»   » 'ಬೆಂಗಳೂರು ಅಂಡರ್ ವರ್ಲ್ಡ್'ನಿಂದ ಆದಿತ್ಯ ಎಂಟ್ರಿ ಹೇಗಿದೆ ನೋಡಿದ್ರಾ?

'ಬೆಂಗಳೂರು ಅಂಡರ್ ವರ್ಲ್ಡ್'ನಿಂದ ಆದಿತ್ಯ ಎಂಟ್ರಿ ಹೇಗಿದೆ ನೋಡಿದ್ರಾ?

Posted By:
Subscribe to Filmibeat Kannada

ಕುಚಿಕು ಗೆಳೆಯರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು 'ಡೆಡ್ಲಿ' ಆದಿತ್ಯ ಅವರು 'ಸ್ನೇಹನಾ ಪ್ರೀತಿನಾ' ಚಿತ್ರದ ನಂತರ ಒಂದಾಗಿ 'ಚಕ್ರವರ್ತಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಆದಿತ್ಯ ಪೊಲೀಸ್ ಆಗಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಈ ಚಿತ್ರ ಇನ್ನೂ ಬಿಡುಗಡೆಗೆ ಸಜ್ಜಾಗುತ್ತಿರುವ ಸಮಯದಲ್ಲೇ ಆದಿತ್ಯ ಮುಖ್ಯ ಭೂಮಿಕೆಯ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.[ದರ್ಶನ್ 'ಚಕ್ರವರ್ತಿ'ಯಲ್ಲಿ 'ಡೆಡ್ಲಿ' ಆದಿತ್ಯ ಪಾತ್ರ ಏನು.?]

'ಡೆಡ್ಲಿ ಸೋಮ' ಚಿತ್ರದಲ್ಲಿ ರೌಡಿ ಪಾತ್ರದಲ್ಲಿ ಅಭಿನಯಿಸಿದ್ದ ಆದಿತ್ಯ, ಈಗ ಮತ್ತೊಮ್ಮೆ ಖಡಕ್ ರೌಡಿ ರೋಲ್ ನಲ್ಲಿ ನಟಿಸಿರುವ 'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರದ ಟ್ರೈಲರ್ ನಿನ್ನೆ(ಫೆ.27) ಬಿಡುಗಡೆ ಆಗಿದೆ.


Aditya Starrer 'Bengaluru Underworld' movie Official Trailer

1.33 ನಿಮಿಷ ಇರುವ 'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರದ ಟ್ರೈಲರ್ ನಲ್ಲಿ ಆದಿತ್ಯ ಮಾತಿಗಿಂತ ಹೆಚ್ಚಾಗಿ ಮಾಂಜ ಕೊಡುವುದರಲ್ಲೇ ಬಿಜಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ 'ರೌಡಿಸಂಲ್ಲಿ... ಒಳ್ಳೆತನದಿಂದ ಕ್ಷಮಿಸಿಬಿಡೋದು ಮಹಾಪಾಪ', 'ರೌಡಿಸಂ ನ ಇತಿಹಾಸ ಬರೆಯೋದೇ ರಕ್ತದಲ್ಲಿ ಆದ್ರೆ ಆ ರಕ್ತ ಎಷ್ಟು ಬಿಸಿ ಇದೆ ಅನ್ನೋದೆ ಮುಖ್ಯ' ಎಂಬ ಡೈಲಾಗ್ ಗಳು ಸಖತ್ ಸದ್ದು ಮಾಡಿವೆ. ಹೆಸರೇ ಹೇಳುವಂತೆ ಬೆಂಗಳೂರಿನ ಅಂಡರ್ ವರ್ಲ್ ಬಗ್ಗೆ ಕುರಿತ ಸಿನಿಮಾ ಇದಾಗಿದ್ದು, ಮಾಲಿಕ್ ಎಂಬ ವ್ಯಕ್ತಿ ಇಬ್ಬರು ನಟೋರಿಯಸ್ ಡಾನ್‌ ಗಳ ಕೈಕೆಳಗೆ ಕೆಲಸ ಮಾಡಿ ಜೀವನ ಮಾಡುತ್ತಿದ್ದ ಬಗ್ಗೆ ಚಿತ್ರಕಥೆ ಹೊಂದಿದೆ.['ಬೆಂಗಳೂರು ಅಂಡರ್ ವರ್ಲ್ಡ್'ಗೆ ಕಾಲಿಟ್ಟ ಮಿಸ್ ಮೈಸೂರು ಯಾರಿವಳು?]


ಪಿ.ಎನ್ ಸತ್ಯ ಅವರು ಆಕ್ಷನ್ ಕಟ್ ಹೇಳಿರುವ 'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರದಲ್ಲಿ ಆದಿತ್ಯ ಗೆ ಪಾಯಲ್ ರಾಧಾಕೃಷ್ಣ ಅವರು ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಜಿ ಆನಂದ್ ಬಂಡವಾಳ ಹೂಡಿದ್ದು, ಜೆ ಅನೂಪ್ ಸೀಳೀನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಚಿತ್ರತಂಡ ಈಗಾಗಲೇ ಡೆಡ್ಲಿ ಸೋಮ ಮತ್ತು ಪಾಯಲ್ ರಾಧಾಕೃಷ್ಣ ಅವರ ರೊಮ್ಯಾಂಟಿಕ್ ಹಾಡೊಂದನ್ನು ಬಿಡುಗಡೆ ಮಾಡಿದೆ.['ಡೆಡ್ಲಿ' ಆದಿತ್ಯರ 'ಬೆಂಗಳೂರು ಅಂಡರ್ ವರ್ಲ್ಡ್'ಗೆ ದರ್ಶನ್ ಸಾಥ್]


'ಬೆಂಗಳೂರು ಅಂಡರ್ ವರ್ಲ್ಡ್' ಸಿನಿಮಾ ಮಾರ್ಚ್ 10 ರಂದು ಕರ್ನಾಟಕದಾದ್ಯಂತ ಭರ್ಜರಿಯಾಗಿ ತೆರೆಕಾಣಲಿದೆ. 'ಬೆಂಗಳೂರು ಅಂಡರ್ ವರ್ಲ್ಡ್' ಚಿತ್ರದ ಟ್ರೈಲರ್ ನೋಡಲು.. ಕ್ಲಿಕ್ ಮಾಡಿ

English summary
Kannada Actor Aditya Starrer 'Bengaluru Underworld' movie Official Trailer released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada