»   » ಮಜಾ ಟಾಕೀಸ್, ಡ್ಯಾನ್ಸಿಂಗ್ ಸ್ಟಾರ್: TRPಯಲ್ಲಿ ಯಾರು ಮುಂದೆ?

ಮಜಾ ಟಾಕೀಸ್, ಡ್ಯಾನ್ಸಿಂಗ್ ಸ್ಟಾರ್: TRPಯಲ್ಲಿ ಯಾರು ಮುಂದೆ?

Posted By:
Subscribe to Filmibeat Kannada

ಕನ್ನಡದ ಕೋಟ್ಯಾಧಿಪತಿ ಮತ್ತು ಬಿಗ್ ಬಾಸ್ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದ್ದ ವೇಳೆ ಈಟಿವಿ ಮತ್ತು ಸುವರ್ಣ ವಾಹಿನಿಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಆದರೆ, ಒಂದೇ ವಾಹಿನಿಯ ಎರಡು ಕಾರ್ಯಕ್ರಮಗಳ ನಡುವೆ TRP ಸಮರ ಏರ್ಪಟ್ಟಿರುವ ಉದಾಹರಣೆಗಳು ಕನ್ನಡ ಟಿವಿ ಲೋಕದಲ್ಲಿ ಅಪರೂಪ. (ಗೃಹಿಣಿಯರಿಗೆ ಈಟಿವಿ ಕನ್ನಡ ಬಂಪರ್ ಆಫರ್)

ಹೌದು, ಈಟಿವಿ ಕನ್ನಡದಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ ಎರಡು ಕಾರ್ಯಕ್ರಮಗಳು ಜನ ಮನ್ನಣೆಗಳಿಸುವಲ್ಲಿ ಯಶಸ್ವಿಯಾಗುತ್ತಿದ್ದು, ಭರ್ಜರಿ ಟಿಆರ್ಪಿ ಗಳಿಸುವಲ್ಲಿ ಇದುವರೆಗೆ ಯಶಸ್ವಿಯಾಗಿದೆ.

ಶನಿವಾರ ಮತ್ತು ಭಾನುವಾರ ಕ್ರಮವಾಗಿ ರಾತ್ರಿ ಎಂಟು ಮತ್ತು ಒಂಬತ್ತು ಗಂಟೆಗೆ ಪ್ರಸಾರವಾಗುವ 'ಮಜಾ ಟಾಕೀಸ್' ಮತ್ತು 'ಡ್ಯಾನ್ಸಿಂಗ್ ಸ್ಟಾರ್ 2' ರಿಯಾಲಿಟಿ ಶೋಗಳು ಈಗಾಗಲೇ ತನ್ನ ಎರಡು ವಾರದ ಕಂತನ್ನು ಮುಗಿಸಿದೆ.

ಕಳೆದ ಬಾರಿಯ ಬಿಗ್ ಬಾಸ್ ವಿಜೇತ ಅಕುಲ್ ಬಾಲಾಜಿ ಮತ್ತು ರನ್ನರ್ ಸೃಜನ್ ಲೋಕೇಶ್ ನಿಸ್ಸಂದೇಹವಾಗಿ ಪ್ರತಿಭಾನ್ವಿತ ಕಲಾವಿದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇವರಿಬ್ಬರ ನಿರೂಪಣೆಯ ಈ ಹಿಂದಿನ ಕಾರ್ಯಕ್ರಮಗಳು ಕೂಡಾ ಯಶಸ್ವಿಗಾಗಿದ್ದು ನಮ್ಮ ಮುಂದೆ ಇದೆ. (ಸುವರ್ಣ ಪ್ಲಸ್ ನಲ್ಲಿ ಕ್ರಿಕೆಟ್ ವರ್ಲ್ಡ್ ಕಪ್)

ಇದುವರೆಗೆ ಈ ಎರಡು ಕಾರ್ಯಕ್ರಮಗಳಲ್ಲಿ ಸದ್ಯ TRPಯಲ್ಲಿ ಮುಂದಿರುವ ಶೋ ಯಾವುದು? ಕೊನೆಯ ಸ್ಲೈಡಿನಲ್ಲಿ ಹೇಳಲಾಗಿದೆ. (ಚಿತ್ರಕೃಪೆ: facebook.com/ETVKannada)

ಮಜಾ ಟಾಕೀಸ್

ಕಪಿಲ್ ಶರ್ಮಾ ನಡೆಸಿ ಕೊಡುತ್ತಿರುವ ಹಿಂದಿಯ ಭಾರೀ ಜನಪ್ರಿಯ 'ಕಾಮಿಡಿ ನೈಟ್ ವಿದ್ ಕಪಿಲ್' ಶೋನಿಂದ ಸ್ಪೂರ್ತಿ ಪಡೆದ ಕನ್ನಡದ ಶೋ 'ಮಜಾ ಟಾಕೀಸ್'. ಕಪಿಲ್ ನಡೆಸುವ ಶೋಗಿರುವ ಜನಪ್ರಿಯತೆಯನ್ನು ಕನ್ನಡದ ಶೋ ಪಡೆಯಲು ಸಾಧ್ಯವೇ ಎನ್ನುವ ಮಾತು ಶೋ ಆರಂಭವಾಗುವ ಮುನ್ನ ಕೇಳಿ ಬರುತ್ತಿತ್ತು ಎಂದರೆ ಯಾರೂ ಬೇಸರಿಸಿಕೊಳ್ಳಬಾರದು.

ಸೃಜನ್ ಲೋಕೇಶ್ ಮೈನ್ ಹೈಲೆಟ್

ಹೆಚ್ಚುಕಮ್ಮಿ ಕಪಿಲ್ ಶರ್ಮಾ ಮ್ಯಾನರಿಸಂ ಮತ್ತು ಬಾಡಿ ಲಾಂಗ್ವೇಜನ್ನು ಹೋಲುವ ಸೃಜನ್ ಲೋಕೇಶ್ ಅವರ ನಿರೂಪಣೆ 'ಮಜಾ ಟಾಕೀಸ್' ಕಾರ್ಯಕ್ರಮದ ಮೈನ್ ಅಟ್ರಾಕ್ಷನ್. ತನ್ನ ಹಾಸ್ಯಮಿಶ್ರಿತ ಧಾಟಿಯ ಸಂಭಾಷಣೆಯ ಮೂಲಕ ವೀಕ್ಷಕರ ಮನ ಗೆಲ್ಲುವಲ್ಲಿ ಸೃಜನ್ ಗೆದ್ದಿದ್ದಾರೆ. ಗುಡ್ ಶೋ ಸೃಜನ್..

ಮಜಾ ಟಾಕೀಸ್ ಟೀಮ್

ಕಾರ್ಯಕಮದಲ್ಲಿ ಸೃಜನ್ ಲೋಕೇಶ್ ಗೆ ಸಾಥ್ ನೀಡುತ್ತಿರುವ ಟೀಂ ಸದಸ್ಯರು ಕೂಡಾ ಕಾರ್ಯಕ್ರಮ ಎಲ್ಲೂ ಬೋರಾಗದಂತೆ ಸಾಗುವಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಸಂಗೀತ ನಿರ್ದೇಶಕ ವಿ ಮನೋಹರ್, ಅಪರ್ಣಾ, ಶ್ವೇತಾ ಚೆಂಗಪ್ಪ, ಕಿರುತೆರೆಯ ಉಷಾ ಭಂಡಾರಿ, ಮಿಮಿಕ್ರಿ ದಯಾನಂದ್, ಇಂದ್ರಜಿತ್ ಲಂಕೇಶ್ ತಮ್ಮ ತಮ್ಮ ಪಾತ್ರಗಳಲ್ಲಿ ಪರ್ಫೆಕ್ಟ್,

ಡ್ಯಾನ್ಸಿಂಗ್ ಸ್ಟಾರ್

ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮ ತನ್ನ ಎರಡು ವಾರಾಂತ್ಯದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸುವಲ್ಲಿ ಈ ಟೀಂನ ಎಲ್ಲಾ ಸದಸ್ಯರೂ ಕಾರಣ ಎನ್ನಲು ಅಡ್ಡಿಯಿಲ್ಲ. ಅಕುಲ್ ಬಾಲಾಜಿ ಅವರ ಲವ್ಲಿ ನಿರೂಪಣೆ ಇದರಲ್ಲಿ ಒಂದು. ಇನ್ನು ತೀರ್ಪುಗಾರರಾಗಿರುವ ಕ್ರೇಜಿಸ್ಟಾರ್ ರವಿಚಂದ್ರನ್, ಬಹುಭಾಷಾ ನಟಿ ಪ್ರಿಯಾಮಣಿ ಮತ್ತು ನಾಟ್ಯ ಕಲಾವಿದೆ ಮಯೂರಿ (ರಘು ದೀಕ್ಷಿತ್ ಪತ್ನಿ) ಕಾರ್ಯಕ್ರಮವಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

TRPಯಲ್ಲಿ ಯಾರು ಮುಂದೆ

ಈ ಎರಡೂ ಕಾರ್ಯಕ್ರಮಗಳು ಸದ್ಯದ ಮಟ್ಟಿಗೆ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಅಕುಲ್ ಬಾಲಾಜಿಯ ಡ್ಯಾನ್ಸಿಂಗ್ ಸ್ಟಾರ್ 2 ಕಾರ್ಯಕ್ರಮಕ್ಕೆ ಕಳೆದ ವಾರಾಂತ್ಯದಲ್ಲಿ 7.6 ಅಂಕಗಳು ಬಂದಿದ್ದರೆ, ಸೃಜನ್ ಲೋಕೇಶ್ ಅವರ ನಿರೂಪಣೆಯ ಮಜಾ ಟಾಕೀಸಿಗೆ 6 ಅಂಕಗಳು ಲಭಿಸಿದೆ ಎನ್ನುವುದು ಈಟಿವಿ ಮೂಲಗಳಿಂದ ಬಂದ ಮಾಹಿತಿ.

English summary
Two weekend TV shows i.e Maja Talkies and Dancing Star 2 in ETV Kannada, who is heading in TRP war.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada