»   » ಪಬ್ಲಿಕ್ ಟಿವಿ ರಂಗಣ್ಣನ ಜತೆ ವೀಕೆಂಡ್ ವಿತ್ ರಮೇಶ್

ಪಬ್ಲಿಕ್ ಟಿವಿ ರಂಗಣ್ಣನ ಜತೆ ವೀಕೆಂಡ್ ವಿತ್ ರಮೇಶ್

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ತಲೆಯ ಮೇಲೆ ಬಿಳಿ ಕೂದಲ ನಡುವೆ ಅಲ್ಲಲ್ಲಿ ಕರಿ ಕೂದಲು, ಎಂದೂ ಕೆರೆಯದ ಕುರುಚಲು ಗಡ್ಡ, ತೀಕ್ಷ್ಣ ಕಣ್ಣು, ಹೆಗಲ ಮೇಲೆ ಫ್ಲಾಪ್ ಇರುವ ಇಳಿಬಿಟ್ಟ ಅಂಗಿ, ಕಾಲಲ್ಲಿ ಸಾದಾ ಚಪ್ಪಲಿ... ಈ ನೋಟವಿರುವ ವ್ಯಕ್ತಿ ಯಾರು ಬೇಕಾದರೂ ಆಗಬಹುದು. ಆದರೆ, ಅವರೆಲ್ಲ ರಂಗಣ್ಣ ಆಗಲು ಸಾಧ್ಯವೆ? ಇಂಪಾಸಿಬಲ್!

  ಟಿವಿ ಪರದೆಯ ಮೇಲೆ ಬಂದು ಕುಳಿತರೆ ಯಾವುದೇ ವಿಷಯದ ಮೇಲೆ ಅತ್ಯಂತ ಅಧಿಕಾರಯುತವಾಗಿ, ನಿರರ್ಗಳವಾಗಿ ಮಾತನಾಡಬಲ್ಲ, ರಾಜಕಾರಣಿಗಳು ಸೇರಿದಂತೆ ತಮ್ಮ ಮಾತಿನ ಗರಗಸದಿಂದಲೇ ಕತ್ತರಿಸಿ ಹಾಕಬಲ್ಲ ತಾಕತ್ತಿರುವ, ಮಾಡಬೇಕೆಂದುಕೊಂಡದ್ದನ್ನು ಮಾಡಿಯೇ ತೀರುವ ಛಲದಂಕಮಲ್ಲ ಪತ್ರಕರ್ತ ಅಂದರೆ ಅದು ಕೂಡ ರಂಗಣ್ಣ ಮಾತ್ರವೆ.

  ನಿರೂಪಕ ರಮೇಶ್ ಅರವಿಂದ್ ಅರ್ಪಿಸುವ 'ವೀಕೆಂಡ್ ವಿತ್ ರಮೇಶ್' ರಿಯಾಲಿಟಿ ಶೋನಲ್ಲಿ ಆ.16ರಂದು ಪತ್ರಿಕೋದ್ಯಮದಲ್ಲಿ 'ಫೈರ್ ಬ್ರಾಂಡ್' ಎಂದೇ ಖ್ಯಾತರಾಗಿರುವ ಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಎಚ್.ಆರ್. ರಂಗನಾಥ್ ಅವರ ವಿಭಿನ್ನ ವ್ಯಕ್ತಿತ್ವ ಅನಾವರಣಗೊಂಡಿದೆ. 'ಓಹೋ, ರಂಗಣ್ಣ ಹೀಗೂ ಇರ್ತಾರಾ' ಎಂದು ವಿಸ್ಮಯವಾಗುವಂತೆ ಕಾರ್ಯಕ್ರಮ ಮೂಡಿಬಂದಿದೆ.

  ಪ್ರತಿ ಶನಿವಾರ ಝೀ ಕನ್ನಡ ವಾಹಿನಿಯಲ್ಲಿ ಬರುತ್ತಿರುವ ಈ ಜನಪ್ರಿಯ ಕಾರ್ಯಕ್ರಮದಲ್ಲಿ ಮೊದಲಿಗೆ ಪುನೀತ್ ರಾಜ್ ಕುಮಾರ್, ರವಿಚಂದ್ರನ್ ನಂತರ ಎಚ್ ಆರ್ ರಂಗನಾಥ್ ಅವರು ಕಾಣಿಸಿಕೊಂಡಿದ್ದಾರೆ. ಯಾವುದೇ ನಾಟಕೀಯತೆ ಇಲ್ಲದೆ ಆತ್ಮೀಯವಾಗಿ ಬರುತ್ತಿರುವ ರಿಯಾಲಿಟಿ ಶೋನಲ್ಲಿ, ನಾವು ಕಾಣದ ವ್ಯಕ್ತಿತ್ವ ಅನಾವರಣಗೊಳ್ಳುತ್ತಿದೆ.

  ಈ ಕಾರ್ಯಕ್ರಮದಲ್ಲಿ ತಾನು ನಡೆದುಕೊಂಡು ಬಂದ ಜೀವನ, ಪತ್ರಿಕೋದ್ಯಮ, ಎದುರಿಸಿದ ಸಮಸ್ಯೆಗಳು ಮತ್ತು ಪಬ್ಲಿಕ್ ಟಿವಿ ಕಟ್ಟಿದ ಬಗ್ಗೆ ರಂಗಣ್ಣ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅವರೊಂದಿಗೆ ಒಡನಾಡಿದ ಹಲವಾರು ಪತ್ರಕರ್ತರು ಕೂಡ ರಂಗನಾಥ್ ಬಗ್ಗೆ ತಮ್ಮ ಮೆಚ್ಚುಗೆಯ ಅನಿಸಿಕೆಗಳನ್ನು ಹರಿಯಬಿಟ್ಟಿದ್ದಾರೆ. (ವೀಕೆಂಡ್ ವಿತ್ ರಮೇಶ್ ವಿತ್ ಪುನೀತ್ ರಾಜಕುಮಾರ್)

  ಕಾರ್ಯಕ್ರಮದಲ್ಲಿ ರಂಗನಾಥ್ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಪ್ರತಿಸ್ಪರ್ಧಿ ಮಾಧ್ಯಮ ರಂಗದವರು ರಂಗಣ್ಣನ ಜೊತೆಗಿನ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ. (ವೀಕೆಂಡ್ ವಿತ್ ರಮೇಶ್ ವಿತ್ ರವಿಚಂದ್ರನ್)

  ದನ ಕಾಯುವುದು ಅಂದ್ರೆ ಬಲು ಪ್ರೀತಿ

  ನನಗೆ ದನ ಕಾಯುವುದು ಎಂದರೆ ನನಗೆ ಬಹಳ ಅಚ್ಚುಮೆಚ್ಚು ಎಂದು ತನ್ನ ಬಾಲ್ಯದ ಜೀವನವನ್ನು ಮೆಲುಕು ಹಾಕಿದ ರಂಗನಾಥ್, ಸಣ್ಣ ವಯಸ್ಸಿನಿಂದಲೂ ತನಗೆ ಬೇಕಾದನ್ನು ಹಠ ಸಾಧಿಸಿ ಗಿಟ್ಟಿಸಿಕೊಳ್ಳುತ್ತಿದ್ದೆ ಬಿಡುತ್ತಿರಲಿಲ್ಲ, ಇಲ್ಲಿಯವರೆಗೆ ಗಡ್ಡ ಕೂಡ ಕೆರೆದಿಲ್ಲ ಎಂದು ಅನುಭವದ ಬುತ್ತಿಯನ್ನು ಬಿಚ್ಚಿಟ್ಟರು.

  ರಂಗ ಬಗ್ಗೆ ಮಾಜಿ ಸಿಎಂ ಹೆಮ್ಮೆಯ ಮಾತು

  ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ರಂಗನಾಥ್ ಟಿವಿ ವಾಹಿನಿಯನ್ನು ಮಾಡಲು ಹೊರಟಾಗ ಅದರಲ್ಲಿ ಅವರಿಗೆ ಯಶಸ್ಸು ಸಿಗುತ್ತೋ, ಇಲ್ಲವೋ ಎನ್ನುವುದರ ಬಗ್ಗೆ ನನಗೆ ಭಯವಾಗಿತ್ತು. ಆದರೆ ವಾಹಿನಿ ಸ್ಥಾಪಿಸಿ ರಂಗನಾಥ್ ಸೈ ಎನಿಸಿಕೊಂಡಿದ್ದಾರೆ. ನಾನು ಅವರನ್ನು ಬಹಳ ವರ್ಷಗಳಿಂದ ಬಲ್ಲೆ. ಅವರ ಸ್ನೇಹವನ್ನು ಜೋಪಾನವಾಗಿ ಇಟ್ಟುಕೊಳ್ಳುತ್ತೇನೆ.

  ವಾಹಿನಿಗೆ ಪಬ್ಲಿಕ್ ಟಿವಿ ಎಂದು ಹೆಸರಿಟ್ಟ ಬಗ್ಗೆ

  ನಾನು ಒಂದು ದಿನ ಕಾರಿನಲ್ಲಿ ಹೋಗುತ್ತಿದಾಗ ಎದುರಿನಲ್ಲಿ ಪಬ್ಲಿಕ್ ಕ್ಯಾರಿಯರ್ ಎಂದು ಬೋರ್ಡ್ ಬರೆದಿರುವ ಲಾರಿಯನ್ನು ನೋಡಿದೆ. ಸುದ್ದಿ ಸಂಸ್ಥೆ ಕೂಡಾ ಒಂದು ಕ್ಯಾರಿಯರ್. ನಮ್ಮ ಸುದ್ದಿ ಸಂಸ್ಥೆಗೆ ಪಬ್ಲಿಕ್ ಟಿವಿ ಎಂದು ಯಾಕೆ ಹೆಸರಿಡಬಾರದು ಎಂದು ಯೋಚಿಸಿ ಅದೇ ಹೆಸರನ್ನು ಅಂತಿಮಗೊಳಿಸಿದೆವು - ಎಚ್ ಆರ್ ರಂಗನಾಥ್

  ಶ್ರಮ ಪಟ್ಟು ಪಬ್ಲಿಕ್ ಟಿವಿ ಕಟ್ಟಿದ್ದೇವೆ

  ನನಗೆ I have to hit back ಎನ್ನುವ ಛಲವಿತ್ತು. ಟೇಪ್ ಹಿಡಿದುಕೊಂಡು, ಇಟ್ಟಿಗೆ ಹೊತ್ತು ಪಬ್ಲಿಕ್ ಟಿವಿಯನ್ನು ಕಟ್ಟಿದ್ದೇವೆ. ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಬಳಸಿಕೊಂಡು ಪಬ್ಲಿಕ್ ಟಿವಿ ಸ್ಥಾಪಿಸಿದ್ದೇವೆ. ಈ ಉದ್ಯಮ ಸ್ಥಾಪನೆಗೆ ನೂರು ಕೋಟಿ, ಸಾವಿರ ಕೋಟಿ ಬೇಕು ಎಂದು ಹೇಳುತ್ತಿದ್ದವರಿಗೆ ಪಬ್ಲಿಕ್ ಟಿವಿ ಕಟ್ಟುವ ಮೂಲಕ ಉತ್ತರ ಕೊಟ್ಟಿದ್ದೇನೆ ಎಂದು ರಂಗಣ್ಣ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

  ಮಾಧ್ಯಮ ಪ್ರತಿಸ್ಪರ್ಥಿಗಳಿಂದ ರಂಗಣ್ಣಗೆ ಉಘೇ..ಉಘೇ

  ಕನ್ನಡಪ್ರಭದ ಮುಖ್ಯಸ್ಥ ವಿಶ್ವೇಶ್ವರ ಭಟ್, ಒನ್ ಇಂಡಿಯಾ ಸಂಪಾದಕ ಎಸ್ ಕೆ ಶಾಮ ಸುಂದರ, ಕಸ್ತೂರಿ ವಾರ್ತೆಯ ಶಶಿಧರ್ ಭಟ್, ರಾಜ್ ನ್ಯೂಸ್ ವಾಹಿನಿಯ ಹಮೀದ್ ಪಾಳ್ಯ, ಸಮಯ ವಾಹಿನಿಯ ರಂಗನಾಥ್ ಭಾರದ್ವಾಜ್, ಔಟ್ ಲುಕ್ ಸಂಪಾದಕ ಕೃಷ್ಣಪ್ರಸಾದ್, ಟಿವಿ ನಿರೂಪಕ ಗೌರೀಶ್ ಅಕ್ಕಿ ಮುಂತಾದವರು ಕಾರ್ಯಕ್ರಮದಲ್ಲಿ ರಂಗನಾಥ್ ಕಾರ್ಯದಕ್ಷತೆಯನ್ನು ಹಾಡಿಹೊಗಳಿದ್ದಾರೆ.

  ಕನ್ನಡ ಮಾಧ್ಯಮಗಳ ಪ್ರಮುಖರು ಹೇಳಿದ್ದೇನು

  ರಂಗನಾಥ್ ಕಾರ್ಯ ದಕ್ಷತೆಗೆ ಎಲ್ಲರೂ ತಲೆದೂಗಲೇ ಬೇಕು. ಹಿಡಿದ ಕೆಲಸವನ್ನು ಮುಗಿಸದೇ ಬಿಡುತ್ತಿರಲಿಲ್ಲ. ಅವರು ಒಂದು ವಿಶ್ವವಿದ್ಯಾಲಯ ಮತ್ತು ಜ್ಞಾನಭಂಡಾರದಂತೆ, ಅವರಿಂದ ಕಲಿಯುವುದು ಸಾಕಷ್ಟಿದೆ. ರಂಗಣ್ಣ ಒಂದು ಶಕ್ತಿ ಎಂದು ಮಾಧ್ಯಮದ ಪ್ರಮುಖರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

  ರಂಗ ಸಾರಿ ಕೇಳಿದ್ದು ಯಾರನ್ನು?

  ಮಾಧ್ಯಮದವರು ತಮ್ಮ ಅಭಿಪ್ರಾಯ ಹಂಚಿಕೊಂಡ ನಂತರ, ಈಗ ಮಾತಾಡಿದ ಇಬ್ಬರ ಜೊತೆ ನಾನು ಸ್ವಲ್ಪ ರೂಡ್ ಆಗಿ ನಡೆದುಕೊಂಡಿದ್ದೆ ಎಂದು ನನಗೆ ನಂತರ ದಿನದಲ್ಲಿ ರಿವಾಯಿತು. ಈಗಲೂ ಸಮಯ ಮೀರಿಲ್ಲ. ಈ ವೇದಿಕೆಯ ಮೂಲಕ ನಾನು ಅವರಲ್ಲಿ ಸಾರಿ ಕೇಳುತ್ತೇನೆ ಎಂದು ರಂಗನಾಥ್ ಹೇಳಿದ್ದಾರೆ.

  ಲಿಂಗಭೇದ ಅರಿಯದ ರಂಗಣ್ಣ

  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಂಗನಾಥ್ ಸಹೋದರ, ಬಾಲ್ಯದ ಜೀವನದ ಒಂದು ಘಟನೆಯನ್ನು ಮೆಲುಕು ಹಾಕಿದ್ದಾರೆ. ನಮ್ಮ ತಂದೆ ರಂಗನಿಗೆ ಲಿಂಗಭೇದದ ಬಗ್ಗೆ ಅರಿವಿಲ್ಲ ಎಂದು ಲೇವಡಿ ಮಾಡಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

  ಸ್ನೇಕ್ ಶ್ಯಾಮ್

  ರಂಗಣ್ಣ ತುಂಬಾ ಚೇಷ್ಠೆ ಹುಡುಗ. ನಾನು ಮತ್ತು ರಂಗಣ್ಣ ಸಹಪಾಠಿಗಳು. ಅವತ್ತು ಅವನು ನನಗೆ ರಂಗ, ಈಗ ರಂಗಣ್ಣ. ಅವರ ಛಲವನ್ನು ಮೆಚ್ಚಲೇ ಬೇಕು. ರಂಗಣ್ಣ ಸ್ನೇಹಿತ, ಮೈಸೂರು ಪಾಲಿಕೆ ಸದಸ್ಯ ಸ್ನೇಕ್ ಶ್ಯಾಮ್

  English summary
  Public TV news channel head H.R. Ranganath shares his childhood, journalism experiences in reality show Weekend with Ramesh on Zee TV Kannada aired on Aug 16, 2014. Many noted personalities from journalism, politics speak about Ranganath, known as Ranganna.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more