»   » ಸಲ್ಮಾನ್ ಜೊತೆ ಸಿನಿಮಾ ಮಾಡುವ ಬಗ್ಗೆ ರಾಜಮೌಳಿ ಹೇಳಿದ್ದೇನು?

ಸಲ್ಮಾನ್ ಜೊತೆ ಸಿನಿಮಾ ಮಾಡುವ ಬಗ್ಗೆ ರಾಜಮೌಳಿ ಹೇಳಿದ್ದೇನು?

Posted By:
Subscribe to Filmibeat Kannada

ಎಸ್ ಎಸ್ ರಾಜಮೌಳಿ ನಿರ್ದೇಶನದ ಬಹುಕೋಟಿ ವೆಚ್ಚದ 'ಬಾಹುಬಲಿ 2' ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ರಾಜಮೌಳಿ ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾ ಯಾವುದು? ಆ ಚಿತ್ರದ ನಾಯಕ ಯಾರಾಗಲಿದ್ದಾರೆ? ಎಂಬ ಕುತೂಹಲ ಸಿನಿ ರಸಿಕರಲ್ಲಿ ಕಾಡುತ್ತಿದೆ.[ಬಿಡುಗಡೆಗೂ ಮುನ್ನ ಕೋಟಿ ಕೋಟಿ ಲೂಟಿ ಮಾಡಿದ 'ಬಾಹುಬಲಿ-2']

ಇನ್ನೊಂದು ಕಡೆ ಎಸ್ ಎಸ್ ರಾಜಮೌಳಿ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡುವ ಯೋಜನೆ ಹೊಂದಿದ್ದಾರೆ ಎಂಬ ಗಾಳಿಸುದ್ದಿ ಹರಿದಾಡುತ್ತಿತ್ತು. ಈ ರೂಮರ್ಸ್ ಗಳಿಗೆಲ್ಲಾ ಬ್ರೇಕ್ ಹಾಕಲು ರಾಜಮೌಳಿ ಅವರೇ ಮುಂದಾಗಿದ್ದು, ಅವರು ಏನು ಹೇಳಿದ್ದಾರೆ ಇಲ್ಲಿದೆ ನೋಡಿ..

ಸಲ್ಮಾನ್ ಜೊತೆ ಸಿನಿಮಾ ಮಾಡುವುದು ನಿಜನಾ?

'ಎಸ್ ಎಸ್ ರಾಜಮೌಳಿ, ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡುವ ಯೋಜನೆ ಹೊಂದಿದ್ದಾರೆ' ಎಂದು ಹರಿದಾಡುತ್ತಿದ್ದ ರೂಮರ್ಸ್ ಬಗ್ಗೆ ಖಚಿತ ಮಾಹಿತಿ ಪಡೆಯಲು ನಿರ್ದೇಶಕರನ್ನು ಇಂಡಿಯಾಟುಡೇ ಪ್ರಶ್ನಿಸಿದಕ್ಕೆ, ಸ್ವತಃ ಎಸ್ ಎಸ್ ರಾಜಮೌಳಿ, " ಹೌದು, ಖಂಡಿತವಾಗಿಯೂ ನಾನು ಶೀಘ್ರದಲ್ಲಿ ಹಿಂದಿ ಪ್ರೇಕ್ಷಕರಿಗೆ ಸರಿಹೊಂದುವ ಬಾಲಿವುಡ್ ಸಿನಿಮಾ ಮಾಡುತ್ತೇನೆ" ಎಂದು ಉತ್ತರಿಸಿದ್ದಾರೆ.

ಸೂಕ್ತ ನಾಯಕನ ಅಗತ್ಯವಿದೆ

" ಆದರೆ, ಬಾಲಿವುಡ್ ನಲ್ಲಿ ನಾನು ಉತ್ತಮ ಸಿನಿಮಾ ಮಾಡಲು ಸೂಕ್ತ ನಾಯಕನ ಅಗತ್ಯವಿದೆ. ಆ ಬಗ್ಗೆ ಇನ್ನೂ ಯೋಚಿಸಿಲ್ಲ. ಕಾರಣ ಇನ್ನೂ ನನ್ನ ಸಿಸ್ಟಮ್ ನಲ್ಲಿ 'ಬಾಹುಬಲಿ' ಇದೆ" ಎಂದು ರಾಜಮೌಳಿ ಹೇಳಿದ್ದಾರೆ.

ನಾಯಕನ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ..

ಬಾಲಿವುಡ್ ನಲ್ಲಿ ಸಿನಿಮಾ ಮಾಡುವ ಬಗ್ಗೆ ಸ್ಪಷ್ಟನೆ ನೀಡಿರುವ ರಾಜಮೌಳಿ ಅವರು, ಸಲ್ಮಾನ್ ಖಾನ್ ಬಗ್ಗೆ ಮಾತ್ರ ತುಟಿ ಎರಡು ಮಾಡಿಲ್ಲ.[ಮತ್ತೆ ಒಂದಾದ ಸಲ್ಮಾನ್ ಖಾನ್ ಮತ್ತು ಮಾಜಿ ಪ್ರಿಯತಮೆ!]

ರಾಜಮೌಳಿ ತಂದೆಯ ಚಿತ್ರಕಥೆಯಲ್ಲಿ ಸಲ್ಮಾನ್ ಅಭಿನಯ

ಸಲ್ಮಾನ್ ಖಾನ್, ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ನಟಿಸುತ್ತಾರಾ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಆದರೆ ಸಲ್ಮಾನ್ ಖಾನ್, ಎಸ್ ಎಸ್ ರಾಜಮೌಳಿ ಅವರ ತಂದೆ ಕೆ.ವಿ.ವಿಜಯೇಂದ್ರ ಪ್ರಸಾದ್ ಅವರ ಚಿತ್ರಕಥೆಯ 'ಭಜರಂಗಿ ಭಾಯ್ ಜಾನ್' ಚಿತ್ರದಲ್ಲಿ ನಟಿಸಿದ್ದಾರೆ.[ಜಾಕಿ ಚಾನ್, ಸಲ್ಮಾನ್ ಖಾನ್ ಅಪರೂಪದ ಸಮಾಗಮ]

English summary
Based on rumours of SS Rajamouli wanting to make a Bollywood film with Salman Khan, the director said, "I definitely want to make a Bollywood film soon, something that is appropriate for Hindi audiences and for that, I need an appropriate hero".

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada