»   » ಕನ್ನಡತಿ ಭಾಗವಹಿಸಿದ್ದ 'ಸೂಪರ್ ಮಾಮ್ಸ್' ಶೋ ಫಲಿತಾಂಶ

ಕನ್ನಡತಿ ಭಾಗವಹಿಸಿದ್ದ 'ಸೂಪರ್ ಮಾಮ್ಸ್' ಶೋ ಫಲಿತಾಂಶ

Posted By:
Subscribe to Filmibeat Kannada

ಝೀ ವಾಹಿನಿಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ 'ಸೂಪರ್ ಮಾಮ್ಸ್' ಎರಡನೇ ಆವೃತ್ತಿಯ ರಿಯಾಲಿಟಿ ಶೋ ಕಾರ್ಯಕ್ರಮದ ಫಲಿತಾಂಶ ಹೊರಬಿದ್ದಿದೆ.

ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದ ಈ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಮುಂಬೈನ ಗೃಹಿಣಿ ಹರ್ಪ್ರೀತ್ ಕತ್ರಿ ಪ್ರಥಮ ಸ್ಥಾನ ಪಡೆದರೆ ಕರ್ನಾಟಕದ ಸೌಮ್ಯಶ್ರೀ ದ್ವಿತೀಯ ಸ್ಥಾನ ಪಡೆದು ಫಸ್ಟ್ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ.

ಪ್ರಥಮ ಸ್ಥಾನದ ಅಭ್ಯರ್ಥಿಯ ಆಯ್ಕೆಯನ್ನು ಝೀ ವಾಹಿನಿ ಪ್ರೇಕ್ಷಕರಿಗೇ ಬಿಟ್ಟಿತ್ತು. ಚಿಕ್ಕಮಗಳೂರಿನವರಾದ ಗೃಹಿಣಿ ಸೌಮ್ಯಶ್ರೀ ಪ್ರಥಮ ಸ್ಥಾನ ಪಡೆಯಬಹುದು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. (ಸೋನು ನಿಗಮ್ ಮೇಲೆ ಜೀ ಟಿವಿ ನಿಷೇಧ)

ಸೂಪರ್ ಮಾಮ್ಸ್ ಸ್ಪರ್ಧೆಯಲ್ಲಿ ಹರ್ಪ್ರೀತ್ ಕತ್ರಿ, ಸೌಮ್ಯಶ್ರೀ, ಸ್ನೇಹ ಅಡಪವಾರ್ ಮತ್ತು ದೀಪಾಶ್ರೀ ಚಟರ್ಜಿ ನಡುವೆ ಪ್ರಶಸ್ತಿಗಾಗಿ ತೀವ್ರ ಹಣಾಹಣಿ ಏರ್ಪಟ್ಟಿತ್ತು.

Super Moms 2 reality show: Sowmya Shree of Karnataka first runner up

ಪ್ರಥಮ ಸ್ಥಾನ ಪಡೆದ ಅಭ್ಯರ್ಥಿಗೆ ಐದು ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಝೀ ಟಿವಿ ಜೊತೆ ಕಾರ್ಯಕ್ರಮ ಒಪ್ಪಂದ ದೊರಕಲಿರುವುದು ವಿಶೇಷ.

ಈ ಕಾರ್ಯಕ್ರಮದಲ್ಲಿ ಬಾಲಿವುಡ್ಡಿನ ಕರಿಶ್ಮಾ ಕಪೂರ್, ಗೋವಿಂದ, ಶ್ರದ್ಧಾ ಕಪೂರ್, ವರುಣ್ ಧವನ್ ಮತ್ತು ಸುಶಾಂತ್ ಸಿಂಗ್ ಪಾಲ್ಗೊಂಡು ಕಾರ್ಯಕ್ರಮವನ್ನು ಚಂದಗಾಣಿಸಿದ್ದರು.

ಸುಶಾಂತ್ ಸಿಂಗ್ ಮತ್ತು ಶ್ರದ್ದಾ ರೋಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು ಜೊತೆಗೆ ತಮ್ಮ ಮುಂದಿನ ಚಿತ್ರ 'ಎಬಿಸಿಡಿ 2' ಚಿತ್ರದ ಬಗ್ಗೆಯೂ ವಿವರಿಸಿದರು.

ಪ್ರೇಕ್ಷಕರನ್ನು ತುದಿಗಾಲಿನಲ್ಲಿ ಕಾಯುವಂತೆ ಮಾಡಿದ್ದ ಈ ರಿಯಾಲಿಟಿ ಶೋನಲ್ಲಿ ನಾಲ್ಕು ಜನ ಅಮ್ಮಂದಿರ 12 ವಾರಗಳ ಡ್ಯಾನ್ಸಿಂಗ್ ಪರೀಕ್ಷೆಯ ಫಲಿತಾಂಶದಲ್ಲಿ ಕೊನೆಗೆ ಹರ್ಪ್ರೀತ್ ಖತ್ರಿ ಸೂಪರ್ ಮಾಮ್ ಪಟ್ಟ ಧರಿಸಿದ್ದಾರೆ.

ಎರಡನೇ ಆವೃತ್ತಿಯ ಸೂಪರ್ ಮಾಮ್ಸ್ ಪ್ರಥಮ ರನ್ನರ್ ಅಪ್ ಸೌಮ್ಯಶ್ರೀ, ಶೋನಲ್ಲಿನ ಡ್ಯಾನ್ಸ್ ಬಗ್ಗೆ ಬಾಲಿವುಡ್ ನಟ ಗೋವಿಂದ ತೀವ್ರ ಮೆಚ್ಚುಗೆ ವ್ಯಕ್ತ ಪಡಿಸಿ ರಾಜ್ ಅಭಿನಯದ 'ಎಂದೆಂದೂ ನಿನ್ನನ್ನು ಮರೆತು' ಹಾಡನ್ನು ಹಾಡಿ ಸೌಮ್ಯಶ್ರೀಗೆ ಶಹಬ್ಬಾಸ್ ನೀಡಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.

English summary
Dance India Dance Super Mom 2 Grand Final : Mumbai housewife Harpreet Khatri emerged as winner. And Sowmya Shree of Karnataka is the first runner up.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada