»   » ಮೇಘನಾ ರಾಜ್ 'ಡೈಲಾಗ್' ವಿರುದ್ಧ ಸಿಡಿದೆದ್ದ ನಿಷ್ಠಾವಂತ ಗಂಡೈಕ್ಳು.!

ಮೇಘನಾ ರಾಜ್ 'ಡೈಲಾಗ್' ವಿರುದ್ಧ ಸಿಡಿದೆದ್ದ ನಿಷ್ಠಾವಂತ ಗಂಡೈಕ್ಳು.!

Posted By:
Subscribe to Filmibeat Kannada

ಸಾಮಾನ್ಯವಾಗಿ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರು ಬಾಯಲ್ಲಿ ಬರುವ ಡೈಲಾಗ್ ಗಳು ವಿವಾದಕ್ಕೆ ಸಿಲುಕುತ್ತವೆ. ಹವಾ, ಗಾಳಿ, ಧಮ್ಮು........! ಹೀಗೆ, ಒಬ್ಬ ನಟ ಹೇಳುವ ಡೈಲಾಗ್, ಮತ್ತೊಬ್ಬ ನಟನ ಅಭಿಮಾನಿಗಳನ್ನ ಕೆರಳಿಸುತ್ತೆ. ಅದ್ರಿಂದ, ಸ್ಟಾರ್ ವಾರ್, ಫ್ಯಾನ್ಸ್ ವಾರ್ ಎನ್ನುವುದು ಜೋರಾಗುತ್ತೆ.

ಆದ್ರೀಗ, ನಟಿ ಮೇಘನಾ ರಾಜ್ ಬಾಯಲ್ಲಿ ಬಂದ ಡೈಲಾಗೊಂದು ವಿವಾದಕ್ಕೆ ಸಿಲುಕಿದೆ. ಟ್ರೈಲರ್ ನಲ್ಲಿ ಮೇಘನಾ ಅವರು ಹೇಳಿರುವ ಈ ಡೈಲಾಗ್ ನಿಷ್ಠಾವಂತ ಗಂಡಸರಿಗೆ ನೋವುಂಟು ಮಾಡಿದೆ. ಇದ್ರಿಂದ ಸಿಡಿದೆದ್ದ ಗಂಡೈಕ್ಳು ಮೇಘನಾ ರಾಜ್ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ.[ಮೇಘನಾ ರಾಜ್ ಅಭಿನಯದ 2 ಚಿತ್ರಗಳು ಒಂದೇ ದಿನ ರಿಲೀಸ್.!]

ಅಷ್ಟಕ್ಕೂ, ಮೇಘನಾ ಹೇಳಿರುವ ಆ ಡೈಲಾಗ್ ಏನು? ಯಾವ ಚಿತ್ರದ ಡೈಲಾಗ್ ಇದು ಎಂಬುದನ್ನ ಮುಂದೆ ಓದಿ......

'ಜಿಂದಾ' ಚಿತ್ರದ ಡೈಲಾಗ್

ಮುಸ್ಸಂಜೆ ಮಹೇಶ್ ನಿರ್ದೇಶನ ಮಾಡಿರುವ 'ಜಿಂದಾ' ಚಿತ್ರದಲ್ಲಿ ನಟಿ ಮೇಘನಾ ರಾಜ್ ಅವರು ಗಂಡಸರಿಗೆ ಅವಮಾನವಾಗುವಂತಹ ಡೈಲಾಗ್ ಹೇಳಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಇದೇ ನೋಡಿ ಆ ಡೈಲಾಗ್!

''ಈ ಗಂಡು ಎನ್ನುವ ಒಬ್ಬ ಕಚಡಾ ನನ್ ಮಗನೂ ಪ್ರೀತಿ ಮಾಡುವಾಗ ಸತ್ಯ ಹೇಳಲ್ಲ ಅಲ್ವಾ....! ಯಾಕೆ ಫ್ರೀ ಆಗಿ ಎಲ್ಲ ಮುಗಿಸಿಕೊಳ್ಳಬಹುದು ಅಂತನಾ''[ರಿಯಲ್ ಗ್ಯಾಂಗ್ ಸತ್ಯ ಕಥೆಯ 'ಜಿಂದಾ' ಟ್ರೈಲರ್ ಹೇಗಿದೆ ನೋಡಿ..]

ಮೇಘನಾ ಮನೆ ಮುಂದೆ ಪ್ರತಿಭಟನೆ

ಮೇಘನಾ ರಾಜ್ ಅವರ ಈ ಡೈಲಾಗ್ ಯುವಕರಿಗೆ ಅವಮಾನ ಮಾಡಿದಂತಿದೆ. ಈ ಪದ ಬಳಕೆಗೆ ಕ್ಷಮೆ ಕೇಳಬೇಕೆಂದು 'ಜನ್ಮಭೂಮಿ ರಕ್ಷಣಾ ಪಡೆ' ಸೇರಿದಂತೆ ಹಲವು ಯುವಕರು ಮೇಘನಾ ರಾಜ್ ಮನೆ ಮುಂದೆ ಪ್ರತಿಭಟನೆ ಮಾಡಿದ್ದಾರೆ.

ಮೇಘನಾ ರಾಜ್ ಏನು ಹೇಳಿದರು

ಈ ಬಗ್ಗೆ ಮಾತನಾಡಿದ ಮೇಘನಾರಾಜ್ ''ಸಿನಿಮಾ ನೋಡಿದ ನಂತರ ಮಾತಾಡಿ, ನಾನು ಎಲ್ಲಾ ಹುಡುಗರು, ಗಂಡಸರನ್ನು ಕುರಿತು ಆ ರೀತಿ ಸಂಭಾಷಣೆ ಹೇಳಿಲ್ಲ, 'ಜಿಂದಾ' ಒಂದು ನೈಜ ಘಟನೆ ಆಧಾರಿತ ಸಿನಿಮಾ, ಪಾತ್ರಧಾರಿಯಾಗಿ ನಾನು ಆ ಡೈಲಾಗ್‌ ಹೇಳಿದ್ದೇನೆಯೇ ಹೊರತು ಮೇಘನಾರಾಜ್ ಆಗಿ ಅಲ್ಲ, ಸಿನಿಮಾ ಕಥೆ ಕೇಳಿದಾಗ ಇದು ಈ ಮಟ್ಟಿಗೆ ಹೋಗಲಿದೆ ಅಂತಾ ಅಂದುಕೊಂಡಿರಲಿಲ್ಲಾ'' ಎಂದು ಪ್ರತಿಕ್ರಿಯಿಸಿದ್ದಾರೆ.['ಚಿರಂಜೀವಿ ಸರ್ಜಾ-ಮೇಘನಾ ರಾಜ್' ಲವ್ ಸ್ಟೋರಿ ನಿಜವೋ.? ಸುಳ್ಳೋ.?]

ಜೂನ್ 9 ಕ್ಕೆ 'ಜಿಂದಾ' ತೆರೆಗೆ

ಈ ವಾರ 'ಜಿಂದಾ' ಸಿನಿಮಾ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಈ ಸಂದರ್ಭದಲ್ಲಿ ಈ ವಿವಾದ ಹುಟ್ಟಿಕೊಂಡಿರುವುದು ನಿಜಕ್ಕೂ ಬೇಸರ. ಅಂದ್ಹಾಗೆ, ಮೇಘನಾ ರಾಜ್, ಅರುಣ್, ಲೋಕಿ, ಕೃಷ್ಣಚಂದ್ರ ಯುವರಾಜ, ದೇವ್ ತಾಳಿಕೋಟೆ, ಅನಿರುದ್ಧ್, ಹಿರಿಯ ನಟ ದೇವರಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ಮುಸ್ಸಂಜೆ ಮಹೇಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

ಮೇಘನಾ ರಾಜ್ ಹೇಳಿರುವ ಡೈಲಾಗ್ ಕೇಳಲು ಈ ಲಿಂಕ್ ಕ್ಲಿಕ್ ಮಾಡಿ

English summary
Janma Bhoomi Rakshana Pade People Protest Against Actress Meghana For Her Controversial Dialogue In Jindaa Movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada