»   » ಡಾ.ರಾಜ್ ಅವರ ಕನ್ನಡದ ಬಗ್ಗೆ ಪ್ರೋ.ಕೃಷ್ಣೇಗೌಡ ಹೇಳಿದ್ದೇನು?

ಡಾ.ರಾಜ್ ಅವರ ಕನ್ನಡದ ಬಗ್ಗೆ ಪ್ರೋ.ಕೃಷ್ಣೇಗೌಡ ಹೇಳಿದ್ದೇನು?

Posted By:
Subscribe to Filmibeat Kannada

ಕನ್ನಡ ಭಾಷೆಗೆ ಕವಿಗಳು, ಸಾಹಿತಿಗಳು, ಲೇಖಕರು ಹೀಗೆ ಎಲ್ಲರ ಕೊಡುಗೆಯೂ ಅಪಾರ. ಇವರುಗಳಲ್ಲಿ ಅನೇಕರು ಓದಿ ಬರೆದು ವಿದ್ಯಾವಂತರಾಗಿದ್ದವರು. ಆದ್ರೆ, ಓದದೇ, ಬರೆಯದೇ ಕನ್ನಡ ಭಾಷೆಯನ್ನ ಬೆಳಸಿದವರು ಬಹಳ ಅಪರೂಪ. ಅಂತವರಲ್ಲಿ ವಟನಟ ಡಾ.ರಾಜ್ ಕುಮಾರ್ ಕೂಡ ಒಬ್ಬರು.[ಸಾಧಕರ ಸೀಟ್ ಮೇಲೆ ಪ್ರಾಣೇಶ್ ಆಯ್ತು: ಈಗ ಪ್ರೊ.ಕೃಷ್ಣೇಗೌಡರ ಸರದಿ.!]

ಡಾ.ರಾಜ್ ಕುಮಾರ್ ಅವರು ಓದಿದ್ದು ಕೇವಲ 3ನೇ ತರಗತಿ. ಆದ್ರೆ, ಅವರ ಮಾತು, ಸ್ಪಷ್ಟತೆ, ಕನ್ನಡ ಭಾಷೆ ಮೇಲೆ ಅವರು ಹೊಂದಿದ್ದ ಹಿಡಿತ ಬೇರೆ ಯಾರಿದಂಲೂ ಸಾಧ್ಯವಿಲ್ಲ. ಇದನ್ನ ಪ್ರೋ.ಕೃಷ್ಣೇಗೌಡ ಅವರು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹೆಮ್ಮೆಯಿಂದ ಹೇಳಿದರು.[ನಿಜವಾಗಲೂ ಕನ್ನಡವನ್ನ ಉಳಿಸುತ್ತಿರುವವರು ವಿದ್ಯಾವಂತರಲ್ಲ, ಇವರು.!]

Prof.Krishnegowda Talk About Dr Rajkumar

''ಅದೇಷ್ಟೋ ಕಲಾವಿದರು ಪಾತ್ರವಾಗಿ ಬಂದು ಕನ್ನಡವನ್ನ ಮಾತನಾಡುತ್ತಾರೆ. ಆದ್ರೆ, ಡಾ.ರಾಜ್ ಕುಮಾರ್...... ಅವರು ಓದಿದ್ದು ಕೇವಲ 3ನೇ ತರಗತಿ. ಆ ಪುಣ್ಯಾತ್ಮನ ಬಾಯಲ್ಲಿ ಕನ್ನಡವನ್ನ ಕೇಳ್ಬೇಕು ಅಂದ್ರೆ ಅದೊಂಥರ ಚೆಂದ....ಕನ್ನಡಕ್ಕೆ ಇಂತಾಹದೊಂದು ಸೌಂದರ್ಯವಿದೆ, ಕನ್ನಡಕ್ಕೊಂದು ಶಕ್ತಿಯಿದೆ, ಕನ್ನಡಕ್ಕೊಂದು ಲಯವಿದೆ ಎಂಬುದನ್ನ ತೋರಿಸಿಕೊಟ್ಟವರು.''- ಪ್ರೋ.ಕೃಷ್ಣೇಗೌಡ[ಪ್ರೊ.ಕೃಷ್ಣೇಗೌಡರ ಬದುಕಿನಲ್ಲಿ ಸಿಡಿಲಿನಂತೆ ಬಡಿದ ಎರಡು ದುರ್ಘಟನೆಗಳು..]

''ಕನ್ನಡವನ್ನ ನಿಜವಾಗಲೂ ಉಳಿಸುತ್ತಿರುವುದು ಅಕ್ಷರಸ್ಥರಲ್ಲ. ಕನ್ನಡವನ್ನ ಉಳಿಸಿ, ಬೆಳಸುತ್ತಿರುವುದು, ಕನ್ನಡ ಜೀವಂತವಾಗಿರಲು ಕಾರಣ ಅನಕ್ಷರಸ್ಥರೇ. ಇವರೆಲ್ಲರೂ ಕನ್ನಡವನ್ನೇ ನಂಬಿದವರು, ಕನ್ನಡವನ್ನೇ ಬೆಳಸಿದವರು ಎಂದು ನಿಜವಾದ ಕನ್ನಡ ರಕ್ಷಕರು ಯಾರು ಎಂದು ಪ್ರೋ.ಕೃಷ್ಣೇಗೌಡ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

English summary
Prof.Krishnegowda takes Part in Zee Kannada Channel's Popular show Weekend With Ramesh-3. and He Talk About Dr Rajkumar

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X