For Quick Alerts
  ALLOW NOTIFICATIONS  
  For Daily Alerts

  ರಾಘಣ್ಣನ ಮಾತು ಕೇಳಿ ಗದ್ಗಿತರಾದ ಶಿವರಾಜ್ ಕುಮಾರ್

  |

  ಶಿವರಾಜ್ ಕುಮಾರ್ ಜೊತೆಗಿನ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಮುಂದುವರಿದ ಭಾಗ ಹಲವು ಭಾವನಾತ್ಮಕ ಘಟನೆಗಳಿಗೆ ಸಾಕ್ಷಿಯಾಗಿತ್ತು. ಕಾರ್ಯಕ್ರಮದಲ್ಲಿ ಹಾಜರಿದ್ದ ಹಲವು ಸೆಲೆಬ್ರಿಟಿಗಳು ಶಿವಣ್ಣನ ಸರಳತೆ ಮತ್ತು ಹಿಂದೆ ತಮಗೆ ಮಾಡಿದ ಸಹಾಯದ ಬಗ್ಗೆ ವಿವರಿಸಲಾರಂಭಿಸಿದರು.

  ಕಾರ್ಯಕ್ರಮಕ್ಕೆ ದೂರವಾಣಿ ಮೂಲಕ ಮಾತನಾಡಿದ ಸಹೋದರ ರಾಘವೇಂದ್ರ ರಾಜಕುಮಾರ್ ಮಾತನಾಡಿದಾಗಲಂತೂ ಶಿವಣ್ಣ ಅಕ್ಷರಸಃ ಕಣ್ಣೀರ ಕೋಡಿಯನ್ನು ಹರಿಸಿದರು. ಇದೇ ರೀತಿ ಪುನೀತ್ ರಾಜಕುಮಾರ್ ಭಾಗವಹಿಸಿದ್ದ ಈ ಹಿಂದಿನ ಶೋನಲ್ಲಿ ಕೂಡಾ ರಾಘಣ್ಣ ಮಾತನಾಡುತ್ತಿರ ಬೇಕಾದರೆ ಪುನೀತ್ ಭಾವೋದ್ವೇಗಕ್ಕೊಳಗಾಗಿದ್ದರು.

  ಶಿವಣ್ಣನ ಜೊತೆಗಿನ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜಕುಮಾರ್ ಮಾತನಾಡಲು ಆರಂಭಿಸಿದಾಗಲೇ ಕಣ್ಣೀರು ಸುರಿಸಲು ಆರಂಭಿಸಿದ ಶಿವಣ್ಣ, ರಾಘಣ್ಣ ಮಾತು ಮುಂದುವರಿಸುತ್ತಿದಂತೆಯೇ ಬಿಕ್ಕಿಬಿಕ್ಕಿ ಅಳಲಾರಂಭಿಸಿದರು. ಆ ಸಮಯದಲ್ಲಿ ಇಡೀ ಸೆಟ್ಟಿನಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಆವರಿಸಿತು. (ವೀಕೆಂಡ್ ವಿತ್ ರಮೇಶ್ ವಿತ್ ಶಿವಣ್ಣ- ಭಾಗ1)

  ಹಾಗೆಯೇ, ಕಾರ್ಯಕ್ರಮದಲ್ಲಿ ಬಾವಮೈದನ ಮಧು ಬಂಗಾರಪ್ಪ ಶಿವಣ್ಣ - ಗೀತಾ ಮದುವೆಯ ಸಂದರ್ಭದಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕಿದರು. ಶಶಿಕುಮಾರ್, ಬಾಲರಾಜ್, ವಿಜಯ್ ರಾಘವೇಂದ್ರ, ವಿನೋದ್ ಪ್ರಭಾಕರ್, ಬೆಳ್ಳಿ ಚಿತ್ರತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  ರಾಘಣ್ಣನ ಮಾತಿಗೆ ಶಿವಣ್ಣ ನಂತರ ಪ್ರತಿಕ್ರಿಯಿಸಿದ್ದೇನು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

  ರಾಘವೇಂದ್ರ ರಾಜಕುಮಾರ್ ಹೇಳಿದ್ದೇನು?

  ರಾಘವೇಂದ್ರ ರಾಜಕುಮಾರ್ ಹೇಳಿದ್ದೇನು?

  ಎಲ್ಲರ ಮುಂದೆ ಹೇಳ ಬೇಕೆಂದು ನಾನು ಈ ಮಾತನ್ನು ಹೇಳುತ್ತಿಲ್ಲ, ನನಗೆ ಸಿಕ್ಕ ಅವಕಾಶದಲ್ಲಿ ಈ ಮಾತನ್ನು ಹೇಳುತ್ತಿದ್ದೇನೆ. ಈಚೆಗೆ ನಾನು ಹುಷಾರು ತಪ್ಪಿದಾಗ ನಿಮ್ಮ ಮನಸ್ಸನ್ನು ಅರಿತೆ. ಈಗ ನನಗೆ ಅನಿಸುತ್ತಿದೆ, ನನಗೆ ಹುಷಾರು ತಪ್ಪಿದ್ದೇ ಒಳ್ಳೆದಾಯಿತು. ನಾನು ನಿಮ್ಮಲ್ಲಿ ಅಪ್ಪಾಜಿಯನ್ನು ಕಂಡೆ.

  ರಾಘಣ್ಣ ಮುಂದುವರಿಸಿ ಮಾತನಾಡುತ್ತಾ

  ರಾಘಣ್ಣ ಮುಂದುವರಿಸಿ ಮಾತನಾಡುತ್ತಾ

  ಗೀತಾ ಅತ್ತಿಗೆಯಾಗಿರಬಹುದು. ಆದರೆ ಅವರಲ್ಲಿ ನಾನು ಅಮ್ಮನನ್ನು ಕಂಡೆ. ನಾನು ನಿನ್ನ ಹೊಟ್ಟೆಯಲ್ಲಿ ಹುಟ್ಟಿಲ್ಲ ಶಿವು, ಆದರೆ ನಾನು ನಿನ್ನ ಮಗನೇ. ನಾನು ನಿನ್ನಲ್ಲಿ ಅಪ್ಪಾಜಿಯನ್ನು ಕಾಣುತ್ತಿದ್ದೇನೆ. ಏನೋ ಮನಸ್ಸಿಗೆ ಬಹಳ ನೋವಾಗಿ ಈ ಮಾತನ್ನು ಈ ಕಾರ್ಯಕ್ರಮದಲ್ಲಿ ಹೇಳುತ್ತಿದ್ದೇನೆ ಎಂದಾಗ ಶಿವಣ್ಣಾ ಕಣ್ಣೀರು ಹರಿಸಲಾರಂಭಿಸಿದರು. ರಮೇಶ್ ಸಾಂತ್ವನ ಹೇಳಿದರೂ ಶಿವಣ್ಣ ಕಣ್ಣೀರು ಹರಿಸುತ್ತಲೇ ಇದ್ದರು. ಆಗ ನಟ ಬಾಲರಾಜ್ ಮತ್ತು ಶಿವಣ್ಣನ ಸಂಬಂಧಿ ಬಂದು ಶಿವಣ್ಣನನ್ನು ಸಮಾಧಾನ ಪಡಿಸಿದರು.

  ಶಿವಣ್ಣ ಪ್ರತಿಕ್ರಿಯಿಸುತ್ತಾ ಹೇಳಿದ್ದು ಇಷ್ಟು

  ಶಿವಣ್ಣ ಪ್ರತಿಕ್ರಿಯಿಸುತ್ತಾ ಹೇಳಿದ್ದು ಇಷ್ಟು

  ರಾಘಣ್ಣನನ್ನು ಕಂಡರೆ ಮನಸ್ಸಿಗೆ ಬಹಳ ನೋವಾಗುತ್ತೆ. ನನಗಿಂತ ಮೂರು ವರ್ಷ ಚಿಕ್ಕವನು. ನಮ್ಮೆಲ್ಲರಿಗಿಂತ ಆಹಾರ, ವ್ಯಾಯಾಮದಲ್ಲಿ ಕಟ್ಟುನಿಟ್ಟು, ಆದರೂ ಅವನಿಗೆ ಹೀಗಾಯಿತಲ್ಲಾ ಎನ್ನುವ ನೋವು ನನ್ನನ್ನು ಇತ್ತೀಚೆಗೆ ತೀವ್ರವಾಗಿ ಕಾಡುತ್ತಿದೆ. ಅವನು ಬರಬರುತ್ತಾ ತುಂಬಾ ಇಮೋಷನಲ್ ಆಗುತ್ತಿದ್ದಾನೆ.

  ಶಿವಣ್ಣ ಮಾತು ಮುಂದುವರಿಸುತ್ತಾ

  ಶಿವಣ್ಣ ಮಾತು ಮುಂದುವರಿಸುತ್ತಾ

  ಅವನು ಸುಮ್ಮನೆ ಆಲೋಚನೆ ಮಾಡಿಕೊಂಡು ಇರುತ್ತಾನೆ. ಅವನ ಜೊತೆ ಇಡೀ ನಮ್ಮ ಕುಟುಂಬವೇ ಇದೆ. ಬಂದಿದ್ದನ್ನು ಅನುಭವಿಸಲೇ ಬೇಕು, ದೇವರು ಇಟ್ಟಾಗೆ ಆಗಲಿ. ಸಿಂಗಾಪುರದಲ್ಲಿ ಬಹಳಷ್ಟು ಶ್ರಮಪಟ್ಟಿದ್ದೇವೆ. ನನ್ನ ಸ್ನೇಹಿತ ರಾಘಣ್ಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವವರೆಗೆ ರಾಘು ಜೊತೆಗಿದ್ದ. ಅವನು ನನ್ನ ಮೇಲೆ ಇಟ್ಟ ಪ್ರೀತಿಗೆ ನಾನು ಇದ್ದಷ್ಟ ದಿನ ಅದನ್ನು ಕಾಪಾಡಿಕೊಂಡು ಬರುವ ಶಕ್ತಿ ದೇವರು ನನಗೆ ನೀಡಲಿ.

  ಬೇರೆ ವಿಚಾರದತ್ತ ಶಿವಣ್ಣನ ಮಾತು

  ಬೇರೆ ವಿಚಾರದತ್ತ ಶಿವಣ್ಣನ ಮಾತು

  ಮನಮೆಚ್ಚಿದ ಹುಡುಗಿ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು, ಸುಧಾರಾಣಿ ಚಿತ್ರದ ನಾಯಕಿಯಾಗಿದ್ದರು. ಮೂರು ತಿಂಗಳ ಹಿಂದೆ ನನ್ನ ಮದುವೆಯಾಗಿತ್ತು. ಗೀತಾಗೆ ನಾಯಕಿಯ ಜೊತೆ ತುಂಬಾ ಕ್ಲೋಸ್ ಆದರೆ ಇಷ್ಟವಾಗುತ್ತಿರಲಿಲ್ಲ. ಚಿತ್ರದ ಹಾಡೊಂದರ ಚಿತ್ರೀಕರಣವಾಗಬೇಕಾಗಿತ್ತು. ಆ ಸಮಯದಲ್ಲಿ ಗೀತಾ ಮತ್ತೆ ಅಪ್ಸೆಟ್ ಆಗಬಾರದೆಂದು ನನ್ನ ಕಸಿನ್ ಹಾಡಿನ ಚಿತ್ರೀಕರಣ ಮುಗಿಯುವವರೆಗೆ ಕಾರು ಓಡಿಸುವುದನ್ನು ಕಲಿಸಲು ಗೀತಾಳನ್ನು ಕರೆದುಕೊಂಡು ಹೋಗುತ್ತಿದ್ದ ಎಂದು ಹೇಳಿ ಶಿವಣ್ಣ ಸೆಟ್ಟಿನಲ್ಲಿ ಇದ್ದವರನ್ನು ನಗೆಗಡಲಿಗೆ ತೇಲಿಸಿದರು.

  English summary
  Hatrick Hero Shivaraj Kumar in Weekend with Ramesh TV show continued Part 2 in Zee Kannada telecasted on Sep 28

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X