»   »  ಬೆಳಗಾವಿ ಚಿತ್ರಮಂದಿರಗಳಲ್ಲಿ ಕನ್ನಡ ಕಂಪು

ಬೆಳಗಾವಿ ಚಿತ್ರಮಂದಿರಗಳಲ್ಲಿ ಕನ್ನಡ ಕಂಪು

Posted By:
Subscribe to Filmibeat Kannada

ಬೆಳಗಾವಿ,ಜ:16: ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿ ನಗರದ ವಿವಿಧ ಚಿತ್ರ ಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳನ್ನು ಮಾತ್ರ ಪ್ರದರ್ಶನ ಮಾಡಲಾಗುತ್ತಿದೆ. ಬೆಳಗಾವಿ ಚಲನಚಿತ್ರ ಪ್ರದರ್ಶಕರ ಸಂಘದಿಂದ ಈ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದು, ಚಿತ್ರಮಂದಿರ ಹಾಗೂ ಚಿತ್ರದ ಹೆಸರು ಈ ಕೆಳಗಿನಂತಿದೆ.

ಜನವರಿ 17,18 ಹಾಗೂ 25 ರಂದು (ಬೆಳಗಿನ ಪ್ರದರ್ಶನ) 9:30 ಗಂಟೆಗೆ ಪ್ರಾರಂಭ
*ಸ್ವರೂಪ ಚಿತ್ರಮಂದಿರದಲ್ಲಿ 'ಸಿದ್ದು 'ಚಲನಚಿತ್ರ,
* ಹೀರಾ ಚಿತ್ರಮಂದಿರದಲ್ಲಿ 'ತಾಯಿ '
* ಬಾಲಕೃಷ್ಣ ಚಿತ್ರಮಂದಿರದಲ್ಲಿ 'ಒಂದಾಗೋಣ ಬಾ'
* ಅರುಣ ಚಿತ್ರಮಂದಿರದಲ್ಲಿ 'ವರ್ಷ' ,
* ಗ್ಲೋಬ್ ಚಿತ್ರಮಂದಿರದಲ್ಲಿ 'ಕಾಡಿನ ಬೆಂಕಿ'
* ನರ್ತಕಿ ಚಿತ್ರಮಂದಿರದಲ್ಲಿ 'ನಮ್ಮ ಬಸವ' ಚಲನಚಿತ್ರಗಳು ಪ್ರದರ್ಶನವಾಗಲಿವೆ.

ಅದರಂತೆ ದಿನದ ನಾಲ್ಕು ಆಟ (ಮಧ್ಯಾಹ್ನ 12, 3, ಸಂಜೆ 6 ಹಾಗೂ ರಾತ್ರಿ 9 ಗಂಟೆಗೆ)
* ಪ್ರಕಾಶ ಚಿತ್ರಮಂದಿರದಲ್ಲಿ ಶಿವಮಣಿ ,
* ರೂಪಾಲಿ ಚಿತ್ರಮಂದಿರದಲ್ಲಿ ಚಿಕ್ಕಪೇಟೆ ಸಾಚಾಗಳು
* ನಿರ್ಮಲ ಚಿತ್ರಮಂದಿರದಲ್ಲಿ ಅನು
* ಸಂತೋಷ್ ಚಿತ್ರಮಂದಿರದಲ್ಲಿ ಗುಲಾಮ
* ಹಂಸ ಚಿತ್ರಮಂದಿರದಲ್ಲಿ ಚಂಡ
* ಚಿತ್ರಾ ಚಿತ್ರಮಂದಿರದಲ್ಲಿ ಸರ್ಕಸ್
* ರಿಜ್ಡ್ ಕೃಷ್ಣಾ ಚಿತ್ರಮಂದಿರದಲ್ಲಿ ಯುಗ
* ಬಿಗ್ ಸಿನೆಮಾ (ಕಪಿಲ) ಚಿತ್ರಮಂದಿರದಲ್ಲಿ ಸರ್ಕಸ್ (ಮಧ್ಯಾಹ್ನ ಆಟ ಮಾತ್ರ)

ಸಾರ್ವಜನಿಕರು ಚಲನಚಿತ್ರ ಪ್ರದರ್ಶನದ ಸಮಯ ಹಾಗೂ ದಿನಾಂಕವನ್ನು ಗಮನಿಸುವಂತೆ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷಅವಿನಾಶ ಪೋತದಾರ ಅವರು ತಿಳಿಸಿದ್ದಾರೆ.

ವಾಲ್ ಪೇಪರ್ಸ್ : ಶಿವಮಣಿ || ಸರ್ಕಸ್
ನಟ,ನಟಿಯರಗ್ಯಾಲರಿ: ಶರ್ಮಿಳಾ ಮಾಂಡ್ರೆ || ಅರ್ಚನಾ ಗುಪ್ತ || ಗಣೇಶ್ || ಪೂಜಾಗಾಂಧಿ||ಪ್ರಜ್ವಲ್
ಸಿನಿಮಾ ಗ್ಯಾಲರಿ: ಸರ್ಕಸ್||ಗುಲಾಮ


(ದಟ್ಸ್ ಕನ್ನಡ ಸಿನಿ ಮಾಹಿತಿ)
ಉ.ಕದಲ್ಲಿ ಇನ್ನೊಂದು ಅಧಿವೇಶನ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada