»   » ಫೋಟೋ ಟ್ರೆಂಡಿಂಗ್: ರಣಬೀರ್ ಭುಜದ ಮೇಲೆ ಕತ್ರಿನಾ ನಿದ್ದೆ

ಫೋಟೋ ಟ್ರೆಂಡಿಂಗ್: ರಣಬೀರ್ ಭುಜದ ಮೇಲೆ ಕತ್ರಿನಾ ನಿದ್ದೆ

Posted By:
Subscribe to Filmibeat Kannada

ಬಿ ಟೌನ್ ಮಾಜಿ ಪ್ರೇಮ ಪಕ್ಷಿಗಳಾದ ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಯಾವಾಗಲು ಒಂದಲ್ಲಾ ಒಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತಾರೆ. ಆದ್ರೆ ಅವರಿಬ್ಬರು ಈಗ ಸುದ್ದಿಯಲ್ಲಿರುವುದು ಅಪ್‌ ಕಮ್ಮಿಂಗ್ ಸಿನಿಮಾ 'ಜಗ್ಗ ಜಸೂಸ್' ವಿಷಯದಲ್ಲಿ.[ಹಳೆ ಬಾಯ್‌ಫ್ರೆಂಡ್ ಸಹಾಯ ಕೇಳಿದ ಕತ್ರಿನಾ ಕೈಫ್]

ಇತ್ತೀಚೆಗಷ್ಟೇ ಕತ್ರಿನಾ ಕೈಫ್ ಆಕರ್ಷಕ ಚಿತ್ರವೊಂದನ್ನು ಶೇರ್ ಮಾಡಿದ್ದರು. ಆ ಚಿತ್ರದಲ್ಲಿ ಕತ್ರಿನಾ, ರಣಬೀರ್ ಕಪೂರ್ ಭುಜದ ಮೇಲೆ ಮಲಗಿರುವುದನ್ನು ನೋಡಬಹುದು. 'ಜಗ್ಗು ಜಸೂಸ್' ಸಿನಿಮಾ ದ ಹಿನ್ನೆಲೆಯಲ್ಲಿ ಶೇರ್ ಮಾಡಿದ್ದ ಈ ಫೋಟೋ ಚಿತ್ರದ ಅತ್ಯಂತ ಕ್ಯೂಟೆಸ್ಟ್ ಮೂಮೆಂಟ್‌ ಆಗಿ ಕಾಣಿಸಿಕೊಂಡಿದೆ. ಅಲ್ಲದೇ ಈ ಪಿಕ್‌ ಈಗ ಟ್ರೆಂಡಿಂಗ್‌ ಸಹ ಆಗಿದೆ.

ಇದೊಂದು ಲವ್ಲಿ ಮೂವ್, ಕತ್ರಿನಾ

ಈ ಮೇಲಿನ ಚಿತ್ರವನ್ನು ಫೇಸ್‌ಬುಕ್‌ ಪೇಜ್‌ ನಲ್ಲಿ ಕತ್ರಿನಾ ಶೇರ್ ಮಾಡಿ, " ನಾನು ಬೆಂಕಿಯನ್ನು ನೋಡಿದ್ದೇನೆ ಮತ್ತು ಮಳೆಯನ್ನು ನೋಡಿದ್ದೇನೆ, ತೀರ ಬಿಸಿಲು ದಿನಗಳನ್ನು ನೋಡಿದ್ದೇನೆ. ಇವುಗಳು ಯಾವಾಗಲು ಅಂತ್ಯವಾಗುವುದಿಲ್ಲ... ಜಗ್ಗ ಜರ್ನಿ ಆನ್. #JaggaJassos #AnuragBasu #Ranbirkapoor". ಎಂದು ಬರೆದಿದ್ದಾರೆ.[ಐಶ್ವರ್ಯ ರೈಗಿಂತಲೂ ಸುಂದರಿ ಕತ್ರಿನಾ ಕೈಫ್!]

ಜಗ್ಗ ಜಸೂಸ್ ಬಿ ಟೌನ್‌ ಚಿತ್ರಗಳು

ಇದು ಇತ್ತೀಚೆಗೆ 'ಜಗ್ಗ ಜಸೂಸ್' ಚಿತ್ರ ಸೆಟ್‌ ನಲ್ಲಿ ರಣಬೀರ್ ಮತ್ತು ಕತ್ರಿನಾ ಕೈಫ್ ಒಟ್ಟಿಗೆ ಊಟ ಮಾಡುವಾಗ ಕ್ಲಿಕ್ಕಿಸಿದ ಫೋಟೋ.

ಕೆಮಿಸ್ಟ್ರಿ ಬಗ್ಗೆ ಕುತೂಹಲ..!

ಹೇಳಿ ಕೇಳಿ ಮೊದಲೇ ರಣಬೀರ್ ಮತ್ತು ಕತ್ರಿನಾ ಮಾಜಿ ಪ್ರೇಮಿಗಳು. ಈ ಲವರ್ ಬರ್ಡ್ಸ್‌ ಗಳ ಲವ್ ಬ್ರೇಕಪ್ ಆದಮೇಲೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಜಗ್ಗ ಜಸೂಸ್' ಸಿನಿಮಾ ಟೀಸರ್ ಬಿಡುಗಡೆ ಆದಾಗಿನಿಂದಲೂ ಬಾಲಿವುಡ್ ಮಾತ್ರವಲ್ಲದೇ ಎಲ್ಲಾ ಸಿನಿ ಪ್ರಿಯರಿಗೂ ಕಾಡುತ್ತಿರುವ ಕುತೂಹಲವೆಂದರೆ ಇವರಿಬ್ಬರ ಕೆಮಿಸ್ಟ್ರಿ ಸಿನಿಮಾ ದಲ್ಲಿ ಹೇಗಿರುತ್ತೇ? ಎಂಬುದು.

'ಜಗ್ಗ ಜಸೂಸ್' ಸಿನಿಮಾ ನಿರೀಕ್ಷೆಗೆ ಲವ್ ಬ್ರೇಕಪ್ ಸಹ ಕಾರಣ

ಕತ್ರಿನಾ ಮತ್ತು ರಣಬೀರ್ ಲವ್ ಬ್ರೇಕಪ್ ಅಥವಾ ಅವರಿಬ್ಬರ ನಡುವಿನ ಗಾಳಿ ಸುದ್ದಿಗಳು ಎಷ್ಟೇ ಇರಬಹುದು. ಆದರೂ ಸಹ 'ಜಗ್ಗ ಜಸೂಸ್' ಸಿನಿಮಾ ಈಗ ಬಿ ಟೌನ್‌ ನಲ್ಲಿ ಹೆಚ್ಚು ನಿರೀಕ್ಷೆಯ ಸಿನಿಮಾ ಆಗಿ ರೂಪುಗೊಂಡಿದೆ. ಇದು ಹೆಮ್ಮೆಯ ವಿಷಯವು ಆಗಿದೆ.

ಇಬ್ಬರು ವೈಯಕ್ತಿಕ ಪ್ರಶ್ನೆಗಳನ್ನು ಎದುರಿಸುವುದಾದರು ಹೇಗೆ?

ಕತ್ರಿನಾ ಇತ್ತೀಚೆಗಷ್ಟೇ ತಮ್ಮ ಮೊದಲನೇ ಮಾಜಿ ಪ್ರೇಮಿ ಬಾಯ್‌ ಜಾನ್‌ ಸಲ್ಮಾನ್‌ ಖಾನ್‌ ರನ್ನು ಸಿನಿಮಾ ಪ್ರಮೋಶನ್‌ ಗೆ ಹೋದಾಗ ಲವ್ ಲೈಫ್ ಬಗ್ಗೆ ಮಾಧ್ಯಮ ದವರು ಪ್ರಶ್ನೆ ಕೇಳಿದರೆ ಹೇಗೆ ಅವೈಡ್ ಮಾಡುವುದು ಎಂದು ಸಹಾಯ ಕೇಳಿದ್ದರು. ಇದೊಂದು ಇಂಟರೆಸ್ಟಿಂಗ್ ವಿಷ್ಯಾ.. ಯಾಕಂದ್ರೆ 'ಜಗ್ಗ ಜಸೂಸ್' ಚಿತ್ರದ ಪ್ರಮೋಶನ್‌ ಗೆ ರಣಬೀರ್ ಮತ್ತು ಕತ್ರಿನಾ ಕೈಫ್ ಇಬ್ಬರು ಸಹ ಹೋಗ್ಲೇಬೇಕು. ಈ ವೇಳೆ ಇಬ್ಬರಿಗೂ ಮಾಧ್ಯಮದವರು ಅವರ ಲವ್ ಲೈಫ್‌ ಬಗ್ಗೆ ಪ್ರಶ್ನೆ ಕೇಳಿದರೆ ರಿಯಲಿ ತುಂಬಾ ಕಷ್ಟವಾಗುತ್ತೇ.[ಸಲ್ಲೂ, ಕತ್ರೀನಾ ವಿವಾಹ; ಸಾಮ್ನಾದಲ್ಲಿ ವರದಿ!]

ದಕ್ಷಿಣ ಆಫ್ರಿಕಾದಲ್ಲಿ 'ಜಗ್ಗ ಜಸೂಸ್' ಶೂಟಿಂಗ್

ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಟ್ರೆಂಡಿಂಗ್ ಫೋಟೋಗಳಲ್ಲಿ ಇದೂ ಸಹ ಒಂದು. ದಕ್ಷಿಣ ಆಫ್ರಿಕಾದಲ್ಲಿ ಚಿತ್ರೀಕರಣದ ವೇಳೆ ಕ್ಲಿಕ್ಕಿಸಿದ ಫೋಟೋ.

ಜೆಜೆ ಟ್ರೈಲರ್ ನ ಫೇವರಿಟ್ ದೃಶ್ಯ

ಬಹುಶಃ 'ಜಗ್ಗ ಜಸೂಸ್' ಚಿತ್ರದ ಟ್ರೈಲರ್ ನೋಡಿದವರಿಗೆ ಈ ಕ್ಯೂಟೆಸ್ಟ್ ಮತ್ತು ಫನ್ನಿ ಸೀನ್ ನೆನಪಿಗೆ ಬರುತ್ತದೆ. ಕತ್ರಿನಾ ತುಟಿಯಲ್ಲಿರುವ ಲಿಪ್‌ಸ್ಟಿಕ್ ಅನ್ನು ಬೆರಳಲ್ಲಿ ಸವರಿಕೊಂಡು ತನ್ನ ತುಟಿಗೆ ರಣಬೀರ್ ಸವರಿಕೊಳ್ಳುವ ಈ ದೃಶ್ಯವನ್ನೊಮ್ಮೆ ನೋಡಿಲ್ಲ ಅಂದ್ರೆ ಒಮ್ಮೆ ನೋಡಿ.

ಜಗ್ಗ ಜಸೂಸ್ ಫೈನಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ.

English summary
Recently, Katrina Kaif shared one adorable picture, in which she can be seen sleeping on Ranbir Kapoor's shouder and left us aww'ing all over their cutesy moment from Jagga Jasoos!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada