»   » ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಹ್ಯಾಟ್ರಿಕ್ ಸಿನಿಮಾ ಸುದ್ದಿ..!

ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಹ್ಯಾಟ್ರಿಕ್ ಸಿನಿಮಾ ಸುದ್ದಿ..!

Posted By:
Subscribe to Filmibeat Kannada

ಸಂತೋಷ್ ಆನಂದ್ ರಾಮ್ ಈಗ ಕನ್ನಡದ ಸ್ಟಾರ್ ಡೈರೆಕ್ಟರ್ ಆಗಿದ್ದಾರೆ. ಅವರ ನಿರ್ದೇಶನದ 'ರಾಜಕುಮಾರ' ಸಿನಿಮಾ ಈಗ 75 ದಿನ ಪೂರೈಸಿ ಹಣ ಗಳಿಕೆಯಲ್ಲಿ ದೊಡ್ಡ ದಾಖಲೆ ಮಾಡುತ್ತಿದೆ.

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು 'ರಾಜಕುಮಾರ' ಸಿನಿಮಾ ಮಾಡಿದ್ದ ಸಂತೋಷ್ ಆನಂದ್ ರಾಮ್ ಮುಂದೆ ಯಾವ ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ಇದೀಗ ಸಂತೋಷ್ ಆನಂದ್ ರಾಮ್ ನಿರ್ದೇಶನದ ಮುಂದಿನ ಸಿನಿಮಾದ ಸುದ್ದಿಯೊಂದು ಬಂದಿದೆ. ಮುಂದೆ ಓದಿ....['ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್ ಗೆಲುವಿಗೆ 'ರಿಯಲ್' ಕಾರಣ ಇವರೇ.!]

ಸಂತೋಷ್ ಆನಂದ್ ರಾಮ್ ಪ್ರಶ್ನೆ

ನಿರ್ದೇಶಕ ಸಂತೋಷ್ ಆನಂದ್ ರಾಮ್ ಇತ್ತೀಚಿಗಷ್ಟೆ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ 'what next..?' ಅಂತ ಒಂದು ಪೋಸ್ಟ್ ಹಾಕಿ ಅಭಿಮಾನಿಗಳಿಗೆ ಪ್ರಶ್ನೆ ಕೇಳಿದ್ದರು.

ಅಭಿಮಾನಿಗಳ ಉತ್ತರ

ಸಂತೋಷ್ ಆನಂದ್ ರಾಮ್ ಅವರ ಪ್ರಶ್ನೆಗೆ ನೂರಾರು ಅಭಿಮಾನಿಗಳು ಉತ್ತರಿಸಿದ್ದು, ತಮ್ಮ ಆಸೆಯನ್ನು ಹೇಳಿಕೊಂಡಿದ್ದಾರೆ.[ಎಲ್ಲ ಅಂತೆ-ಕಂತೆಗಳ ಮೂಟೆಗೆ ಗಂಟು ಕಟ್ಟಿದ 'ರಾಜಕುಮಾರ' ನಿರ್ದೇಶಕ.!]

'ಶಿವಣ್ಣ'ನಿಗೆ ನಿರ್ದೇಶನ ಮಾಡಿ

ಸಾಕಷ್ಟು ಅಭಿಮಾನಿಗಳು ನಟ ಶಿವಣ್ಣ ಜೊತೆ ಸಿನಿಮಾ ಮಾಡಿ ಅಂತ ಹೇಳಿದ್ದಾರೆ. ಅಲ್ಲದೆ ಸಂತೋಷ್ ಶಿವಣ್ಣನಿಗೆ 'ರಣರಂಗ' ಎನ್ನುವ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಕೂಡ ಇದೆ.

ಶಂಕರ್ ನಾಗ್ ಬಗ್ಗೆ

ತಮ್ಮ ಮೊದಲ ಸಿನಿಮಾದಲ್ಲಿ ವಿಷ್ಣುವರ್ಧನ್, ಎರಡನೇ ಸಿನಿಮಾದಲ್ಲಿ ರಾಜ್ ಕುಮಾರ್ ಅವರ ಗುಣಗಾನ ಮಾಡಿದ್ದ ಸಂತೋಷ್ ಈ ಬಾರಿ ಕರಾಟೆ ಕಿಂಗ್ ಶಂಕರ್ ನಾಗ್ ಅವರ ಬಗ್ಗೆ ಸಿನಿಮಾ ಮಾಡಲಿ ಅಂತಿದ್ದಾರೆ ಅಭಿಮಾನಿಗಳು.

ದರ್ಶನ್ ಗೆ ಒಂದು ಸಿನಿಮಾ

ನಟ ದರ್ಶನ್ ಅಭಿಮಾನಿಗಳು 'ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಒಂದು ಮಾಸ್ ಸಿನಿಮಾ ಮಾಡಿ ನಿರ್ದೇಶಕರೇ' ಎಂದು ಕೇಳಿಕೊಂಡಿದ್ದಾರೆ.

ಗಣೇಶ್ ಜೊತೆ

ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳು ಗಣೇಶ್ ಜೊತೆ ಒಂದು ಡಿಫರೆಂಟ್ ಜಾನರ್ ಸಿನಿಮಾ ಪ್ರಯತ್ನ ಮಾಡಿ ಅಂತ ಕೋರಿದ್ದಾರೆ.

ಸ್ವಮೇಕ್ ಸಿನಿಮಾ ಇರಲಿ

ಇನ್ನೂ ಕೆಲವು ಅಭಿಮಾನಿಗಳು ನೀವು ಯಾವ ಸ್ಟಾರ್ ಜೊತೆ ಆದರೂ ಸಿನಿಮಾ ಮಾಡಿ ಪರವಾಗಿಲ್ಲ. ಆದರೆ, ಇದೇ ರೀತಿ ಸ್ವಮೇಕ್ ಸಿನಿಮಾ ಮಾಡಿ ಎಂದಿದ್ದಾರೆ.

ಹಿರೋಯಿನ್ ಓರಿಯೆಂಟೆಡ್ ಚಿತ್ರ

ಕೆಲ ಪ್ರೇಕ್ಷಕರು ಸಂತೋಷ್ ಅವರಿಂದ ಹೀರೋಯಿನ್ ಓರಿಯೆಂಟೆಡ್ ಸಿನಿಮಾವನ್ನು ಬಯಸಿದ್ದಾರೆ.

ಹ್ಯಾಟ್ರಿಕ್ ಚಿತ್ರ ಯಾವುದು?

ಎರಡು ಸೂಪರ್ ಹಿಟ್ ಸಿನಿಮಾ ಮಾಡಿದ್ದ ಸಂತೋಷ್ ಆನಂದ್ ರಾಮ್ ಹ್ಯಾಟ್ರಿಕ್ ಸಿನಿಮಾ ಯಾವುದು ಎಂಬ ಬಗ್ಗೆ ಅವರು ಎಲ್ಲಿಯೂ ಬಾಯಿ ಬಿಟ್ಟಿಲ್ಲ. ಆದರೆ ಸಂತೋಷ್ 'ರಣರಂಗ' ಎಂಬ ಸಿನಿಮಾದ ಮೂಲಕ ಶಿವಣ್ಣನಿಗೆ ಈ ಬಾರಿ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಮಾತ್ರ ಹರಿದಾಡುತ್ತಿದೆ.

English summary
Kannada Director 'Santhosh Ananddram' has taken his Facebook account to speak about his next movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada