For Quick Alerts
  ALLOW NOTIFICATIONS  
  For Daily Alerts

  ಲಾಯರ್ ಆಗಿದ್ದ ಶ್ರದ್ಧಾ ಕಳುಹಿಸಿದ್ದ ಒಂದು ಇ-ಮೇಲ್ ನಾಯಕಿ ಆಗುವಂತೆ ಮಾಡಿತು

  By Naveen
  |
  ರೋಚಕವಾಗಿದೆ ಶ್ರದ್ಧಾ ಶ್ರೀನಾಥ್ ಯು ಟರ್ನ್ ಕಥೆ | Filmibeat Kannada

  ನಟಿ ಶ್ರದ್ಧಾ ಶ್ರೀನಾಥ್ ಎನ್ನುವಾಗ ಮೊದಲು ನೆನಪಿಗೆ ಬರುವ ಸಿನಿಮಾ 'ಯೂ ಟರ್ನ್'. ಈ ಸಿನಿಮಾದಲ್ಲಿ ಬೈಕ್ ಮೇಲೆ ಕುಳಿತು ಯೂ ಟರ್ನ್ ತೆಗೆದುಕೊಂಡ ಈ ಹುಡುಗಿಗೆ ಈ ಸಿನಿಮಾ ದೊಡ್ಡ 'ಯೂ ಟರ್ನ್' ಆಗಿತ್ತು. ಲಾಯರ್ ಆಗಿದ್ದ ಶ್ರದ್ಧಾ ಜನ ಮೆಚ್ಚಿದ ನಾಯಕಿ ಆಗುವಂತೆ ಮಾಡಿತ್ತು.

  'ಯೂ ಟರ್ನ್' ಸಿನಿಮಾ ಈಗ ತೆಲುಗಿಗೆ ರಿಮೇಕ್ ಆಗುತ್ತಿದೆ. ಅಲ್ಲಿ ನಟಿ ಸಮಂತಾ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಮೊದಲು ಲಾಯರ್ ಆಗಿದ್ದ ಶ್ರದ್ಧಾ ಕನ್ನಡ ಸಿನಿಮಾ ಮಾಡಿ ಗೆದ್ದಿದ್ದಾರೆ. ತಮಿಳಿನಲ್ಲಿ ನಟಿಸಿ ಈಗ ಬಾಲಿವುಡ್ ಸಿನಿಮಾ ಮಾಡುತ್ತಿದ್ದಾರೆ. ಹೀಗಿರುವಾಗ, 'ಯೂ ಟರ್ನ್' ಸಿನಿಮಾಗೆ ಶ್ರದ್ಧಾ ಆಯ್ಕೆ ಆಗಿದ್ದು ಹೇಗೆ ಎನ್ನುವ ಕುತೂಹಲ ಇರುತ್ತದೆ. ಅವರ ಸಿನಿಮಾ ಜರ್ನಿ ಆರಂಭಕ್ಕೆ ಕಾರಣವಾದ 'ಯೂ ಟರ್ನ್' ಸಿನಿಮಾದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯ ಮುಂದಿದೆ ಓದಿ...

   ನನ್ನ ಮೊದಲ ಸಿನಿಮಾ : ಗಣೇಶ್ ಈ ಸಿನಿಮಾಗಾಗಿ ಬೆವರಲ್ಲ, ರಕ್ತ ಸುರಿಸಿದ್ದರು! ನನ್ನ ಮೊದಲ ಸಿನಿಮಾ : ಗಣೇಶ್ ಈ ಸಿನಿಮಾಗಾಗಿ ಬೆವರಲ್ಲ, ರಕ್ತ ಸುರಿಸಿದ್ದರು!

  ಲಾಯರ್ ಕೆಲಸ ಬಿಟ್ಟರು

  ಲಾಯರ್ ಕೆಲಸ ಬಿಟ್ಟರು

  ಹೊಸಬರ ಜೊತೆಗೆ ಸಿನಿಮಾ ಮಾಡಿದರೆ ತುಂಬ ರಿಯಲಿಸ್ಟಿಕ್ ಫೀಲ್ ಇರುತ್ತದೆ ಎನ್ನುವುದು ಪವನ್ ಕುಮಾರ್ ಅವರ ಭಾವನೆ ಆಗಿತ್ತು. ಅದೇ ಕಾರಣಕ್ಕೆ 'ಯೂ ಟರ್ನ್' ಚಿತ್ರಕ್ಕೆ ಹೊಸ ಹುಡುಗಿಯ ಹುಡುಕಾಟದಲ್ಲಿ ಇದ್ದರು. ಲಾಯರ್ ಆಗಿದ್ದ ಶ್ರದ್ಧಾ ಶ್ರೀನಾಥ್ ಫೆಬ್ರವರಿ 28, 2015 ಕೆಲಸ ಬಿಟ್ಟರು. ಮಾರ್ಚ್ ನಲ್ಲಿ ಪವನ್ ಕುಮಾರ್ ಹೊಸ ಸಿನಿಮಾಗೆ ನಟಿ ಬೇಕು ಅಂತ ತಿಳಿದು ಪವನ್ ಕುಮಾರ್ ಗೆ ಒಂದು ಇ ಮೇಲ್ ಮಾಡಿದರು.

  ಶ್ರದ್ಧಾ ಕನ್ನಡ ಅಷ್ಟು ಚೆನ್ನಾಗಿರಲಿಲ್ಲ

  ಶ್ರದ್ಧಾ ಕನ್ನಡ ಅಷ್ಟು ಚೆನ್ನಾಗಿರಲಿಲ್ಲ

  ಶ್ರದ್ಧಾ ಫೋಟೋ ನೋಡಿದ ಪವನ್ ಕುಮಾರ್ ತನ್ನ ಚಿತ್ರದ ರಚನಾ ಪಾತ್ರಕ್ಕೆ ತುಂಬ ಸೂಟ್ ಆಗ್ತಾರೆ ಅಂತ ಅನಿಸಿ ಶ್ರದ್ಧಾ ಮೇಲ್ ಗೆ ಪ್ರತಿಕ್ರಿಯೆ ನೀಡಿದರು. ಮೂರು ದಿನ ಬಿಟ್ಟು ಆಡಿಷನ್ ಗೆ ಕರೆದರು. ಪವನ್ ಕಳುಹಿಸಿದ್ದ ಸ್ಕ್ರಿಪ್ಟ್ ನೋಡಿಕೊಂಡು ಫುಲ್ ತಯಾರಿ ಮಾಡಿಕೊಂಡಿದ್ದ ಶ್ರದ್ಧಾ ಖುಷಿಯಿಂದ ಆಡಿಷನ್ ಗೆ ಹೋದರು. ಎರಡು ಮೂರು ಬಾರಿ ಆಡಿಷನ್ ಮಾಡಿಸಿದಾಗ ಶ್ರದ್ಧಾ ಮಾತಾಡುವ ಕನ್ನಡ ಅಷ್ಟು ಚೆನ್ನಾಗಿರಲಿಲ್ಲ.

  ನನ್ನ ಮೊದಲ ಸಿನಿಮಾ : ದೊಡ್ಮನೆಯವರ ನಂಬಿಕೆಯನ್ನು ಉಳಿಸಿದ್ದ 'ಆಕಾಶ್' ಸಿನಿಮಾ ನನ್ನ ಮೊದಲ ಸಿನಿಮಾ : ದೊಡ್ಮನೆಯವರ ನಂಬಿಕೆಯನ್ನು ಉಳಿಸಿದ್ದ 'ಆಕಾಶ್' ಸಿನಿಮಾ

  ಸಿನಿಮಾಗೆ ಸೆಲೆಕ್ಟ್ ಆಗಲ್ಲ ಅಂದುಕೊಂಡಿದ್ದರು

  ಸಿನಿಮಾಗೆ ಸೆಲೆಕ್ಟ್ ಆಗಲ್ಲ ಅಂದುಕೊಂಡಿದ್ದರು

  ಆಡಿಷನ್ ಮುಗಿದ ನಂತರ ಪವನ್ ಶ್ರದ್ಧಾಗೆ ಮೆಸೇಜ್ ಮಾಡಿ ನಿಮ್ಮ ಕನ್ನಡ ಅಷ್ಟೊಂದು ಚೆನ್ನಾಗಿಲ್ಲ. ಜನರಿಗೆ ನೀವು ಯೋಚನೆ ಮಾಡಿ ಕನ್ನಡ ಮಾತನಾಡುತ್ತೀರಾ ಅಂತ ಅನಿಸುತ್ತದೆ. ನೀವು ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಿಲ್ಲ ಎಂದರಂತೆ. ಪವನ್ ಮಾತು ಕೇಳಿದ ಶ್ರದ್ಧಾ ನಾನು ಕನ್ನಡ ಸಿನಿಮಾ ಮಾಡುತ್ತಿದ್ದೇನೆ. ಆದರೆ ನನ್ನ ಕನ್ನಡ ಸರಿ ಇಲ್ಲ. ಸೋ, ನಾನು ಈ ಸಿನಿಮಾಗೆ ಸೆಲೆಕ್ಟ್ ಆಗಲ್ಲ ಅಂತ ಅಂದುಕೊಂಡರು.

  ಶ್ರದ್ಧಾ ಲುಕ್ ತುಂಬ ಇಷ್ಟ ಆಗಿತ್ತು

  ಶ್ರದ್ಧಾ ಲುಕ್ ತುಂಬ ಇಷ್ಟ ಆಗಿತ್ತು

  ನಂತರ ಮತ್ತೆ ಯೋಚನೆ ಮಾಡಿದ ಪವನ್ ಈ ಸಿನಿಮಾದ ನಾಯಕಿಯ ಪಾತ್ರವಾದ ರಚನಾ ಪಾತ್ರ ಇಂಗ್ಲೀಷ್ ನ್ಯೂಸ್ ಪೇಪರ್ ನಲ್ಲಿ ಕೆಲಸ ಮಾಡುವ ಪಾತ್ರ ಅದ್ದರಿಂದ ಶ್ರದ್ದಾ ಮಾತನಾಡುವ ಇಂಗ್ಲೀಷ್ ಮಿಶ್ರಿತ ಕನ್ನಡ ಭಾಷೆ ಹೊಂದಿಕೆ ಆಗುತ್ತದೆ ಅಂದುಕೊಂಡರಂತೆ. ಅದಕ್ಕಿಂತ ಹೆಚ್ಚಾಗಿ ಶ್ರದ್ಧಾ ಅವರ ಲುಕ್ ಆ ಪಾತ್ರಕ್ಕೆ ಪಕ್ಕಾ ಸೂಟ್ ಆಗುವಂತೆ ಇತ್ತು. ತುಂಬ ಯೋಚನೆ ಮಾಡಿದ ಪವನ್ ಒಂದು ಆಯ್ಕೆ ಆಗಿ ಇರಲಿ ಅಂತ ಲಿಸ್ಟ್ ನಲ್ಲಿ ಇಟ್ಟುಕೊಂಡಿದ್ದರಂತೆ.

  ಅಂತು ಆಯ್ಕೆ ಆದ ಶ್ರದ್ಧಾ

  ಅಂತು ಆಯ್ಕೆ ಆದ ಶ್ರದ್ಧಾ

  ಮೊದಲನೇ ಆಡಿಷನ್ ಬಳಿಕ ಇನ್ನೊಂದು ಸೀನ್ ಕೊಟ್ಟು ತಯಾರಿ ಮಾಡುವುದಕ್ಕೆ ಪವನ್ ಹೇಳಿದರಂತೆ. ಪ್ರಾಕ್ಟಿಸ್ ಮಾಡುವಾಗ ಕ್ಯಾಮರಾದಲ್ಲಿ ಶೂಟ್ ಮಾಡಿ ಇದು ಮೇಕಿಂಗ್ ಗೆ ಬರುತ್ತದೆ ಅಂದರೆಂತೆ. ಆಗಲೇ ಶ್ರದ್ಧಾಗೆ ಗೊತ್ತಾಗಿದ್ದು ಈ ಚಿತ್ರದಲ್ಲಿ ಅವರು ಆಯ್ಕೆ ಆಗಿದ್ದಾರೆ ಎನ್ನುವುದು. ಚಿತ್ರಕ್ಕೆ ಸೆಲೆಕ್ಟ್ ಆಗಿದ್ದೇನೆ ಅಂತ ತಿಳಿದ ನಂತರ ಶ್ರದ್ಧಾ ತುಂಬ ಖುಷಿ ಆದರಂತೆ. ಮುಖ್ಯವಾಗಿ ಶ್ರದ್ಧಾ ಅವರ ಟಾಮ್ ಬಾಯ್ ಲುಕ್ ಮತ್ತು ಹೇರ್ ಸ್ಟೈಲ್ ಈ ಪಾತ್ರಕ್ಕೆ ಚಾನ್ಸ್ ನೀಡುವಂತೆ ಮಾಡಿತ್ತು.

  ಯಾರಿಗೂ ಹೇಳಬೇಡಿ ಎಂದ ಪವನ್

  ಯಾರಿಗೂ ಹೇಳಬೇಡಿ ಎಂದ ಪವನ್

  ಹಿರೋಯಿನ್ ಆಗಿದ್ದೇನೆ ಅಂತ ಸಿಕ್ಕಾಪಟ್ಟೆ ಸಂತಸದಲ್ಲಿದ್ದರು ಶ್ರದ್ಧಾ. ಆದರೆ, ಈ ಸಂತಸವನ್ನು ಅವರು ಯಾರ ಬಳಿಯು ಹಂಚಿಕೊಳ್ಳುವ ಹಾಗೆ ಇರಲಿಲ್ಲ. ಪವನ್ ಈ ಚಿತ್ರಕ್ಕೆ ಆಯ್ಕೆ ಆದ ವಿಷಯವನ್ನು ಯಾರ ಬಳಿಯೂ ಹೇಳುವ ಹಾಗಿಲ್ಲ ಎಂದಿದ್ದರಂತೆ. ನಾನು ಹೇಳುವ ವರೆಗೆ ಸೋಷಿಯಲ್ ಮೀಡಿಯಾ, ಚಾನಲ್, ಪೇಪರ್ ಎಲ್ಲಿಯೂ ಈ ವಿಷಯ ರಿವೀಲ್ ಆಗಬಾರದು ಎನ್ನುವುದು ಪವನ್ ಮಾತಾಗಿತ್ತು. ಆದರೂ ತಂದೆ ತಾಯಿ ಜೊತೆಗೆ ಇಬ್ಬರು ಫ್ರೆಂಡ್ಸ್ ಗೆ ಶ್ರದ್ದಾ ಈ ವಿಷಯ ಹೇಳಿದರು.

  ದಿನಕ್ಕೆ 18 ಗಂಟೆ ಶೂಟಿಂಗ್

  ದಿನಕ್ಕೆ 18 ಗಂಟೆ ಶೂಟಿಂಗ್

  ಚಿತ್ರೀಕರಣದಲ್ಲಿ ಎಲ್ಲರೂ ಮಲಗುವ ಹಾಗೆ ಇರುತ್ತಿದ್ದರು. ಶೂಟ್ ಮುಗಿಸಿಕೊಂಡು ರಾತ್ರಿ 2 ಗಂಟೆಗೆ ಮನೆಗೆ ಬಂದು ಮಲಗಿದರೆ ಮತ್ತೆ ಬೆಳ್ಳಗೆ 7 ಗಂಟೆಗೆ ಹೊರಡಬೇಕಿತ್ತು. ಈ ರೀತಿ ದಿನಕ್ಕೆ 18 ಗಂಟೆ ಶೂಟಿಂಗ್ ಮಾಡಿದ್ದಾರೆ. ರಾಕ್ ಲೈನ್ ಸ್ಟೂಡಿಯೋದಲ್ಲಿ ಒಂದು ಪೊಲೀಸ್ ಸ್ಟೇಷನ್ ಸೆಟ್ ಹಾಕಿ ಏಳು ದಿನ ಹಗಲು ರಾತ್ರಿ ಶೂಟ್ ಮಾಡಿದ್ದಾರೆ. ಆ ಸೆಟ್ ನಲ್ಲಿ ಸಿಕ್ಕಾಪಟ್ಟೆ ಶಕೆ ಮತ್ತು ಸಖತ್ ಸೊಳ್ಳೆ ಇತ್ತು. ಚಿತ್ರೀಕರಣ ಮಾಡುವಾಗ ಎಲ್ಲರಿಗೆ ಸಿಕ್ಕಾಪಟ್ಟೆ ಕಾಟ ಕೊಟ್ಟಿದೆ. ಮಳೆ ಬರುವ ದೃಶ್ಯದ ಶೂಟಿಂಗ್ ತುಂಬ ಕಷ್ಟ ಆಯ್ತು.

  'ಯೂ ಟರ್ನ್' ಜರ್ನಿ ತುಂಬ ಚೆನ್ನಾಗಿತ್ತು

  'ಯೂ ಟರ್ನ್' ಜರ್ನಿ ತುಂಬ ಚೆನ್ನಾಗಿತ್ತು

  ಇನ್ ಡೋರ್ ಶೂಟಿಂಗ್ ತುಂಬ ಸುಲಭವಾಗಿ ಮುಗಿಸಿದ್ವಿ. ಆದರೆ ಡಬಲ್ ರೋಡ್ ಫ್ಲೈ ಓವರ್ ಶೂಟಿಂಗ್ ಚಾಲೆಂಜ್ ಆಗಿತ್ತು. ಬೆಳ್ಳಗೆ 6 ಗಂಟೆಯಿಂದ 8 ಪರವಾಗಿಲ್ಲ, ಆಮೇಲೆ ತುಂಬ ಜನ ಆಗುತ್ತಿದ್ದರು. ಅಕ್ಕ ಪಕ್ಕ ಬಿಲ್ಡಿಂಗ್ ಮೇಲಿನಿಂದ ಶೂಟಿಂಗ್ ಮಾಡುತ್ತಿದ್ದರು. ನಾವು ನಟನೆ ಮಾಡುತ್ತಿದ್ದೇವೆ, ಇಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ ಅಂತ ಜನರಿಗೆ ಗೊತ್ತಾಗುತ್ತಿರಲಿಲ್ಲ. ಓವರ್ ಆಲ್ 'ಯೂ ಟರ್ನ್' ಜರ್ನಿ ತುಂಬ ಚೆನ್ನಾಗಿತ್ತು.

  English summary
  Nanna Modala Cinema Series: Kannada actress Shraddha Srinath spoke about her U Turn movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X