»   » ಶಿವಣ್ಣ 'ಇವರನ್ನ' ತಬ್ಬಿಕೊಂಡ್ಮೇಲೆ ಮೂರು ದಿನ ಸ್ನಾನ ಮಾಡಿರಲಿಲ್ಲ! ಯಾರವರು?

ಶಿವಣ್ಣ 'ಇವರನ್ನ' ತಬ್ಬಿಕೊಂಡ್ಮೇಲೆ ಮೂರು ದಿನ ಸ್ನಾನ ಮಾಡಿರಲಿಲ್ಲ! ಯಾರವರು?

Posted By:
Subscribe to Filmibeat Kannada
ಈ ನಟನಿಗೋಸ್ಕರ ಶಿವಣ್ಣ ಸುಳ್ಳು ಹೇಳಿದ್ರಂತೆ | Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಂದ್ರೆ ಯಾರಿಗ್ತಾನೆ ಇಷ್ಟ ಇಲ್ಲ ಹೇಳಿ.? 'ಕರುನಾಡ ಚಕ್ರವರ್ತಿ' ಶಿವಣ್ಣನನ್ನ ಪ್ರೀತಿಸುವ ಅಭಿಮಾನಿಗಳು, ಆರಾಧಿಸುವ ಭಕ್ತರ ಸಂಖ್ಯೆ ಲೆಕ್ಕವಿಲ್ಲದಷ್ಟು.

ಲಾಂಗ್ ಹಿಡಿದು ಮಾಸ್ ಆಡಿಯನ್ಸ್ ನ ರಂಜಿಸುವ ಶಿವಣ್ಣ, ಕ್ಲಾಸ್ ಆಡಿಯನ್ಸ್ ಗೂ ಅಷ್ಟೇ ಅಚ್ಚುಮೆಚ್ಚು. ಸ್ಯಾಂಡಲ್ ವುಡ್ ನಲ್ಲಿ ಸೆಂಚುರಿ ಬಾರಿಸಿರುವ ಶಿವಣ್ಣನಿಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅಂತಹ ಶಿವಣ್ಣ ಒಬ್ಬರಿಗೆ 'ಮಹಾನ್ ಅಭಿಮಾನಿ'. ಕನ್ನಡ ಚಿತ್ರರಂಗದಲ್ಲಿ 'ಅಜಾತಶತ್ರು' ಅಂತಲೇ ಕರೆಯಿಸಿಕೊಳ್ಳುವ ಶಿವಣ್ಣ ಒಬ್ಬರನ್ನು ತಬ್ಬಿಕೊಂಡಾಗ ಮೂರು ದಿನ ಸ್ನಾನ ಮಾಡಿರಲಿಲ್ವಂತೆ.!

ಯಾರಪ್ಪಾ ಅದು ಅಂತ ಯೋಚನೆ ಮಾಡ್ತಿದ್ದೀರಾ.? ಅವರು ದಕ್ಷಿಣ ಭಾರತದ ಪ್ರಖ್ಯಾತ ಸ್ಟಾರ್. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿದೆ. ಓದಿರಿ...

ಕಮಲ್ ಹಾಸನ್ ಗೆ ಬಹುದೊಡ್ಡ ಫ್ಯಾನ್

ಸಕಲಕಲಾವಲ್ಲಭ ಕಮಲ್ ಹಾಸನ್ ಗೆ 'ಸಿಂಹದ ಮರಿ' ಶಿವರಾಜ್ ಕುಮಾರ್ ಹಾರ್ಡ್ ಕೋರ್ ಫ್ಯಾನ್. ಕಮಲ್ ಹಾಸನ್ ರವರ ಎಲ್ಲ ಚಿತ್ರಗಳನ್ನೂ ಮಿಸ್ ಮಾಡದೆ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದರಂತೆ ಶಿವಣ್ಣ.

ರಮೇಶ್ ಅರವಿಂದ್ 'ಯಾರಿ' ಆಗಿ 'ಇವರು' ಬರಬೇಕಿತ್ತು.!

ಮೂರು ದಿನ ಸ್ನಾನ ಮಾಡಿರಲಿಲ್ಲ.!

ತಮ್ಮ ಅಚ್ಚುಮೆಚ್ಚಿನ ನಟ ಕಮಲ್ ಹಾಸನ್ ರನ್ನ ಒಮ್ಮೆ ಭೇಟಿ ಆಗಿ ತಬ್ಬಿಕೊಂಡ್ಮೇಲೆ, ಶಿವಣ್ಣ ಮೂರು ದಿನ ಸ್ನಾನ ಮಾಡಿರಲಿಲ್ಲ. ಹಾಗಂತ ಸ್ವತಃ ಶಿವಣ್ಣ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ದಿಢೀರ್ ಮುಕ್ತಾಯ: ಕಾರಣವೇನು.?

ಫಸ್ಟ್ ಡೇ ಫಸ್ಟ್ ಶೋ ಮಿಸ್ ಇಲ್ಲ

''ಫಸ್ಟ್ ಡೇ ಫಸ್ಟ್ ಶೋ ಕಮಲ್ ಹಾಸನ್ ಸಿನಿಮಾಗಳನ್ನ ನೋಡುತ್ತಿದ್ದೆ. ಓಪನ್ನಿಂಗ್ ಡೇ ಅವರ ಆಫೀಸ್ ಗೆ ಫೋನ್ ಮಾಡಿ, ರಾಜ್ ಕುಮಾರ್ ಮನೆಗೆ ಟಿಕೆಟ್ ಬೇಕು ಅಂತ ಸುಳ್ಳು ಹೇಳಿ ಹದಿನೈದು ಟಿಕೆಟ್ ತರಿಸಿಕೊಂಡು ಸಿನಿಮಾ ನೋಡ್ತಿದ್ದೆ. ಆಗ ನನಗಿನ್ನೂ 14-15 ವರ್ಷ ಇರಬಹುದು'' ಎಂದಿದ್ದಾರೆ ಶಿವಣ್ಣ.

ಕ್ಲೋಸ್ ಫ್ರೆಂಡ್

ನಟ ಕಮಲ್ ಹಾಸನ್ ರಿಗೆ ಇಂದು ನಟ, ನಿರ್ದೇಶಕ ರಮೇಶ್ ಅರವಿಂದ್ ಹಾಗೂ ಶಿವಣ್ಣ ಆತ್ಮೀಯ ಸ್ನೇಹಿತರು.

English summary
Kannada Actor Shiva Rajkumar revealed that he din't have bath when he first met and hugged Kamal Haasan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X