan Deshpande calls Ninasam Sathish 'Selfish'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X