»   » 'ಕಿರಿಕ್' ಹುಡುಗಿ ಸಂಯುಕ್ತ ಮೂರನೇ ಸಿನಿಮಾದಲ್ಲಿ ಮೂಕಿಯಂತೆ!

'ಕಿರಿಕ್' ಹುಡುಗಿ ಸಂಯುಕ್ತ ಮೂರನೇ ಸಿನಿಮಾದಲ್ಲಿ ಮೂಕಿಯಂತೆ!

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಚಿತ್ರದ ಬೆಡಗಿ ಸಂಯುಕ್ತ ಹೆಗಡೆ ತಮ್ಮ ಚಿತ್ರ 150 ದಿನಗಳನ್ನು ಪೂರೈಸಿದ ಯಶಸ್ಸಿನ ಖುಷಿಯಲ್ಲಿ ತೇಲುತ್ತಿದ್ದಾರೆ. ಮೊನ್ನೆಯಷ್ಟೇ ಈ ಚಿತ್ರದ ಅಭಿನಯಕ್ಕಾಗಿ ಸಂಯುಕ್ತ ಹೆಗಡೆಗೆ 64ನೇ ದಕ್ಷಿಣ ಭಾರತ ಫಿಲ್ಮ್ ಫೇರ್ ನ ಅತ್ಯುತ್ತಮ ಫೋಷಕ ನಟಿ ಪ್ರಶಸ್ತಿ ಲಭಿಸಿದೆ.[ಕ್ಯಾತೆ ತೆಗೆದು ವಿವಾದ ಮೈಮೇಲೆ ಎಳ್ಕೊಂಡ 'ಕಿರಿಕ್' ಹುಡುಗಿ ಸಂಯುಕ್ತ]

ಅಂದಹಾಗೆ ಸಂಯುಕ್ತ ಹೆಗಡೆ ಬಗ್ಗೆ ಈಗ ಲೇಟೆಸ್ಟ್ ಸುದ್ದಿಯೊಂದು ಹೊರಬಿದ್ದಿದ್ದು, ಕಿರಿಕ್ ಹುಡುಗಿ ಮೂರನೇ ಪ್ರಾಜೆಕ್ಟ್ ಗೆ ಸಿದ್ದರಾಗುತ್ತಿದ್ದಾರಂತೆ. ಆ ಸಿನಿಮಾ ಯಾವುದು, ನಿರ್ದೇಶಕರು ಯಾರು ಎಂಬಿತ್ಯಾದಿ ಮಾಹಿತಿಗೆ ಮುಂದೆ ಓದಿ..

ಮೂರನೇ ಚಿತ್ರಕ್ಕೆ ಸಜ್ಜಾದ ಸಂಯುಕ್ತ

ಸಂಯುಕ್ತ ಹೆಗಡೆ ಈಗ ಮೂರನೇ ಪ್ರಾಜೆಕ್ಟ್ ಗೆ ಸಿದ್ದರಾಗಿದ್ದು, ಆ ಚಿತ್ರದಲ್ಲಿ ಮೂಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಯಾವುದು ಆ ಚಿತ್ರ?

ಪಟ ಪಟ ಅಂತ ಸ್ಪೀಡ್ ಆಗಿ ಮಾತನಾಡೋ ಕಿರಿಕ್ ಹುಡುಗಿ ಮೂಕಿ ಆಗಿ ಅಭಿನಯಿಸಲಿರುವ ಮೂರನೇ ಚಿತ್ರಕ್ಕೆ 'ಒಮ್ಮೆ ನಿಶಬ್ಧ ಒಮ್ಮೆ ಯುದ್ಧ' ಎಂದು ಹೆಸರು ಸೂಚಿಸಲಾಗಿದೆಯಂತೆ.

ನಿರ್ದೇಶಕ ಯಾರು?

ಈ ಹಿಂದೆ ಕನ್ನಡದಲ್ಲಿ 'ನಿತ್ಯ ಜೊತೆ ಸತ್ಯ' ಎಂಬ ಚಿತ್ರ ನಿರ್ದೇಶನ ಮಾಡಿದ್ದ ಶ್ರೀನಾಗ್ ಎಂಬುವವರು ಸಂಯುಕ್ತ ಹೆಗಡೆ ಮೂರನೇ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

'ಕೆಂಡಸಂಪಿಗೆ' ವಿಕ್ಕಿ ಜೊತೆ ಸಂಯುಕ್ತ ಬ್ಯುಸಿ

ಸದ್ಯದಲ್ಲಿ ಸಂಯುಕ್ತ ಹೆಗಡೆ 'ಕೆಂಡಸಂಪಿಗೆ' ವಿಕ್ಕಿ ಅಭಿನಯದ 'ಕಾಲೇಜ್ ಕುಮಾರ್' ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಇದು ಅವರ ಎರಡನೇ ಚಿತ್ರ.['ಕಾಲೇಜ್ ಕುಮಾರ್'ನಿಗೆ ಕ್ಲಾಪ್ ಮಾಡಿದ ಕಿಚ್ಚ ಸುದೀಪ್]

ಆಗಸ್ಟ್ ನಲ್ಲಿ ಸಿನಿಮಾ ಮುಹೂರ್ತ

ಸಂಯುಕ್ತ ಹೆಗಡೆ ಮೂಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಅವರ ಮೂರನೇ ಚಿತ್ರ ಆಗಸ್ಟ್ ನಲ್ಲಿ ಮುಹೂರ್ತ ಕಾರ್ಯಕ್ರಮ ಇಟ್ಟಿಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಚಿತ್ರದ ಬಗ್ಗೆ ಚಿತ್ರತಂಡವಾಗಲಿ ಅಥವಾ ಸಂಯುಕ್ತ ಹೆಗಡೆ ಆಗಲಿ ಯಾವುದೇ ಸುಳಿವು ನೀಡಿಲ್ಲ. ಈ ಬಗ್ಗೆ ನಿಶಬ್ಧವಾಗಿರುವ ಸಂಯುಕ್ತ ಹೆಗಡೆ ರವರೇ ಕ್ಲಾರಿಟಿ ನೀಡಬೇಕು.

English summary
'Kirik Party' fame actress Samyukta Hegde third movie has titled 'Omme Nishabda Omme Yuddha'. This movie will be direct by Srinag, who is previously direct 'Nitya Jothe Satya' Kannada Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada