X
ಸೂಜಿದಾರ

ಸೂಜಿದಾರ

Drama | 10 May 2019 | U/A |
Kannada

2.5 /5 Users

3 /5 Filmibeat

ಸೂಜಿದಾರ ಕಥೆ

ಹರಿಪ್ರಿಯಾ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ಸೂಜಿದಾರ ಚಿತ್ರವನ್ನು ಮೌನೇಶ್ ಬಡಿಗೇರ್ ನಿರ್ದೇಶನ ಮಾಡಿದ್ದಾರೆ. ರಂಗಭೂಮಿ ಪ್ರತಿಭೆ ಯಶ್ವಂತ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಲೇಖಕ `ಇಂದ್ರಕುಮಾರ್'‌ರವರ ಸಣ್ಣಕಥೆಗಳ ಆಧಾರದ ಮೇಲೆ ಚಿತ್ರಕಥೆ ರಚಿತವಾಗಿದೆ. ಚಿತ್ರದ ಕಥೆ ಚಿತ್ರದುರ್ಗದ ಒಂದು ಕಾಲೋನಿಯಲ್ಲಿ ಸಾಗುತ್ತದೆ. ಒಬ್ಬ ತಾನು ಮಾಡದ ಆರೋಪದಲ್ಲಿ ಆರೋಪಿಯಾಗಿ ತನ್ನ ಊರಿನಿಂದ ಓಡಿ ಬಂದು ಈ ಕಾಲೋನಿಯ ಪದ್ಮಾ ಎಂಬ ಮಹಿಳೆಯ ಮನೆಯಲ್ಲಿ ಆಶ್ರಯ ಪಡೆಯುತ್ತಾನೆ. ಪದ್ಮಾಳ ಹಿನ್ನಲೆ ಏನು? ಪದ್ಮಾಳ ಹಿಂದಿನ ಬದುಕಿಗೂ ಈ ಯುವಕನಿಗೂ ಏನು ಸಂಬಂಧ?     ಇದೇ ಕಾಲೋನಿಯಲ್ಲಿ ಒಬ್ಬ ಯುವತಿ ತಾನು ಕಿರುತೆರೆ ಲೋಕದಲ್ಲಿ ಮಿನುಗಬೇಕೇಂದು ಪ್ರಯತ್ನ ಪಡುತ್ತಿದ್ದರೆ, ಮತ್ತೊಬ್ಬಳು ಒಂದು ಬೇಡದ ಬಂಧನದಲ್ಲಿ ನರಳುತ್ತಿರುತ್ತಾಳೆ. ಇವರೆಲ್ಲರ ಬದುಕು ಹೇಗೆ ಪರಸ್ಪರ ಹೆಣೆದುಕೊಂಡಿದೆ ಎಂಬುದನ್ನು ಚಿತ್ರ ತೋರಿಸುತ್ತದೆ. ಚಿತ್ರದ ಹಿನ್ನಲೆಯಾಗಿ ಆಗಾಗ ಕೆಲವು ರಾಮಾಯಣ ನಾಟಕ ದೃಶ್ಯಗಳು ಕಾಣಿಸಿಕೊಳ್ಳುತ್ತವೆ.   ಅಭಿಜಿತ್ ಕೋಟೆಗಾರ್ ಮತ್ತು ಸಚ್ಚೀಂದ್ರನಾಥ್ ನಾಯಕ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. `ಮೈಮನ ಪೋಣಿಸೋ ಸೂಜಿದಾರ' ಎಂಬ ಅಡಿಬರಹದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಕಾಲವೆಂಬ ಕೊನೆಯಿಲ್ಲದ ದಾರ ನಮ್ಮನೆಲ್ಲ ನೇಯುತ್ತಿದೆ ಎಂಬ ಸಂದೇಶ ಹೊತ್ತು ಚಿತ್ರ ಬರುತ್ತಿದೆ.  
Read More

ಸೂಜಿದಾರ ಕಲಾವಿದರು ಮತ್ತು ಸಿಬ್ಬಂದಿ

ಸೂಜಿದಾರ ಕ್ರೂ ಮಾಹಿತಿ

ನಿರ್ದೇಶಕ ಮೌನೇಶ್ ಬಡಿಗೇರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಸೂಜಿದಾರ ವಿಮರ್ಶಕರ ವಿಮರ್ಶೆ

kannada.filmibeat.com
ಜೀವನ ಎಂಬ ನಾಟಕದಲ್ಲಿ ನಾವು ಕೆಲವೊಮ್ಮೆ ನಮ್ಮ ಪಾತ್ರದ ಬದಲಿಗೆ ಬೇರೆ ಪಾತ್ರವನ್ನೇ ಮಾಡುವ ಪರಿಸ್ಥಿತಿ ಬರುತ್ತದೆ. 'ಸೂಜಿದಾರ' ಸಿನಿಮಾ ಕೂಡ ಅಂತಹ ಪರಿಸ್ಥಿತಿಯಲ್ಲಿ ಇರುವ ಎರಡು ಪಾತ್ರಗಳ ಕಥೆಯಾಗಿದೆ. ಸಿನಿಮಾಗೆ ಆಯ್ಕೆ ಮಾಡಿರುವ ವಿಷಯ ಚೆನ್ನಾಗಿದೆ. ಅದನ್ನು ಮನರಂಜನೆಯ ಜೊತೆಗೆ ಚೆನ್ನಾಗಿ ಹೇಳಿದ್ದಾರೆ. ಕೆಲವು ಸಣ್ಣ ಪುಟ್ಟ ಕೊರತೆಗಳ ನಡುವೆಯೂ, ಇದೊಂದು ಒಳ್ಳೆಯ ಸಿನಿಮಾವಾಗಿ ನಿಲುತ್ತದೆ. ವಿಭಿನ್ನ ರೀತಿಯ ಚಿತ್ರಗಳನ್ನು ಹಾಗೂ ಕ್ಲಾಸ್ ಸಿನಿಮಾ ಇಷ್ಟ ಪಡುವವರು ಆರಾಮಾಗಿ ಚಿತ್ರವನ್ನು ನೋಡಬಹುದಾಗಿದೆ.

ಸೂಜಿದಾರ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಸೂಜಿದಾರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+