»   » ಕನ್ನಡ ನಟರ ಕಿತ್ತಾಟ, ಕಚ್ಚಾಟದ ಬಗ್ಗೆ ಶ್ರೀನಗರ ಕಿಟ್ಟಿ ಏನಂದ್ರು?

ಕನ್ನಡ ನಟರ ಕಿತ್ತಾಟ, ಕಚ್ಚಾಟದ ಬಗ್ಗೆ ಶ್ರೀನಗರ ಕಿಟ್ಟಿ ಏನಂದ್ರು?

Posted By:
Subscribe to Filmibeat Kannada

ಕನ್ನಡ ಇಂಡಸ್ಟ್ರಿಯಲ್ಲಿ ಸ್ಟಾರ್ ಗಿರಿ, ನಂಬರ್ 1 ಪಟ್ಟ, ಬಾಕ್ಸ್ ಆಫೀಸ್ ಕಿಂಗ್......ಹೀಗೆ ನಟರ ಮಧ್ಯೆ ಕಾಂಪಿಟೇಶನ್ ಇದೆ ಎನ್ನುವುದು ಜಗತ್ ಜಾಹಿರ. ಆದ್ರೆ, ಈ ಪೈಪೋಟಿ ಇತ್ತೀಚೆಗೆ ಹೆಚ್ಚಾಗುತ್ತಿದೆ ಎನ್ನಿಸುತ್ತಿದೆ.

ಆ ನಟನ ಕಂಡ್ರೆ ಇವರಿಗೆ ಆಗಲ್ಲ, ಈ ನಟನ ಕಂಡ್ರೆ ಅವರಿಗೆ ಆಗಲ್ಲ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಆಗಾಗ ಕೇಳಿ ಬರುತ್ತಿರುತ್ತೆ. ಇನ್ನು ಇತ್ತೀಚೆಗೆ ನಡೆದ ವಿದ್ಯಮಾನಗಳನ್ನ ಗಮನಿಸಿದ್ರೆ, ಸ್ಟಾರ್ ನಟರು ಎನಿಸಿಕೊಂಡಿರುವವರೇ ಬಹಿರಂಗವಾಗಿ ಮುನಿಸಿಕೊಂಡು ಜಗಳವಾಡಿಕೊಂಡಿದ್ದರು. ಇನ್ನು ದೊಡ್ಡ ನಟನ ವಿರುದ್ಧ ಮತ್ತೊಬ್ಬ ನಟ ಗ್ರೂಪಿಸಂಗೆ ಕಾರಣ ಎಂಬ ಆಪಾದನೆ ವರಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ನಟ ಶ್ರೀನಗರ ಕಿಟ್ಟಿ ಮಾತನಾಡಿದ್ದಾರೆ. ನಟರ ಸಮರದ ಬಗ್ಗೆ ಮತ್ತು ಚಿತ್ರರಂಗದ ಪರಿಸ್ಥಿತಿ ಬಗ್ಗೆ ಕಿಟ್ಟಿ ಏನು ಹೇಳಿದ್ರು ಅಂತಾ ಮುಂದೆ ಓದಿ.....

ನಿರ್ಮಾಪಕರ ಬಗ್ಗೆ ಕಾಳಜಿ ವಹಿಸಿ

''ಹೇಳಿಕೆಗಳನ್ನ ಕೊಡುವುದನ್ನ ಬಿಟ್ಟು ಸುಮ್ಮನೆ ಸಿನಿಮಾ ಮಾಡಿದ್ರೆ ಉತ್ತಮ. ಜನರು ನೋಡುವಂತಹ ಸಿನಿಮಾ ಮಾಡಿ. ಜನರ ಮನಸ್ಸಿಗೆ ಹತ್ತಿರವಾಗಿ, ನಿರ್ಮಾಪಕರ ಜೇಬು ತುಂಬಿಸಿ ಸಾಕು'' - ಶ್ರೀನಗರ ಕಿಟ್ಟಿ, ನಟ

ಇದರಿಂದ ದೂರಿವಿದ್ರೆ ಒಳ್ಳೆಯದು

''ಅವರವರ ಬೇಳೆಯನ್ನ ಬೇಯಿಸಿಕೊಳ್ಳಲು ಈ ರೀತಿಯಾದ ಆಟಗಳನ್ನ ಆಡ್ತಾರೆ. ಅದರ ಬಗ್ಗೆ ಮಾತನಾಡುವುದು ಬೇಡ. ಇದರಿಂದ ದೂರುವಿದ್ರೆ ನಮಗೆ ಒಳ್ಳೆದು ಆಗುತ್ತೆ'' - ಶ್ರೀನಗರ ಕಿಟ್ಟಿ, ನಟ

ಪ್ರಾಬಲ್ಯಕ್ಕಿಂತ ಸಿನಿಮಾ ಮುಖ್ಯ!

''ಪ್ರಾಬಲ್ಯಕ್ಕಿಂತ, ಸಿನಿಮಾ ಯಾರು ನೋಡ್ತಿದ್ದಾರೆ, ನಿರ್ಮಾಪಕರು ಎಲ್ಲಿ ಸೇಫ್ ಆಗ್ತಿದ್ದಾರೆ ಎನ್ನುವುದು ಮಾತ್ರ ಮುಖ್ಯವಾಗುತ್ತೆ. ನಮ್ಮ ನಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಮಾತನಾಡಿದ್ರೆ, ನಿರ್ಮಾಪಕರು ನಷ್ಟ ಅನುಭವಿಸುತ್ತಾರೆ. ಇಂಡಸ್ಟ್ರಿ ಹಾಳಾಗುತ್ತೆ'' - ಶ್ರೀನಗರ ಕಿಟ್ಟಿ, ನಟ

ಸಿಲಿಕಾನ್ ಸಿಟಿ ಬಿಡುಗಡೆ

ಶ್ರೀನಗರ ಕಿಟ್ಟಿ ಅವರು 'ಸಿಲಿಕಾನ್ ಸಿಟಿ' ಚಿತ್ರದ ಬಿಡುಗಡೆಯ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದಾರೆ. ಮುಂದಿನ ವಾರ (ಜೂನ್ 16) ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರಕ್ಕೆ ಮುರಳಿ ಗುರಪ್ಪ ನಿರ್ದೇಶನವಿದ್ದು, ಅನೂಪ್ ಸೀಳಿನ್ ಸಂಗೀತವಿದೆ. ಶ್ರೀನಗರ ಕಿಟ್ಟಿ ಜೊತೆ ನಟಿ ಕಾವ್ಯ ಶೆಟ್ಟಿ, ನಟ ಸೂರಜ್ ಗೌಡ, ಚಿಕ್ಕಣ್ಣ ಸೇರಿದಂತೆ ಹಲವರ ತಾರಾಬಳಗ ಚಿತ್ರದಲ್ಲಿದೆ.

English summary
Kannada Actor Srinagara Kitty Speaks About Controversies in Sandalwood

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada