»   » ಈವರೆಗೆ ಆಸ್ಕರ್ ಪಡೆದ ಐವರು ಭಾರತೀಯರು

ಈವರೆಗೆ ಆಸ್ಕರ್ ಪಡೆದ ಐವರು ಭಾರತೀಯರು

Posted By:
Subscribe to Filmibeat Kannada

89 ನೇ ಆಕಾಡೆಮಿ ಪ್ರಶಸ್ತಿ ಸಮಾರಂಭ ನಿನ್ನೆ(ಫೆ 27) ಲಾಸ್ ಏಂಜಲೀಸ್ ನಲ್ಲಿ ನಡೆಯಿತು. 2017 ರ ಆಸ್ಕರ್ ಸ್ಪರ್ಧೆ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ.[LIVE: ಆಸ್ಕರ್ 2017 : ಅತ್ಯುತ್ತಮ ಚಿತ್ರ : ಮೂನ್ ಲೈಟ್]

ಭಾರತ ಮೂಲದ ದೇವ್ ಪಟೇಲ್ 2016 ರ 'ಲಯನ್' ಚಿತ್ರದ ಫೋಷಕ ಪಾತ್ರಕ್ಕಾಗಿ 2017 ರ ಆಸ್ಕರ್ ಸ್ಪರ್ಧೆ ಗೆ ನಾಮನಿರ್ದೇಶನ ಆಗಿದ್ದರು, ಆದರೆ ನಿರಾಶೆ ಉಂಟಾಗಿದೆ.[ಆಸ್ಕರ್ ಅಂಗಳಕ್ಕೆ ತಾಯಿಯನ್ನು ಕರೆತಂದಿದ್ದ ದೇವ್ ಪಟೇಲ್]

ಭಾರತದಿಂದ ಆಸ್ಕರ್ ಸ್ಪರ್ಧೆಗೆ ನಾಮನಿರ್ದೇಶನ ಆಗುವವರ ಸಂಖ್ಯೆಯೇ ವಿರಳ. ಇದುವರೆಗೆ ಭಾರತದಿಂದ ಆಸ್ಕರ್ ಪ್ರಶಸ್ತಿಗೆ ಕೇವಲ ಬೆರಳೆಣಿಕೆಯಷ್ಟು ಜನರು ನಾಮನಿರ್ದೇಶನ ಗೊಂಡಿದ್ದಾರೆ ಅಷ್ಟೇ. ಆದರೆ ಮೊಟ್ಟ ಮೊದಲು ಮೆಹ್ ಬೂಬ್ ಖಾನ್ ರವರು ತಮ್ಮ 'ಮದರ್ ಇಂಡಿಯಾ' ಚಿತ್ರಕ್ಕೆ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ವಿಭಾಗದಿಂದ 30 ನೇ ಆಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಅಲ್ಲದೇ ಈ ವರೆಗೆ ಐದು ಭಾರತೀಯರು ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಅವರು ಯಾರು ಎಂಬ ಲಿಸ್ಟ್ ಇಲ್ಲಿದೆ ನೋಡಿ..

ಭಾನು ಅಥೈಯಾ

ಭಾರತದಿಂದ ಮೊಟ್ಟ ಮೊದಲು ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡವರು ಕಾಸ್ಟ್ಯೂಮ್ ಡಿಸೈನರ್ ಭಾನು ಅಥೈಯಾ. ಇವರು 1983 ರಲ್ಲಿ 'ಗಾಂಧಿ' ಚಿತ್ರಕ್ಕಾಗಿ ಬೆಸ್ಟ್ ಕಾಸ್ಟ್ಯೂಮ್ ಡಿಸೈನ್ ವಿಭಾಗದಿಂದ ಆಸ್ಕರ್ ಪ್ರಶಸ್ತಿಯನ್ನು 55 ನೇ ಆಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಗೆದ್ದುಕೊಂಡರು.

ಸತ್ಯಜಿತ್ ರೇ

ಪ್ರಸಿದ್ಧ ಬಂಗಾಳಿ ಚಿತ್ರ ನಿರ್ದೇಶಕರು ಮತ್ತು ಭಾರತೀಯ ಚಿತ್ರರಂಗದ ಅತಿ ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರಾದ ಸತ್ಯಜಿತ್ ರೇ ಅವರು, ಈವರೆಗೆ ಆಸ್ಕರ್ ನಿಂದ ಗೌರವ ಪ್ರಶಸ್ತಿ ಪಡೆದ ಮೊದಲ ಭಾರತೀಯರು. 1992 ರಲ್ಲಿ 64 ನೇ ಆಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಮೋಶನ್ ಪಿಕ್ಚರ್ ವಿಭಾಗದಲ್ಲಿ ಸಾಧನೆ ಮಾಡಿದಕ್ಕಾಗಿ ಸತ್ಯಜಿತ್ ರೇ ಅವರಿಗೆ ಆಸ್ಕರ್ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರೆಸೂಲ್ ಪೂಕುಟ್ಟಿ

81 ನೇ ಆಕಾಡೆಮಿ ಪ್ರಶಸ್ತಿ ಸಮಾರಂಭ ಭಾರತೀಯ ಕಲಾವಿದರಿಗೆ ಅತ್ಯದ್ಭುತ ಕಾರ್ಯಕ್ರಮವಾಗಿತ್ತು. ಈ ಸಮಾರಂಭದಲ್ಲಿ 2009 ಸೂಪರ್ ಹಿಟ್ ಸಿನಿಮಾ 'ಸ್ಲಮ್ ಡಾಗ್ ಮಿಲಿಯನೇರ್' ಚಿತ್ರದ ಧ್ವನಿ ಮಿಶ್ರಣಕ್ಕಾಗಿ ರೆಸೂಲ್ ಪೂಕುಟ್ಟಿ ಆಸ್ಕರ್ ಪ್ರಶಸ್ತಿ ವಿಜೇತರಾಗಿದ್ದರು.

ಎ.ಆರ್ ರೆಹಮಾನ್

ನಿಮಗೆಲ್ಲ ತಿಳಿದ ಹಾಗೆ ಎ.ಆರ್ ರೆಹಮಾನ್ ಮ್ಯೂಸಿಕ್ ಮತ್ತು ತಮ್ಮ ಟ್ಯಾಲೆಂಟ್ ನಿಂದ ಇಂಟರ್ ನ್ಯಾಷನಲ್ ಫಿಗರ್. ಈ ಮ್ಯೂಸಿಕಲ್ ಮಾಸ್ಟರ್ 'ಸ್ಲಮ್ ಡಾಗ್ ಮಿಲಿಯನೇರ್' ಚಿತ್ರದ ಅತ್ಯುತ್ತಮ ಮೂಲ ಸಂಗೀತಕ್ಕಾಗಿ ಮೊಟ್ಟ ಮೊದಲ ಭಾರತೀಯ ಸಂಗೀತ ನಿರ್ದೇಶಕನಾಗಿ ಗೋಲ್ಡೆನ್ ಲೇಡಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇದೇ ಸಮಾರಂಭಕ್ಕೆ ದೇವ್ ಪಟೇಲ್ ಅವರು 'ಸ್ಲಮ್ ಡಾಗ್ ಮಿಲಿಯನೇರ್'ನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ನಾಮನಿರ್ದೇಶನ ಆಗಿದ್ದರು.

ಎ.ಆರ್ ರೆಹಮಾನ್ ಮತ್ತು ಗುಲ್ಜಾರ್

ಎ.ಆರ್ ರೆಹಮಾನ್ ಮತ್ತು ಗುಲ್ಜಾರ್ ಇಬ್ಬರು ಸಹ 2009 ರಲ್ಲಿ 'ಸ್ಲಮ್ ಡಾಗ್ ಮಿಲಿಯನೇರ್' ಚಿತ್ರಕ್ಕಾಗಿ ಮೂರನೇ ಆಸ್ಕರ್ ಪ್ರಶಸ್ತಿ ಬಾಚಿದ್ದರು. ಇಬ್ಬರ ಬೆಸ್ಟ್ ಕಾಂಬಿನೇಷನ್ ನಿಂದ 'ಸ್ಲಮ್ ಡಾಗ್ ಮಿಲಿಯನೇರ್' ಚಿತ್ರಕ್ಕೆ ರಚಿಸಿದ್ದ 'ಜೈ ಹೋ' ಮೂಲ ಹಾಡಿಗಾಗಿ ಆಸ್ಕರ್ ಪಡೆದಿದ್ದರು. ಎ.ಆರ್.ರೆಹಮಾನ್ ಅವರಿಗೆ ಈ ಹಾಡು ಎರಡನೇ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಟ್ಟಿತ್ತು.

English summary
Dev Patel Nominated at Oscars 2017 : Here is 5 Indians who have won the Academy Awards

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada