For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣದ ವೇಳೆ ಅವಘಡ: ಜಸ್ಟ್ ಮಿಸ್ ಆದ ಶಾರೂಖ್

  By Bharath Kumar
  |

  ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಅಭಿನಯಿಸುತ್ತಿರುವ ಹೊಸ ಚಿತ್ರದ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದ್ದು, ಸ್ವಲ್ಪ ಅಂತರದಲ್ಲಿ ನಟ ಶಾರೂಖ್ ಪಾರಾಗಿದ್ದಾರೆ ಎನ್ನಲಾಗಿದೆ. ಆದ್ರೆ, ಸ್ಥಳದಲ್ಲಿದ್ದ ಇಬ್ಬರು ಸಿಬ್ಬಂದಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

  ಆನಂದ್ ಎಲ್ ರೈ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಇನ್ನು ಹೆಸರಿಡದ ಚಿತ್ರದಲ್ಲಿ ಕಿಂಗ್ ಖಾನ್ ಅಭಿನಯಿಸುತ್ತಿದ್ದು, ಈ ಚಿತ್ರದ ಶೂಟಿಂಗ್ ಇಂದು ಮುಂಬೈ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿತ್ತು. ಈ ವೇಳೆ ಶಾರೂಖ್ ಖಾನ್ ಎದುರಲ್ಲಿದ್ದ ಛಾವಣೆ ಕುಸಿದು ಬಿದ್ದು ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಶಾರೂಖ್ ಗೆ ಏನು ಆಗಲಿಲ್ಲ. ಆದ್ರೆ, ಪಕ್ಕದಲ್ಲಿದ್ದ ಸಿಬ್ಬಂದಿಗೆ ಗಾಯವಾಗಿದ್ದು, ಅವರನ್ನ ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ನಂತರ ಚಿಕಿತ್ಸೆ ಪಡೆದು ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದು ಬಂದಿದೆ.[ಶಾರೂಖ್ ಚಿತ್ರದ ಈ ದಾಖಲೆಯನ್ನ 'ಬಾಹುಬಲಿ' ಬ್ರೇಕ್ ಮಾಡಲಾಗಿಲ್ಲ..!]

  ಆನಂದ್ ಎಲ್ ರೈ ನಿರ್ದೇಶನದ ಈ ಚಿತ್ರದಲ್ಲಿ ಶಾರೂಖ್ ಖಾನ್ ನಾಯಕರಾಗಿದ್ದು, ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ಚೋಪ್ರಾ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.[24 ವರ್ಷದ ಹಿಂದಿನ ಲವ್ ಸ್ಟೋರಿ ಫಜೀತಿ ಬಿಚ್ಚಿಟ್ಟ ಶಾರುಖ್ ಖಾನ್]

  ಶಾರೂಖ್ ಕ್ಷೇಮವಾಗಿದ್ದಾರೆ ಎಂಬ ಸುದ್ದಿ ಕೇಳುತ್ತಲೇ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ, ಈ ಅವಘಡದಿಂದ 2 ದಿನಗಳ ಕಾಲ ಶೂಟಿಂಗ್ ನಿಲ್ಲಿಸಲು ಚಿತ್ರತಂಡ ನಿರ್ಧರಿಸಿದ್ದು, 2 ದಿನದ ನಂತರ ಮತ್ತೆ ಚಿತ್ರೀಕರಣ ಮುಂದುವರೆಯಲಿದೆ ಮಾಧ್ಯಮಗಳು ವರದಿ ಮಾಡಿವೆ.

  English summary
  Bollywood Actor Shah Rukh Khan Escapes Accident on the sets of Aanand L Rai’s Next Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X