»   » 'ತೈಮೂರ್' ಹೆಸರು ವಿವಾದಕ್ಕೆ ಅಂತ್ಯವಾಡುತ್ತಾರಂತೆ ಸೈಫ್ ಅಲಿಖಾನ್

'ತೈಮೂರ್' ಹೆಸರು ವಿವಾದಕ್ಕೆ ಅಂತ್ಯವಾಡುತ್ತಾರಂತೆ ಸೈಫ್ ಅಲಿಖಾನ್

Posted By:
Subscribe to Filmibeat Kannada

ಬಾಲಿವುಡ್ ನಟ ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ಇಬ್ಬರು ಒಂದು ಕಡೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ಖುಷಿಯಲ್ಲಿದ್ರೆ, ಇನ್ನೊಂದು ಕಡೆ ಮಗುವಿಗೆ 'ತೈಮೂರ್' ಎಂದು ಹೆಸರು ಇಟ್ಟಿದ್ದಕ್ಕೆ ಶುರುವಾದ ವಿವಾದಕ್ಕೆ ಬೇಸರದಲ್ಲಿದ್ದಾರೆ.[ಫೋಟೋ ನೋಡಿ: ಮಗು ತೈಮುರ್ ಜೊತೆ 'ಅಮ್ಮ' ಕರೀನಾ]

ಬಾಲಿವುಡ್ ಸ್ಟೈಲಿಶ್ ದಂಪತಿಗಳಾದ ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ಡಿಸೆಂಬರ್ 20, 2016 ರಂದು ಜನಿಸಿದ್ದ ತಮ್ಮ ನವಜಾತ ಶಿಶುವಿಗೆ 'ತೈಮೂರ್ ಅಲಿಖಾನ್ ಪಟೌಡಿ' ಎಂದು ಹೆಸರಿಟ್ಟಿದ್ದರು. ಈ ಹೆಸರಿನ ಬಗ್ಗೆ ಶುರುವಾದ ವಿವಾದದ ಹಿನ್ನೆಲೆಯಲ್ಲಿ ಈಗ ಕೊನೆಗೂ ಹೆಸರು ಬದಲಿಸಲು ಸೈಫ್ ಅಲಿಖಾನ್ ಅಲೋಚಿಸಿದ್ದಾರಂತೆ.

'ತೈಮೂರ್' ಹೆಸರು ಬದಲಿಸುವ ಸಾಧ್ಯತೆ

ಹೌದು, ನಟ ಸೈಫ್ ಅಲಿಖಾನ್ ತಮ್ಮ ಮಗ 'ತೈಮೂರ್ ಅಲಿಖಾನ್ ಪಟೌಡಿ' ಹೆಸರನ್ನು ಬದಲಿಸುವ ಬಗ್ಗೆ ಸಂದರ್ಶನ ವೊಂದರಲ್ಲಿ ಸುಳಿವು ನೀಡಿದ್ದಾರೆ.[ಸೈಫ್-ಕರೀನಾ ಮಗ 'ತೈಮೂರ್' ಭವಿಷ್ಯದಲ್ಲಿ ಏನಾಗಬೇಕಂತೆ ಗೊತ್ತಾ?]

ಸೈಫ್ ಅಲಿಖಾನ್ ಹೇಳಿದ್ದೇನು?

ಇತ್ತೀಚೆಗಷ್ಟೇ 'ದೆಹಲಿ ಟೈಮ್ಸ್' ಗೆ ನೀಡಿದ ಸಂದರ್ಶನದಲ್ಲಿ 'ತೈಮೂರ್ ಅಲಿಖಾನ್ ಪಟೌಡಿ' ಹೆಸರನ್ನು ಬದಲಿಸಲು ಚಿಂತಿಸಿದ್ದೇನೆ' ಎಂಬುದಾಗಿ ಹೇಳಿದ್ದಾರೆ.[ಸೈಫ್-ಕರೀನಾ ಮಗನಿಗೆ 'ತೈಮೂರ್' ಎಂದು ಹೆಸರು: ಭುಗಿಲೆದ್ದ ವಿವಾದ ]

'ತೈಮೂರ್' ಹೆಸರು ಅಪ್ರಖ್ಯಾತ ಗೊಳಿಸಲು ಇಷ್ಟವಿಲ್ಲ..

"ತೈಮೂರ್ ಹೆಸರು ಚೇಂಜ್ ಮಾಡಲು ಕರೀನಾ ಜೊತೆ ಮಾತನಾಡಿದ್ದೆ. ಇದಕ್ಕೆ ಆಕೆಯ ವಿರೋಧ ಇತ್ತು. 'ನಿಮಗೆ ಮತ್ತು ನಿಮ್ಮ ಅಭಿಪ್ರಾಯಕ್ಕೆ ಜನರ ಗೌರವ ಇದೆ. ಆದ್ದರಿಂದ ಹೆಸರು ಬದಲಿಸುವುದು ಬೇಡ' ಎಂದಿದ್ದಳು ಕರೀನಾ. ಇದು ಜನರಿಗೆ ಸಂಬಂಧಿಸಿದ ವಿಷಯವಲ್ಲ. ನನ್ನ ಮಗನನ್ನು ಅನ್ ಪಾಪ್ಯುಲರ್ ಮಾಡುವುದು ಇಷ್ಟವಿಲ್ಲ. ಆದರೆ 1-2 ವರ್ಷಗಳ ನಂತರ ಹೆಸರು ಬದಲಿಸಲು ಅಲೋಚಿಸಿದ್ದೇನೆ" ಎಂದು ಸೈಫ್ ಅಲಿಖಾನ್ ಸಂದರ್ಶನದಲ್ಲಿ ಹೇಳಿದ್ದಾರೆ.[ಫೋಟೋ ನೋಡಿ: ಮಗು ತೈಮುರ್ ಜೊತೆ 'ಅಮ್ಮ' ಕರೀನಾ]

'ತೈಮೂರ್' ಹೆಸರಿನ ವಿವಾದ

'ತೈಮೂರ್' ಎಂಬುದು ಭಾರತ ದೇಶದ ಮೇಲೆ ದಾಳಿ ಮಾಡಿದ್ದ ಮೊಘಲ್ ದಾಳಿಕೋರನ ಹೆಸರು ಎಂದು ಟ್ವಿಟರ್ ನಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ವಿವಾದಕ್ಕೆ ದಂಪತಿಗಳ ಪ್ರತಿಕ್ರಿಯೆ

'ತೈಮೂರ್' ಹೆಸರಿಗೆ ವ್ಯಕ್ತವಾದ ವಿರೋಧಕ್ಕೆ ಸೈಫ್ ಅಲಿಖಾನ್ " 'ತೈಮೂರ್' ಎಂದರೆ ಪರ್ಷಿಯನ್ ಭಾಷೆಯಲ್ಲಿ 'ಕಬ್ಬಿಣ'. ರಾಜನ ಹೆಸರಿಗೂ ನನ್ನ ಮಗನ ಹೆಸರಿಗೂ ಸಂಬಂಧವಿಲ್ಲ" ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೇ ಸಾಮಾಜಿಕ ತಾಣಗಳಲ್ಲಿ ಬಂದ ಟೀಕೆಗಳ ನಡುವೆಯೂ ಕರೀನಾ ಮಾತ್ರ ತಮ್ಮ ಮಗನ ಹೆಸರನ್ನು ಸಮರ್ಥಿಸಿಕೊಂಡಿದ್ದರು. ಈಗ ಕೊನೆಗೂ ಈ ವಿರೋಧಕ್ಕೆ ಅಂತ್ಯವಾಡಲು ಸೈಫ್ ಹೆಸರು ಬದಲಿಸುವ ಚಿಂತನೆ ಬಗ್ಗೆ ಮಾಹಿತಿ ನೀಡಿದ್ದಾರೆ.

English summary
Saif Ali Khan can still change Taimur’s name. He said on an interview that, ‘I don’t want him to be unpopular’.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada