For Quick Alerts
  ALLOW NOTIFICATIONS  
  For Daily Alerts

  ಬ್ಲಾಕ್ ಬಸ್ಟರ್ ಹಿಟ್ ಚಿತ್ರವಾಗಿ ದರ್ಶನ್ 'ಬುಲ್ ಬುಲ್'

  By Rajendra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಬುಲ್ ಬುಲ್' ಚಿತ್ರ ಸೆಂಚುರಿ ಪೂರೈಸಿದೆ. ಬುಲ್ ಬುಲ್ ಚಿತ್ರ ಅರ್ಧ ಶತಕ ಭಾರಿಸಿದಾಗ ಪ್ರಸನ್ನ ಚಿತ್ರಮಂದಿರದಲ್ಲಿ ಸಂಭ್ರಮಾಚರಣೆ ನಡೆದಿತ್ತು. ದರ್ಶನ್ ಗೆ ಹಾರ್ಲೆ ಡೆವಿಡ್ ಸನ್ ಬೈಕನ್ನು ಉಡುಗೊರೆಯಾಗಿ ನೀಡಿದ್ದು ನೆನಪಿರಬಹುದು.

  ಈಗ ಬುಲ್ ಬುಲ್ ಚಿತ್ರ ಸೆಂಚುರಿ ಭಾರಿಸಿದ್ದು ಬ್ಲಾಕ್ ಬಸ್ಟರ್ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ಶತದಿನೋತ್ಸವ ಸಂಭ್ರಮ ಆಗಸ್ಟ್ 31ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಬುಲ್ ಬುಲ್ ಚಿತ್ರ ಸಾರಥಿ ಚಿತ್ರದ ದಾಖಲೆಯನ್ನು ಅಳಿಸಿಹಾಕಿರುವುದು ಇನ್ನೊಂದು ವಿಶೇಷ.

  ಸಾರಥಿ ಚಿತ್ರ 17 ಕೇಂದ್ರಗಳಲ್ಲಿ ಸೆಂಚುರಿ ಭಾರಿಸಿತ್ತು. ಈಗ ಬುಲ್ ಬುಲ್ ಚಿತ್ರ 19 ಕೇಂದ್ರಗಳಲ್ಲಿ ಸೆಂಚುರಿ ಭಾರಿಸಿದೆ. ಈಗ ಶತದಿನೋತ್ಸವ ಸಂಭ್ರಮವನ್ನು ಬನ್ನೇರುಘಟ್ಟ ರಸ್ತೆಯಲ್ಲಿರುವ ಕಲ್ಯಾಣ ಮಂಟಪವೊಂದರಲ್ಲಿ ನಡೆಸಲು ನಿರ್ಮಾಪಕರು ತೀರ್ಮಾನಿಸಿರುವುದಾಗಿ ಸಮಾಚಾರ. [ಬುಲ್ ಬುಲ್ ಚಿತ್ರ ವಿಮರ್ಶೆ]

  ಈ ವರ್ಷ ಅತಿಹೆಚ್ಚು ಗಳಿಸಿದ ಚಿತ್ರ ಬುಲ್ ಬುಲ್. ಇದು ತೆಲುಗಿನ ಆವರೇಜ್ ಹಿಟ್ ಸಿನಿಮಾ 'ಡಾರ್ಲಿಂಗ್' ರೀಮೇಕ್. ಕೌಟುಂಬಿಕ ಕಥಾವಸ್ತುವನ್ನು ಒಳಗೊಂಡಿರುವ ಈ ಚಿತ್ರಕ್ಕೆ ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವರ್ಷ ಅತಿಹೆಚ್ಚು ಹಣ ಗಳಿಸಿದ ಚಿತ್ರ ಎಂಬ ಖ್ಯಾತಿಗೂ ಪಾತ್ರವಾಗಿದೆ ಬುಲ್ ಬುಲ್.

  ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲೂ ಹೌಸ್ ಫುಲ್

  ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲೂ ಹೌಸ್ ಫುಲ್

  ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲೂ ಹೌಸ್ ಫುಲ್ ಪ್ರದರ್ಶನ ಕಂಡಿರುವುದು ಬುಲ್ ಬುಲ್ ಚಿತ್ರದ ಇನ್ನೊಂದು ವಿಶೇಷ.

  ಹಲವರ ನಿರ್ಮಾಣದ ಚಿತ್ರ ಬುಲ್ ಬುಲ್

  ಹಲವರ ನಿರ್ಮಾಣದ ಚಿತ್ರ ಬುಲ್ ಬುಲ್

  'ಬುಲ್ ಬುಲ್' ಚಿತ್ರವನ್ನು ವಿ.ಹರಿಕೃಷ್ಣ, ಎಂಡಿ ಶ್ರೀಧರ್, ಕೃಷ್ಣಕುಮಾರ್, ಕವಿರಾಜ್ ಹಾಗೂ ದಿನಕರ್ ತೂಗುದೀಪ ಅವರು ಸೇರಿ ನಿರ್ಮಿಸಿದ್ದರು.

  ಎಂಡಿ. ಶ್ರೀಧರ್ ಆಕ್ಷನ್ ಕಟ್ ಹೇಳಿರುವ ಚಿತ್ರ

  ಎಂಡಿ. ಶ್ರೀಧರ್ ಆಕ್ಷನ್ ಕಟ್ ಹೇಳಿರುವ ಚಿತ್ರ

  ಫ್ರೆಂಡ್ಸ್, ಪೊರ್ಕಿ, ಚೆಲ್ಲಾಟ, ಕೃಷ್ಣ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಎಂ.ಡಿ. ಶ್ರೀಧರ್ ಆಕ್ಷನ್ ಕಟ್ ನಲ್ಲಿ ಚಿತ್ರ ಮೂಡಿಬಂದಿದೆ.

  ಸುಮಾರು ರು.8 ಕೋಟಿ ಬಜೆಟ್ ಚಿತ್ರ

  ಸುಮಾರು ರು.8 ಕೋಟಿ ಬಜೆಟ್ ಚಿತ್ರ

  ಬೆಂಗಳೂರು, ಗೋವಾ ಹಾಗೂ ಮೈಸೂರಿನಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಸರಿಸುಮಾರು ರು.8 ಕೋಟಿ ಬಜೆಟ್ ನಲ್ಲಿ ಬುಲ್ ಬುಲ್ ಚಿತ್ರವನ್ನು ನಿರ್ಮಿಸಲಾಗಿದೆ.

  ಚಿತ್ರದ ಸ್ಯಾಟಲೈಟ್ ರೈಟ್ಸ್ ಗೆ ಭರ್ಜರಿ ಬೆಲೆ

  ಚಿತ್ರದ ಸ್ಯಾಟಲೈಟ್ ರೈಟ್ಸ್ ಗೆ ಭರ್ಜರಿ ಬೆಲೆ

  ಈಗಾಗಲೆ ಚಿತ್ರದ ಸ್ಯಾಟಲೈಟ್ ರೈಟ್ಸ್ ರು.4.15 ಕೋಟಿಗೆ ಮಾರಾಟವಾಗಿವೆ.

  ಚಿತ್ರದ ಪಾತ್ರವರ್ಗದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್

  ಚಿತ್ರದ ಪಾತ್ರವರ್ಗದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್

  ಚಿತ್ರದ ಪಾತ್ರವರ್ಗದಲ್ಲಿದ್ದ ರೆಬೆಲ್ ಸ್ಟಾರ್ ಅಂಬರೀಶ್, ಅಶೋಕ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ, ಸಾಧು ಕೋಕಿಲ, ವಿ ಹರಿಕೃಷ್ಣ, ಕವಿರಾಜ್ ಹಾಗೂ ಚಿತ್ರದ ನಿರ್ದೇಶಕ ಎಂ.ಡಿ.ಶ್ರೀಧರ್ ಅವರನ್ನು ಸನ್ಮಾನಿಸಲಾಯಿತು.

  English summary
  Challenging Star Darshan's Bulbul becomes blockbuster hit film. The movie has completed 100 days in 19 centres. Now the 100 days function will be held in Bangalore on 31st August.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X