twitter
    For Quick Alerts
    ALLOW NOTIFICATIONS  
    For Daily Alerts

    ಅವಮಾನಗಳನ್ನು ಮೆಟ್ಟಿನಿಂತ ನಯನ 'ಜೂನಿಯರ್ ಉಮಾಶ್ರೀ' ಆಗಿದ್ದು ಹೇಗೆ?

    By Suneel
    |

    'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ಹುಬ್ಬಳ್ಳಿ ನಯನ ಈಗ ಕಿರುತೆರೆಯ ಉಮಾಶ್ರೀ ಎಂತಲೇ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಅವರನ್ನು ನೋಡಿದವರೆಲ್ಲಾ ನೀನು ಜೂನಿಯರ್ ಉಮಾಶ್ರೀ'ನೇ ಕಣಮ್ಮ ಅಂತಲೂ ಕಮೆಂಟ್ ಸಹ ಮಾಡುತ್ತಿದ್ದಾರೆ.

    ಆದ್ರೆ ನಯನ 'ಕಾಮಿಡಿ ಕಿಲಾಡಿಗಳು' ವೇದಿಕೆಗೆ ಬರುವ ಮುನ್ನ ಆಡಿಷನ್ ಗಳಲ್ಲಿ ಅವರು ಕೇಳಿದ್ದ ಕಮೆಂಟ್ ಗಳು ಎಂತಹವರಿಗೂ ನೋವುಂಟು ಮಾಡುತ್ತವೆ. ಯಾಕಂದ್ರೆ ಅವರಿಗೆ 'ನಿನ್ಗೆ ಗ್ಲಾಮ್ (ಗ್ಲಾಮರ್) ಲುಕ್ ಇಲ್ಲ. ನಿನ್ ವಾಯ್ಸ್ ಒಂಥರಾ ಗಂಡು ಮಕ್ಕಳ ವಾಯ್ಸ್ ರೀತಿ ಇದೆ. ಚೆನ್ನಾಗಿ ಮಾತಾಡೋಕೆ ಆಗಲ್ಲ'. ಎಂಬ ಹಲವು ಮಾತುಗಳು ಕೇಳಿಬಂದಿದ್ದವು. ಆಡಿಷನ್ ಗಳಲ್ಲಿ ಈ ರೀತಿಯ ಮಾತುಗಳನ್ನು ಕೇಳಿ ಬೇಸರದಲ್ಲಿದ್ದ ನಯನ ಜೀ ವೇದಿಕೆಗೆ ಬಂದಿದ್ದು ಮಾತ್ರ ವಿಶೇಷ.['ಕಾಮಿಡಿ ಕಿಲಾಡಿಗಳು' ನಯನ ತಮ್ಮ ನಟನೆ ಬಗ್ಗೆ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಗಳು..]

    ನಯನ 'ಕಾಮಿಡಿ ಕಿಲಾಡಿಗಳು' ವೇದಿಕೆಗೆ ಬಂದಿದ್ದು ಹೇಗೆ, ಅವರ ಹಿನ್ನಲೆ, ಅವರ ಮುಂದಿನ ಪ್ಲಾನ್ ಏನು, ಕಾರ್ಯಕ್ರಮದ ಜರ್ನಿಯ ಅನುಭವಗಳನ್ನು 'ಫಿಲ್ಮಿ ಬೀಟ್' ನಡೆಸಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

    ಸಂದರ್ಶನ- ಸುನೀಲ್ ಬಿಂಡಹಳ್ಳಿ

    ನಿಮ್ಮ ಊರು, ವಿದ್ಯಾಭ್ಯಾಸ..

    ನಿಮ್ಮ ಊರು, ವಿದ್ಯಾಭ್ಯಾಸ..

    -ನೇಟಿವ್ ಹುಬ್ಬಳ್ಳಿ. ಆದ್ರೆ ಈಗ ನನ್ನ ಮತ್ತು ನನ್ನ ತಮ್ಮನ ಎಜುಕೇಷನ್ ಗೆ ಅಂತ ಫ್ಯಾಮಿಲಿ ಎಲ್ಲಾ ಬೆಂಗಳೂರಿಗೆ ಶಿಫ್ಟ್ ಆಗಿದಿವಿ. ಅಪ್ಪ ಪೇಯಿಂಟ್ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಮಾಡುತ್ತಾರೆ. ಅಮ್ಮ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ.['ಕಾಮಿಡಿ ಕಿಲಾಡಿ' ಲೋಕೇಶ್ ಕುಮಾರ್ ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡು.!]

    ಕಾಮಿಡಿ ಮಾಡುವುದು ಸಿಕ್ಕಾ ಪಟ್ಟೆ ಕಷ್ಟ ಅಂತೆ ನಿಜಾನಾ?

    ಕಾಮಿಡಿ ಮಾಡುವುದು ಸಿಕ್ಕಾ ಪಟ್ಟೆ ಕಷ್ಟ ಅಂತೆ ನಿಜಾನಾ?

    -ಕಾಮಿಡಿ ಮಾಡೋದು ಸಿಕ್ಕಾ ಪಟ್ಟೆ ಕಷ್ಟ. ಆದ್ರೆ ನಾವ್ ಒಂದ್ ಮೂಡ್ ನಲ್ಲಿದ್ರೆ ಸುಲಭ. ಆದ್ರೆ ಅರ್ಥ ಮಾಡಿಕೊಳ್ಳೋರು ಇರಬೇಕು ಅಷ್ಟೆ. ಕೆಲವರು ನಾನ್ಯಾಕ್ ನಗ್ ಬೇಕು, ಅಂತ ಹಟಕ್ಕೆ ಕೂತ್ ಬಿಡ್ತಾರೆ. ಅಂತವರನ್ನ ನಗಿಸೋದು ಕಷ್ಟ. ಅಳೋದು ಎಷ್ಟು ಕಷ್ಟನೋ, ನಗಿಸೋದು ಅಷ್ಟೇ ಕಷ್ಟ. ಒಬ್ಬ ಹಾಸ್ಯಗಾರ ಮನುಷ್ಯನ ಅರ್ಧ ಬಿಪಿ/ಸುಗರ್ ಕಳಿಯೋನು ಅವನೇ, ನಗ್ಲಿಲ್ಲ ಅಂದ್ರೆ ಸಿಕ್ಕಾಪಟ್ಟೆ ಲಗಾಟ ಹೊಡಿಬೇಕಾಗುತ್ತೆ. ನಗಿಸೋದು ಒಂಥರ ಕಾಂಪಿಟೇಶನ್ ಆಗಿರುತ್ತೆ.[ಕನ್ನಡಿಗರಿಗೆ ಕಚಗುಳಿ ಇಟ್ಟು ನಗಿಸಿದ 'ಕಿಲಾಡಿ' ನರ್ಸ್ ದಿವ್ಯಶ್ರೀ ಸಂದರ್ಶನ]

    ಕಾಮಿಡಿ ಕಿಲಾಡಿಗಳಲ್ಲಿ ನಿಮ್ಮ ನೆಚ್ಚಿನ ಪಾತ್ರ?

    ಕಾಮಿಡಿ ಕಿಲಾಡಿಗಳಲ್ಲಿ ನಿಮ್ಮ ನೆಚ್ಚಿನ ಪಾತ್ರ?

    -ಅದು ನಾವೆಲ್ಲ ಜಡ್ಜಸ್ ಗಳ ರೀತಿ ವೇಶ ಧರಿಸಿ ಅವರ ರೀತಿಯಲ್ಲಿ ಆಕ್ಟ್ ಮಾಡಿದ್ದು. ಇನ್ನೊಂದು ತುಂಬಾ ಇಂಪ್ರೆಸ್ ಮಾಡಿದ್ದು ಅಂದ್ರೆ ಉಮಾಶ್ರೀ ಕ್ಯಾರೆಕ್ಟರ್. ಅದೊಂದು ಅತ್ತೆ-ಸೊಸೆ ರೋಲ್. ಅದರಲ್ಲಿ ನಾನು ಅತ್ತೆ, ಸೊಸೆನಾ ನಿಭಾಯಿಸುವ ಪಾತ್ರ ಮಾಡಿದ್ದೆ. ಆ ಪಾತ್ರದಿಂದ ಈಗ ಜನ ಹೊರಗೆ ನೋಡಿದಾಗ ನೀನು ಜೂನಿಯರ್ ಉಮಾಶ್ರೀನೇ ಕಣಮ್ಮ ಅಂತಾರೆ.[ಸಂಪ್ರದಾಯವನ್ನ ಧಿಕ್ಕರಿಸಿ ಬಂದ ಕಿಲಾಡಿ 'ಸಂಜು ಬಸಯ್ಯ'ನ ಬದುಕೇ ರೋಚಕ!]

    ಕಾಮಿಡಿ ಕಿಲಾಡಿ ಗೆ ಎಂಟ್ರಿ ಕೊಟ್ಟ ಬಗ್ಗೆ ಹೇಳಿ?

    ಕಾಮಿಡಿ ಕಿಲಾಡಿ ಗೆ ಎಂಟ್ರಿ ಕೊಟ್ಟ ಬಗ್ಗೆ ಹೇಳಿ?

    -ವೆರಿ ಟೆರಿಬಲ್. 'ಕಾಮಿಡಿ ಕಿಲಾಡಿಗಳು' ಪ್ರೋಮೋ ನೋಡಿಯೂ ಇಂಟ್ರೆಸ್ಟ್ ಇರಲಿಲ್ಲ. ಯಾಕಂದ್ರೆ ಅದಕ್ಕೂ ಮುನ್ನ ತುಂಬಾ ಆಡಿಷನ್ ಅಟೆಂಡ್ ಮಾಡಿದ್ದೆ. ಅಲ್ಲೆಲ್ಲ ನಂಗೆ 'ನಿನ್ಗೆ ಗ್ಲಾಮ್ (ಗ್ಲಾಮರ್) ಲುಕ್ ಇಲ್ಲ. ನಿನ್ ವಾಯ್ಸ್ ಒಂಥರಾ ಗಂಡು ಮಕ್ಕಳ ವಾಯ್ಸ್ ರೀತಿ ಇದೆ. ಚೆನ್ನಾಗಿ ಮಾತಾಡೋಕೆ ಆಗಲ್ಲ. ವಾಯ್ಸ್ ಕ್ವಾಲಿಟಿ ಇಲ್ಲ. ತುಂಬಾ ಕುಳ್ಳ ಇದಿಯಾ. ಪ್ಲಂಪಿ ಪ್ಲಂಪಿ ಥರಾ ಕಾಣ್ತೀಯ ಅಂತ ಹೇಳಿದ್ರು. ಸೋ ಟ್ಯಾಲೆಂಟ್ ಗೆ ಇದೆಲ್ಲಾ ಅಡ್ಡಿ ಆಗುತ್ತಾ ಅನ್ನೋದು ಮೊದಲು ನನ್ನ ಮೈಂಡ್ ನಲ್ಲಿ ಉಳಿದಿತ್ತು. ಆದ್ರೆ 'ಕಾಮಿಡಿ ಕಿಲಾಡಿಗಳು' ಆಡಿಷನ್ ದಿನವೇ ನನ್ನ ಹುಟ್ಟಿದಬ್ಬ ಇತ್ತು. ನನ್ನ ಫ್ರೆಂಡ್ಸ್ ಎಲ್ಲಾ ಬರ್ತ್ ಡೇ ಸೆಲೆಬ್ರೇಟ್ ಮಾಡೋಕೆ ಹೊರಗೆ ಹೋಗೋಣ ಅಂತ ಕರೆದುಕೊಂಡು ಬಂದು ಆಡಿಷನ್ ಗೆ ಬಿಟ್ಟಿದ್ರು. ಅವರಿಂದಲೇ ನಾನು ಇಲ್ಲಿಗೆ ಬಂದಿದ್ದು. ಅಲ್ಲದೇ ಅಮ್ಮನು ಸಹ ಕಾರಣ.['ಕಾಮಿಡಿ ಕಿಲಾಡಿ' ಮುತ್ತುರಾಜ್ ಯಾರು? ಅವರ ಹಿನ್ನೆಲೆ ಏನು?]

    ಮುಂದೆ ಏನ್ ಮಾಡ್ಬೇಕು ಅಂದುಕೊಂಡಿದ್ದೀರಿ?

    ಮುಂದೆ ಏನ್ ಮಾಡ್ಬೇಕು ಅಂದುಕೊಂಡಿದ್ದೀರಿ?

    -ಸಿನಿಮಾ ಫೀಲ್ಡ್ ನಲ್ಲಿ ಒಳ್ಳೆ ಅವಕಾಶಗಳು ಬಂದ್ರೆ, ಅಭಿನಯದಲ್ಲಿ ತೊಡಿಗಿಕೊಳ್ಳೋಣ ಅಂತ ಡಿಸೈಡ್ ಮಾಡಿದಿನಿ.

    ಹಾಸ್ಯ ಕಲಾವಿದರಲ್ಲಿ ನೋವು ಅಡಗಿರುತ್ತಂತೆ. ಹಾಗೆ ನಿಮ್ಮಲ್ಲೂ ಏನಾದ್ರು?

    ಹಾಸ್ಯ ಕಲಾವಿದರಲ್ಲಿ ನೋವು ಅಡಗಿರುತ್ತಂತೆ. ಹಾಗೆ ನಿಮ್ಮಲ್ಲೂ ಏನಾದ್ರು?

    -ಅದು ನೂರಕ್ಕೆ ನೂರು ಸತ್ಯ. ಯಾಕಂದ್ರೆ ನಾನು ಆಕ್ಟಿಂಗ್ ಮಾಡೋದಿಕ್ಕೆ ನಮ್ಮ ಅಪ್ಪನ ವಿರೋಧ ಇತ್ತು. ಅದೇ ಭಯ ನನ್ನನ್ನು ಡಿಪ್ರೆಶನ್ ಗೆ ತಳ್ಳುತ್ತಿತ್ತು. ಅಲ್ಲದೇ ಆಕ್ಟಿಂಗ್ ಫೀಲ್ಡ್ ಗೆ ಬರೋರು ತುಂಬಾ ಸ್ಟ್ರಗಲ್ ಮಾಡಿರುತ್ತಾರೆ.

    'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಿಂದ ನಿಮ್ಮಲ್ಲಾದ ಬದಲಾವಣೆ?

    'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಿಂದ ನಿಮ್ಮಲ್ಲಾದ ಬದಲಾವಣೆ?

    -ಸಾಕಷ್ಟು ಬದಲಾವಣೆ ಆಗಿದೆ. 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಬರೋಕು ಮುನ್ನ ನಾನೊಂಥರ ಟಾಮ್ ಬಾಯ್. ಬಜಾರಿ. ನಾಚಿಕೆ ಪಟ್ಟಿಕೊಳ್ಳೋದು, ನಯ-ನಾಜೂಕು ಯಾವುದು ಇರಲಿಲ್ಲ. ಆಗ ಬಜಾರಿ ಅವಳು ಅಂತಿದ್ರು. ಈಗ ನಯನ ಅವರು ಆಕ್ಟರ್ ಅಂತಾರೆ. ನನ್ನ ಟೀಚರ್ ಸಹ ಗೌರವದಿಂದ ನಯನ ಅವರೇ ಅಂತಾರೆ. ಮನೇಲು ರೆಸ್ಪೆಕ್ಟ್ ಇದೆ.

    ಅಭಿನಯಕ್ಕೆ ಆಫರ್ ಬಂದಿದ್ಯಾ?

    ಅಭಿನಯಕ್ಕೆ ಆಫರ್ ಬಂದಿದ್ಯಾ?

    -ಜಗ್ಗೇಶ್ ಸರ್ ಫಿಲ್ಮ್ ಗೆ ಬಂದಿದೆ. ಆದ್ರೆ ಸಿನಿಮಾ ಯಾವುದು, ಪಾತ್ರ ಯಾವುದು ಅಂತ ಇನ್ನೂ ಗೊತ್ತಿಲ್ಲ. ಅದಲ್ಲದೇ ಶಿವರಾಜ್ ಕುಮಾರ್ ಸರ್ ಅವರ 'ಲೀಡರ್' ಚಿತ್ರಕ್ಕೆ ಅವಕಾಶ ಬಂದಿದೆ ಅಂತ ಜೀ ವಾಹಿನಿ ಅವರು ಹೇಳಿದ್ರು. ಅದು ಕನ್ಫರ್ಮ್ ಆಗಿಲ್ಲ. ಮುಂದೆ ಏನಾಗುತ್ತೋ ನೋಡ್ಬೇಕು.

    ಈಗ ಅಪ್ಪನ ಪ್ರೋತ್ಸಾಹ ಇದಿಯಾ?

    ಈಗ ಅಪ್ಪನ ಪ್ರೋತ್ಸಾಹ ಇದಿಯಾ?

    -ಈಗ ಫ್ಯಾಮಿಲಿ ಸಪೋರ್ಟ್ ಅನ್ನೋದು ಶತ್ರುಗಳೆಲ್ಲ ಮಿತ್ರರಾಗಿಬಿಟ್ಟಿದ್ದಾರೆ. ಅಪ್ಪನ ಭಯಕ್ಕೆ ಮೊದಲು ಯಾರು ಸಪೋರ್ಟ್ ಮಾಡ್ತಿರ್ ಲಿಲ್ಲ. ಆದ್ರೆ ನಮ್ಮ ಅಪ್ಪ ಒಪ್ಪಿದ ಮೇಲೆ ಎಲ್ಲರೂ ಸಾಥ್ ಕೊಟ್ರು.

    'ಕಾಮಿಡಿ ಕಿಲಾಡಿಗಳು' ಪಯಣದ ಬಗ್ಗೆ ಹೇಳಿ..

    'ಕಾಮಿಡಿ ಕಿಲಾಡಿಗಳು' ಪಯಣದ ಬಗ್ಗೆ ಹೇಳಿ..

    -'ಕಾಮಿಡಿ ಕಿಲಾಡಿಗಳು' ಜರ್ನಿಯಲ್ಲಿ ದಿನಾ ಹಬ್ಬಾನೇ. ತುಮಕೂರಿನಲ್ಲಿ 'ಮಹಾಸಂಗಮ' ಕಾರ್ಯಕ್ರಮದಲ್ಲಿ ಅಷ್ಟೊಂದು ಜನರ ಮುಂದೆ ಅಭಿನಯಿಸಿದ್ದು ತುಂಬಾ ಖುಷಿ ಆಯಿತು. ಈಗ ಎಲ್ಲರನ್ನೂ ಮಿಸ್ ಮಾಡಿಕೊಂಡೆ ಅನ್ನೋ ಫೀಲ್ ಆಗ್ತಿದೆ. ಬಟ್ ನಮ್ಮ ಆಕ್ಟಿಂಗ್ ಜೀ ವಾಹಿನಿಯಲ್ಲಿ ಮತ್ತೆ ಮುಂದುವರೆಯುತ್ತದೆ. ಎಲ್ಲರೂ ನಮ್ಮ ಅಭಿನಯವನ್ನು ಕಂಟಿನ್ಯೂ ಆಗಿ ನೋಡಬಹುದು.

    ಕಾರ್ಯಕ್ರಮದಲ್ಲಿ ಬಿಜಿ ಇದ್ದಾಗ ತುಂಬಾ ಮಿಸ್ ಮಾಡಿಕೊಂಡೆ ಅನಿಸಿದ್ದು..

    ಕಾರ್ಯಕ್ರಮದಲ್ಲಿ ಬಿಜಿ ಇದ್ದಾಗ ತುಂಬಾ ಮಿಸ್ ಮಾಡಿಕೊಂಡೆ ಅನಿಸಿದ್ದು..

    -ನನ್ನ ಫ್ರೆಂಡ್ಸ್ ಮಿಸ್ ಮಾಡಿಕೊಳ್ಳುತ್ತಿದ್ದೆ ಅನಿಸ್ ತಿತ್ತು. ಯಾಕಂದ್ರೆ ಎಲ್ಲರೂ ವಾರಕ್ಕೆ 3-4 ಸಿನಿಮಾಗಳನ್ನ ನೋಡ್ತಿದ್ವಿ. ಸೋ ಅವರನ್ನೆಲ್ಲಾ ಮಿಸ್ ಮಾಡ್ಕೋತಿದೀನಿ ಅನ್ನೋ ಫೀಲ್ ಕಾಡುತ್ತಿತ್ತು.

    English summary
    Zee Kannada 'Comedy Kiladigalu' Runner-Up Hubballi Nayana Interview.
    Tuesday, March 14, 2017, 13:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X