X
ಭವ್ಯಾ ಗೌಡ

ಭವ್ಯಾ ಗೌಡ

ಜೀವನ ಚರಿತ್ರೆ :  ಭವ್ಯಾ ಗೌಡ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಕಿರುತೆರೆ ನಟಿ. ಇವರು 1996ರ ನವೆಂಬರ್ 17ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಬಿಕಾಂ ಮುಗಿಸಿದ್ದ ಇವರಿಗೆ ಗಗನಸಖಿಯಾಗಬೇಕೆಂಬ ಕನಸು ಆಸೆಯಿತ್ತು. ಅದಕ್ಕಾಗಿ ತಯಾರಿ ನಡೆಸಿ ಪರೀಕ್ಷೆ ಸಹ ಬರೆದಿದ್ದರು. ಆದರೆ, ಭವ್ಯಾ ಅವರ ತಂದೆ-ತಾಯಿಗೆ ಮಗಳನ್ನು ನಟಿಯಾಗಿ ನೋಡಬೇಕೆಂಬ ಅಭಿಲಾಷೆಯಿತ್ತು. ಅದರಂತೆ ಭವ್ಯಾ ಗೌಡ ನಟಿಯಾಗಿದ್ದಾರೆ.  ಕಿರುತರೆ ಟಿಕ್‌ಟಾಕ್‌ನಲ್ಲಿ ಲಿಪ್ ಸಿಂಕ್ ಮಾಡುವ ಮೂಲಕ ಖ್ಯಾತಿ ಗಳಿಸಿದ್ದ ಭವ್ಯಾ, ಗೀತಾ ಸೀರಿಯಲ್ ಆಡಿಷನ್‌ ಕೊಟ್ಟು ಆಯ್ಕೆಯಾದರು. ಇವರು ಸೀರಿಯಲ್‌ಗೆ ಆಯ್ಕೆಯಾದಾಗ ಹಲವರು ಟಿಕ್‌ಟಾಕ್‌ನಿಂದಲೇ ಧಾರಾವಾಹಿಗೆ ಸೆಲೆಕ್ಟ್ ಆದರು ಎಂದು ಬಿಂಬಿಸಿದ್ದರು. ಈ ಕಾರಣಕ್ಕೆ ಭವ್ಯಾ ಬೇಸರಗೊಂಡಿದ್ದರು. ಅಲ್ಲದೇ, ಟಿಕ್‌ಟಾಕ್‌ನಲ್ಲಿ ನಟಿಸುವುದೆ ಬೇರೆ ಮತ್ತು ಧಾರಾವಾಹಿಯಲ್ಲಿ ನಟಿಸುವುದೆ ಬೇರೆ ಎಂದಿದ್ದರು. 2020ರಲ್ಲಿ ಗೀತಾ ಸೀರಿಯಲ್‌ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆ ಎಂಟ್ರಿಕೊಟ್ಟ ಈ ನಟಿ, ಸದ್ಯ ಕನ್ನಡ ಕಿರುತೆರೆಯ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.  ಸ್ಯಾಂಡಲ್‌ವುಡ್ ಕಿರುತೆರೆಯಲ್ಲಿ ತಮ್ಮದೇ ಛಾಫು ಮೂಡಿಸಿರುವ ಭವ್ಯಾ ಗೌಡ, ವಿಸ್ಮಯಾ ಗೌಡ ನಿರ್ದೇಶನದ 'ಡಿಯರ್ ಕಣ್ಮಣಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದಾರೆ. ಬಿಗ್‌ಬಾಸ್:   ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಮೊದಲ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದ  ಭವ್ಯಾ ಗೌಡ, 6 ಫೈನಲಿಸ್ಟ್‌ಗಳ ಪೈಕಿ ಒಬ್ಬರಾಗಿ ಫಿನಾಲೆ ತಲುಪಿದ್ದರು.  ಆದರೆ, 6ನೇ ಸ್ಥಾನಕ್ಕೆ ತೃಪ್ತಿ ಪಡೆದು ಎಲಿಮಿನೇಟ್ ಆಗಿದ್ದಾರೆ.  
ಮುಂದೆ ಓದಿ

ಭವ್ಯಾ ಗೌಡ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಭವ್ಯಾ ಗೌಡ

ಹೆಸರು ಭವ್ಯಾ ಗೌಡ
ಹುಟ್ಟಿದ ದಿನ 17 Nov 1996
ವಯಸ್ಸು 30
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಭವ್ಯಾ ಗೌಡ ಆಸ್ತಿ

ಆಸ್ತಿ

ಭವ್ಯಾ ಗೌಡ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+