»   » ನಾನಾ ನೀನಾ? ಕಿರುತೆರೆಯಲ್ಲಿ ಅಪ್ಪುಗೆ ಸುದೀಪ್ ಠಕ್ಕರ್

ನಾನಾ ನೀನಾ? ಕಿರುತೆರೆಯಲ್ಲಿ ಅಪ್ಪುಗೆ ಸುದೀಪ್ ಠಕ್ಕರ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಇಬ್ಬರು ಜನಪ್ರಿಯ ನಾಯಕ ನಟರ ಟಿವಿ ರಿಯಾಲಿಟಿ ಶೋಗೆ ವೇದಿಕೆ ಸಜ್ಜಾಗಿದೆ. ಪುನೀತ್ ರಾಜಕುಮಾರ್ ನಡೆಸಿಕೊಡುತ್ತಿರುವ ಕನ್ನಡದ ಕೋಟ್ಯಾಧಿಪತಿ ಸೀಸನ್ 2 ಈಗಾಗಲೇ ಆರಂಭವಾಗಿದ್ದರೆ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಶೋ ಇದೇ ಭಾನುವಾರ (ಮಾ 24) ದಿಂದ ಆರಂಭವಾಗಲಿದೆ.

ತಾರೆಗಳ ನಡುವೆ ತಮ್ಮ ತಮ್ಮ ಅಭಿನಯದ ಚಿತ್ರಗಳ ನಡುವೆ ಪೈಪೋಟಿ ಸಹಜ, ಆದರೆ ಕಿರುತೆರೆಯಲ್ಲೂ ತಮ್ಮ ಕಾರ್ಯಕ್ರಮಗಳಿಗೆ ಪೈಪೋಟಿ ಆರಂಭವಾಗಿರುವುದು ಕನ್ನಡದ ಮಟ್ಟಿಗೆ ಇದೇ ಹೊಸತು.

ಸ್ಯಾಂಡಲ್ ವುಡ್ ನಲ್ಲಿ ನಾಯಕರುಗಳ ನಡುವೆ ಸ್ಪರ್ದೆಗಳು ಸಾಮಾನ್ಯ. ಪುನೀತ್ ಮತ್ತು ಸುದೀಪ್ ಇಬ್ಬರೂ ಪ್ರತಿಭಾನ್ವಿತ ನಟರಿಗೆ ತಮ್ಮದೇ ಆದ ಅಗಾಧ ಅಭಿಮಾನಿ ಬಳಗವಿದೆ. ಈಗ ಚಿತ್ರದ ಯಶಸ್ಸಿನ ನಂತರ ಕಿಚ್ಚನಿಗೆ ಪಕ್ಕದ ಆಂಧ್ರಲ್ಲೋ ಅಭಿಮಾನುಲ ಸಂಖ್ಯಲು ಪೆರುಗುತುನ್ನಾಯಿ.

ಕಿಚ್ಚ Vs ಅಪ್ಪು

ಈ ಎರಡು ರಿಯಾಲಿಟಿ ಶೋಗಳ ಮೂಲಕ ಯಾವ ವಾಹಿನಿ ಮೇಲುಗೈ ಸಾಧಿಸುತ್ತದೆ ಎನ್ನುವ ಕುತೂಹಲ ಈಗಾಗಲೇ ಮನೆ ಮಾಡಿದೆ. ಕಿರುತೆರೆಯಲ್ಲಿ ತಾರೆಗಳ ನಡುವಣ ಪೈಪೋಟಿ ಬಾಲಿವುಡ್ಡಿನಲ್ಲಿ ಮಾಮೂಲು ವಿಚಾರ. ಆದರೆ ಕನ್ನಡದಲ್ಲಿ ಬಲು ಅಪರೂಪ.

ಕೈಯಲ್ಲಿ ಕೋಟಿ ಹೇಳ್ಬಿಟ್ಟು ಹೋಡೀರಿ

ಕನ್ನಡದ ಕೋಟ್ಯಾಧಿಪತಿ ಸೀಸನ್ ಒಂದು ಪ್ರಸಾರವಾಗುತ್ತಿದ್ದಾಗ ನವರಸ ನಾಯಕ ಜಗ್ಗೇಶ್ ನಿರೂಪಣೆಯ 'ಕೈಯಲ್ಲಿ ಕೋಟಿ ಹೇಳ್ಬಿಟ್ಟು ಹೋಡೀರಿ' ಅನ್ನೋ ಇನ್ನೊಂದು ರಿಯಾಲಿಟಿ ಶೋ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಎರಡೂ ಶೋಗಳ ಪ್ರಸಾರದ ಸಮಯ ಬೇರೆ ಬೇರೆಯಾಗಿದ್ದರೂ ಕೋಟ್ಯಾಧಿಪತಿ ಶೋ ಜನಪ್ರಿಯತೆಯ ಉತ್ತುಂಗಕ್ಕೇರಿತ್ತು.

ಕೆಬಿಸಿ Vs ಬಿಗ್ ಬಾಸ್

ಭಾರತೀಯ ಚಿತ್ರರಂಗದ ಮೇರು ನಟ ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದ 'ಕೌನ್ ಬನೇಗಾ ಕರೋಡ್ ಪತಿ - 6' ಕಾರ್ಯಕಮಕ್ಕೆ ಸರಿಯಾಗಿ ಸಲ್ಮಾನ್ ಖಾನ್ ನಿರೂಪಣೆಯ 'ಬಿಗ್ ಬಾಸ್' ಆರನೇ ಆವೃತ್ತಿ ಆರಂಭವಾಯಿತು. ಬಿಗ್ ಬಾಸ್ ಕಾರ್ಯಕ್ರಮ ಕೆಬಿಸಿಗೆ ಹೋಲಿಸಿದರೆ ಸ್ವಲ್ಪ ಮುನ್ನಡೆ ಸಾಧಿಸಿತ್ತು.

ಕೆಬಿಸಿ Vs ಕಿಲಾಡಿ

ಕೌನ್ ಬನೇಗಾ ಕರೋಡ್ ಪತಿ ನಾಲ್ಕನೇ ಆವೃತ್ತಿಗೂ 'ಕತ್ರೋನ್ ಕಿ ಕಿಲಾಡಿ' ಮೂರನೇ ಮತ್ತು ನಾಲ್ಕನೇ ರಿಯಾಲಿಟಿ ಶೋ ನಡುವೆ ಪೈಪೋಟಿ ನಡೆದಿತ್ತು. ಕೆಬಿಸಿ ಶೋಗೆ ಅಮಿತಾಬ್ ನಿರೂಪಕರಾಗಿದ್ದರೆ ಕತ್ರೋನ್ ಕಿ ಕಿಲಾಡಿ ಮೂರನೇ ಆವೃತ್ತಿಗೆ ಪ್ರಿಯಾಂಕ ಚೋಪ್ರಾ ಮತ್ತು ನಾಲ್ಕನೇ ಆವೃತ್ತಿಗೆ ಅಕ್ಷಯ್ ಕುಮಾರ್ ನಿರೂಪಕರಾಗಿದ್ದರು. ಕೆಬಿಸಿ ಕಾರ್ಯಕ್ರಮವನ್ನು ಸೋನಿ ಮತ್ತು ಕತ್ರೋನ್ ಕಿ ಕಿಲಾಡಿ ಕಾರ್ಯಕ್ರಮವನ್ನು ಕಲರ್ಸ್ ವಾಹಿನಿ ಪ್ರಸಾರ ಮಾಡಿತ್ತು.

ಬಿಗ್ ಬಾಸ್ Vs ಕಿಲಾಡಿ

ಸೋನಿ ಮತ್ತು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾದ ಬಿಗ್ ಬಾಸ್ 2,3,4 ಆವೃತ್ತಿಗೂ, ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾದ ಕತ್ರೋನ್ ಕಿ ಕಿಲಾಡಿ 2,3,4 ಆವೃತ್ತಿಗೂ ತೀವ್ರ ಪೈಪೋಟಿ ನಡೆದಿತ್ತು. ಶಿಲ್ಪಾ ಶೆಟ್ಟಿ, ಅಮಿತಾಬ್ ಬಚ್ಚನ್ ಮತ್ತು ಸಲ್ಮಾನ್ ಖಾನ್ ಕ್ರಮವಾಗಿ 2,3,4 ಆವೃತ್ತಿಯನ್ನು ನಡೆಸಿಕೊಟ್ಟರು. ಪ್ರಿಯಾಂಕ ಚೋಪ್ರಾ ಮತ್ತು ಅಕ್ಷಯ್ ಕುಮಾರ್ ಕತ್ರೋನ್ ಕಿ ಕಿಲಾಡಿ ಶೋಗೆ ನಿರೂಪಕರಾಗಿದ್ದರು.

ತಮಿಳಿನಲ್ಲಿ

ಸೂರ್ಯ ನಡೆಸಿಕೊಟ್ಟ 'ನೀಂಗಲಂ ವೆಲ್ಲಂ ಒರು ಕೋಡಿ' ರಿಯಾಲಿಟಿ ಶೋಗೂ 'ಕೈಯಲ್ಲಿ ಒರು ಕೋಡಿ' ನಡುವೆ ಪೈಪೋಟಿ ನಡೆದಿತ್ತು. ನೀಂಗಲಂ ವೆಲ್ಲಂ ಒರು ಕೋಡಿ' ಶೋ ವಿಜಯ್ ಟಿವಿಯಲ್ಲಿ ಇನ್ನೊಂದು ಕಾರ್ಯಕ್ರಮ ಸನ್ ಟಿವಿಯಲ್ಲಿ ಪ್ರಸಾರವಾಯಿತು.

English summary
Kannada small screen all set to big reality show. Puneet Rajkumar's Kannadada Kotyadhipati season 2 already started Sudeep's Big Boss starting from March 24th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada