For Quick Alerts
  ALLOW NOTIFICATIONS  
  For Daily Alerts

  ವಿಪರೀತ ಸೆಳೆದ 'ಸಾಹೇಬ' ನ ಹಾಡುಗಳನ್ನು ಕೇಳಿದ್ರ?

  By Suneel
  |

  'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ ಶ್ರೀವಾತ್ಸವ್ ಮತ್ತು ಮನೋರಂಜನ್ ರವಿಚಂದ್ರನ್ ಅವರ ಚೊಚ್ಚಲ ಸಿನಿಮಾ 'ಸಾಹೇಬ' ದ ಆಡಿಯೋ ಸಾಂಗ್ ಗಳು ಬಿಡುಗಡೆ ಆಗಿವೆ.[ಅಪ್ಪನ ಎವರ್ ಗ್ರೀನ್ ಹಾಡಿಗೆ 'ಮನೋರಂಜನ್' ಮಸ್ತ್ ಡ್ಯಾನ್ಸ್ !]

  'ಸಾಹೇಬ' ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು, ಚಿತ್ರದಲ್ಲಿ ಒಟ್ಟಾರೆ ಐದು ಹಾಡುಗಳಿವೆ. ವಿಶೇಷ ಅಂದ್ರೆ ಮರಿ ಕ್ರೇಜಿಸ್ಟಾರ್ ಮನೋರಂಜನ್ ಅಭಿನಯದ 'ಸಾಹೇಬ' ದಲ್ಲಿ 'ನಾನು ನನ್ನ ಹೆಂಡ್ತಿ' ಚಿತ್ರದ 'ಯಾರೇ ನೀನು ರೋಜಾ ಹೂವೆ... ಯಾರೇ ನೀನು ಮಲ್ಲಿಗೆ ಹೂವೆ' ಹಾಡನ್ನು ಅಳವಡಿಸಲಾಗಿದೆ. ನಾದ ಬ್ರಹ್ಮ ಹಂಸಲೇಖ ಅವರ ಸಾಹಿತ್ಯ ಇರುವ ಈ ಹಾಡಿಗೆ ಶಂಕರ್ ಗಣೇಶ್ ಮರು ಸಂಗೀತ ಸಂಯೋಜನೆ ಮಾಡಿದ್ದು, ಎಸ್.ಪಿ ಬಾಲಸುಬ್ರಹ್ಮಣ್ಯ ಮತ್ತು ರಂಜಿತ್ ಅವರ ಧ್ವನಿಯಲ್ಲಿ ಈ ಹಾಡನ್ನು ಕೇಳಬಹುದು.

  ಜಯಂತ್ ಕಾಯ್ಕಿಣಿ ಅವರು ಬರೆದಿರುವ 'ಹೀಗೇತಕೆ ನೀ ಸೆಳೆಯುವೆ ವಿಪರೀತ.. ಈಗಾದರೆ ಈ ಹೃದಯವು ಉಳಿದೀತ' ಲಿರಿಕ್ ಸಾಂಗ್ ಪ್ರೀತಿಯ ಬಗ್ಗೆ ಇರುವ ರೊಮ್ಯಾಂಟಿಕ್ ಮತ್ತು ಎಮೋಶನಲ್ ಹಾಡಾಗಿದ್ದು, ಈಗಾಗಲೇ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.['ವಿಐಪಿ' ಮನೋರಂಜನ್ ಜೊತೆ 'ಈ' ಚೆಲುವೆ ಡ್ಯುಯೆಟ್ ಹಾಡ್ತಾರಾ.?]

  ನಟ ಮನೋರಂಜನ್ ಅವರ 'ಸಾಹೇಬ' ಸಿನಿಮಾ ವನ್ನು ಜಯಣ್ಣ ಅವರು ನಿರ್ಮಾಣ ಮಾಡಿದ್ದು, ಭರತ್ ಅವರು ಆಕ್ಷನ್ ಕಟ್ ಹೇಳಿದ್ದಾರೆ.[ಡಾ.ರಾಜ್ ನಂತರ, ಮುಂದಿನ 'ಚೆಂಗುಮಣಿ' ಆಗ್ತಾರಾ ಮನೋರಂಜನ್.?]

  English summary
  Manoranjan Ravichandran Starrer 'Saheba' Movie Audio Song Released Today (January 27). Music Director V Harikrishna Compose The Songs Of 'Saheba'.
  Thursday, May 11, 2017, 8:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X