»   » 'ಕಾಮಿಡಿ ಕಿಲಾಡಿಗಳು' ನಯನ ತಮ್ಮ ನಟನೆ ಬಗ್ಗೆ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಗಳು..

'ಕಾಮಿಡಿ ಕಿಲಾಡಿಗಳು' ನಯನ ತಮ್ಮ ನಟನೆ ಬಗ್ಗೆ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಗಳು..

Posted By:
Subscribe to Filmibeat Kannada

ಕನ್ನಡಿಗರ ನೆಚ್ಚಿನ ಕಾರ್ಯಕ್ರಮ 'ಕಾಮಿಡಿ ಕಿಲಾಡಿಗಳು' ರನ್ನರ್ ಅಪ್ ಹುಬ್ಬಳ್ಳಿ ನಯನ ನಿಮಗೆಲ್ಲಾ ಗೊತ್ತೇ ಇದೆ. ಇವರು ಸ್ಟೇಜ್ ಮೇಲ್ ಬಂದ್ರೆ ಪ್ರೇಕ್ಷಕರಿಗೆ ಎಲ್ಲಿಲ್ಲದ ಜೋಶ್. ಯಾಕಂದ್ರೆ 'ಕಾಮಿಡಿ ಕಿಲಾಡಿಗಳು' ವೇದಿಕೆಯಲ್ಲಿ ಬಣ್ಣ ಹಚ್ಚಿದ ತಮ್ಮ ಎಲ್ಲಾ ಪಾತ್ರಗಳಿಂದಲೂ ಇವರು ಕನ್ನಡಿಗರಿಗೆ ಇಷ್ಟವಾಗಿದ್ದಾರೆ.

ಬಾಯಿ ಬಿಟ್ರೆ ಪಟ ಪಟ ಅಂತ ಮಾತಾಡೋ ನಯನ, ಹೆಂಡತಿ ಪಾತ್ರ ಮಾಡಿದ್ರು ಅಲ್ಲೂ ಸಹ ಗಂಡನಿಗಿಂತ ಒಂದು ಕೈ ಮೇಲಾಗೆ ಕಾಣಿಸಿಕೊಳ್ಳುತಿದ್ರು. ಗಂಡುಬೀರಿ, ಆಂಕರ್, ಉಮಾಶ್ರೀ, ಅಜ್ಜಿ, ಹೀಗೆ ಎಲ್ಲಾ ಪಾತ್ರಗಳನ್ನು ನೀರು ಕುಡಿದಷ್ಟು ಸುಲಭವಾಗಿ ನಿರ್ವಹಿಸಿ ಕನ್ನಡಿಗರ ಮನಗೆದ್ದಿದ್ದಾರೆ. ನಯನ ವೇದಿಕೆ ಮೇಲೆ ಬರ್ ತಿದ್ರೆ ಪ್ರೇಕ್ಷಕರಿಗೆ ಒಂದು ಜೋಶ್ ಶುರುವಾಗುವಂತೆ ನಟಿಸುತ್ತಿದ್ರು. ಇಷ್ಟೊಂದು ಬೋಲ್ಡ್ ಆಗಿ ನಯನ ಅಭಿನಯಿಸಲು, ಅವರು ಚಿಕ್ಕಂದಿನಿಂದ ನಟನೆ ಬಗ್ಗೆ ಹೊಂದಿದ್ದ ಹಲವು ಕುತೂಹಲಕಾರಿ ಸಂಗತಿಗಳೇ ಕಾರಣ.

ಕಿಲಾಡಿ ಹುಬ್ಬಳ್ಳಿ ನಯನ ತಾವು ನಟನೆ ಬಗ್ಗೆ ಹೊಂದಿದ್ದ ಕುತೂಹಲಗಳನ್ನು ನಿಮ್ಮ 'ಫಿಲ್ಮಿ ಬೀಟ್' ನೊಂದಿಗೆ ಹಂಚಿಕೊಂಡಿದ್ದಾರೆ. ಅವರು ಹೇಳಿದ್ದು ಏನು? ತಿಳಿಯಲು ಮುಂದೆ ಓದಿ..
ಸಂದರ್ಶನ- ಸುನೀಲ್ ಬಿಂಡಹಳ್ಳಿ

ನಟನೆ ಬಗ್ಗೆ ಇಂಟರೆಸ್ಟ್ ಬಂದಿದ್ದು ಹೇಗೆ?

ನಟನೆ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಕ್ರೇಜ್ ಇತ್ತು. ಯಾಕಂದ್ರೆ ನಮ್ಮ ಅಜ್ಜಿ ಚಿಂದೋಡಿ ಲೀಲಾ, ಮಿನುಗು ತಾರೆ ಕಲ್ಪನಾ ಜೊತೆ ಆಕ್ಟಿಂಗ್ ಮಾಡಿದಾರೆ. ಅವರಿಂದ ನಮ್ಮ ಅಪ್ಪನಿಗೂ ಅಭಿನಯದ ಬಗ್ಗೆ ಹುಚ್ಚು ಇತ್ತು. ನಮ್ಮ ತಂದೆ ನನ್ನ ವಯಸ್ಸಿನಲ್ಲಿ ಪೌರಾಣಿಕ, ಸಾಮಾಜಿಕ ನಾಟಕಗಳನ್ನು ಡೈರೆಕ್ಟ್ ಮಾಡ್ ತಿದ್ರು. ಸೋ ನಮ್ಮ ತಂದೆ ಡೈಲಾಗ್ ಹೊಡೆಯೋದ ನೋಡ್ತಾ ನೋಡ್ತಾ ನಂಗೂ ಅದೇ ರೀತಿ ಆಕ್ಟಿಂಗ್ ಮಾಡಬೇಕು ಅನ್ನೋ ಹುಚ್ಚು ಶುರುವಾಯ್ತು.[ಕಲಾವಿದನಾಗಲು ದಾವಣಗೆರೆ ಗೋವಿಂದೇಗೌಡ ಬೆಂಗಳೂರಿನಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ..]

ಪುರುಷರ ಧ್ವನಿಯಲ್ಲಿ ಮಿಮಿಕ್ರಿ ಮಾಡ್ತಿರಂತಲ್ಲಾ... ಹೇಗ್ ಕಲಿತಿದ್ದು?

ನಮ್ಮ ತಂದೆ ಅಭಿನಯದ ಜೊತೆಗೆ ಡ್ರಾಮಾ ಡೈರೆಕ್ಟ್ ಮಾಡ್ ತಿದ್ರು. ಅಲ್ಲದೇ ಮಿಮಿಕ್ರಿ ಆರ್ಟಿಸ್ಟ್ ಸಹ ಆಗಿದ್ರು. ನಾನು ನಾಲ್ಕನೇ ತರಗತಿಯಲ್ಲಿ ಇದ್ದಾಗ ಅವರು ಮಿಮಿಕ್ರಿ ಮಾಡೋದನ್ನ ಕೇಳ್ ಬೇಕ್ ಆದ್ರೆ ಹೇಗ್ ಸಾಧ್ಯ ಇದು. ಇರೋ ವಾಯ್ಸ್ ಬಿಟ್ಟು ಬೇರೆಯದೇ ವಾಯ್ಸ್ ನಲ್ಲಿ ಚೇಂಜ್ ಮಾಡಿ ಮಾತಾಡ್ ತರಲ್ಲಾ. ಹೇಗ್ ಸಾಧ್ಯ ಇದು ಅಂತ ತಿಳಿದುಕೊಳ್ಳುವ ಹುಚ್ಚು ಆಗ್ಲೇ ಇತ್ತು. ಆ ಕುತೂಹಲದಿಂದ ನಾನು ಮಿಮಿಕ್ರಿ ಕಲಿತಿದ್ದು.['ಕಾಮಿಡಿ ಕಿಲಾಡಿ' ಲೋಕೇಶ್ ಬಗ್ಗೆ ನಿಮಗೆಲ್ಲಾ ಗೊತ್ತಿಲ್ಲದ ಸತ್ಯ ಸಂಗತಿ ಇಲ್ಲಿದೆ]

ಮಿಮಿಕ್ರಿ ಮಾಡೋದನ್ನ ಶುರು ಮಾಡಿದ್ದು..

ನಯನ ತಮಗಿರುವ ಮಿಮಿಕ್ರಿ ಕುತೂಹಲದಿಂದ ಮೊದಲ ಸಲ ಪ್ರಯತ್ನಿಸಿ ಮಿಮಿಕ್ರಿ ಮಾಡಿದ್ದು ಡಾ.ರಾಜ್ ಕುಮಾರ್ ಅವರ ವಾಯ್ಸ್ ಅನ್ನು.[ಕನ್ನಡಿಗರಿಗೆ ಕಚಗುಳಿ ಇಟ್ಟು ನಗಿಸಿದ 'ಕಿಲಾಡಿ' ನರ್ಸ್ ದಿವ್ಯಶ್ರೀ ಸಂದರ್ಶನ]

ನಯನ ಚಿಕ್ಕಂದಿನಲ್ಲೇ ಮಿಮಿಕ್ರಿ ಮಾಡುತ್ತಿದ್ದದ್ದು...

ಕಿಲಾಡಿ ನಯನ ನಾಲ್ಕನೇ ತರಗತಿಯಲ್ಲಿದ್ದಾಗಲೇ ಡಾ. ರಾಜ್ ಕುಮಾರ್ ಅವರ ವಾಯ್ಸ್ ನಲ್ಲಿ ಮಾತ್ರವಲ್ಲದೇ ಎನ್.ಎಸ್. ರಾವ್, ಧಿರೇಂದ್ರ ಗೋಪಾಲ್, ತಮಿಳಿನ ಕೋವೈ ಸರಳ ಅವರ ವಾಯ್ಸ್ ನಲ್ಲಿ ಮಿಮಿಕ್ರಿ ಮಾಡ್ ತಿದ್ರು.

ಜನ ನೋಡುದ್ರೆ ಜೋಶ್ ಬರುತ್ತಂತೆ

ಅಜ್ಜಿಯ ಇನ್ ಫ್ಲಿಯನ್ಸ್, ಅಪ್ಪ ಮಾಡುತ್ತಿದ್ದ ಮಿಮಿಕ್ರಿ ಬಗ್ಗೆ ಕುತೂಹಲ ಇಟ್ಟುಕೊಂಡಿದ್ದ ನಯನ ಚಿಕ್ಕಂದಿನಿಂದಲೂ ಸ್ಟೇಜ್ ಕಾರ್ಯಕ್ರಮಗಳನ್ನು ಕೊಡುತ್ತಿದ್ದ ಕಾರಣ ಯಾವುದೇ ಸ್ಟೇಜ್ ಫಿಯರ್ ಇರಲಿಲ್ಲವಂತೆ. ಅಲ್ಲದೇ ಸ್ಟೇಜ್ ಅಂದ್ರೆ ಸ್ಟೇಜ್ ಮುಂದಿನ ಜನರನ್ನು ನೋಡುತಿದ್ರೆ ಜೋಶ್ ಬಂದಿಬಿಡುತ್ತೆ ನನಗೆ ಎಂದು ತಮ್ಮ ನಟನೆ ಬಗ್ಗೆ ಇದ್ದ ಕುತೂಹಲಗಳ ಬಗ್ಗೆ ಹೇಳಿಕೊಂಡಿದ್ದಾರೆ.

English summary
Zee Kannada 'Comedy Kiladigalu' Runner-Up Hubballi Nayana revealed about her Acting curiocity Matter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada