»   » ಜಾಹೀರಾತು ಸ್ಪರ್ಧೆಯಲ್ಲಿ ಕಿಚ್ಚ ಸುದೀಪ್ ದಾಖಲೆ

ಜಾಹೀರಾತು ಸ್ಪರ್ಧೆಯಲ್ಲಿ ಕಿಚ್ಚ ಸುದೀಪ್ ದಾಖಲೆ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಈಗ ಮುಟ್ಟಿದೆಲ್ಲಾ ಚಿನ್ನ. ಏನ್ ಮಾಡಿದ್ರೂ ಕ್ಲಿಕ್. ಬಚ್ಚನ್ ಚಿತ್ರಕ್ಕೆ ಸದ್ಯ ಅಭೂತಪೂರ್ವ ಓಪನಿಂಗ್ ಸಿಕ್ಕಿದೆ. ಮೊನ್ನೆ (ಬುಧವಾರ, ಏ 10) ಬಚ್ಚನ್ ಚಿತ್ರದ ನಿರ್ದೇಶಕ ಶಶಾಂಕ್ ನಮ್ಮ ಜೊತೆ ಸಂದರ್ಶನ ನಡೆಸುತ್ತಿದ್ದಾಗ ಕೆಲವೊಂದು ಹೊಸ ವಿಷಯಗಳನ್ನು ಬಹಿರಂಗ ಪಡಿಸಿದ್ದರು.

ಬಚ್ಚನ್ ಚಿತ್ರದ ಆಡಿಯೋ ರೈಟ್ಸನ್ನು ವಿ ಹರಿಕೃಷ್ಣ ಒಡೆತನದ 'ಡಿ ಬೀಟ್ಸ್' ಸಂಸ್ಥೆ ಪಡೆದಿತ್ತು. ಚಿತ್ರದ ಧ್ವನಿಸುರುಳಿಗೂ ಮುನ್ನ ಆಡಿಯೋಗೆ ಇದ್ದ ಡಿಮಾಂಡ್ ನೋಡಿ ಹರಿಕೃಷ್ಣ ದಂಗಾದರಂತೆ.ಇತ್ತೀಚಿನ ಯಾವುದೇ ಚಿತ್ರಕ್ಕೂ ಇರದ ಹೈಪ್ ಈ ಚಿತ್ರದ ಆಡಿಯೋಗೆ ಇತ್ತು ಎಂದು ಹರಿಕೃಷ್ಣ ಸಂತಸಗೊಂಡ ವಿಚಾರವನ್ನು ಶಶಾಂಕ್ ನಮ್ಮ ಜೊತೆ ಹಂಚಿಕೊಂಡರು.

ಮಾತು ಮುಂದುವರಿಸುತ್ತಾ ಶಶಾಂಕ್ ಚಿತ್ರಕ್ಕೆ ಹೈಪ್ ಸೃಷ್ಟಿಸಲು ಚೀಪ್ ಗಿಮಿಕಿಗೆ ನಾನು ಹೋಗೋಲ್ಲ. ಏನು ನಮ್ಮ ಕೈಯಲ್ಲಿ ಮಾಡಲು ಸಾಧ್ಯವೋ ಅದನ್ನು ಮಾತ್ರ ಮಾಧ್ಯಮದ ಮುಂದೆ ಹೇಳುತ್ತೇವೆ.

ಸುದೀಪ್ ಜನಪ್ರಿಯತೆ ಎಷ್ಟರ ಮಟ್ಟಿಗೆ ಇದೆ ಅನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಆಲ್ ಕ್ಲಿಯರ್ ಶಾಂಪೂ ಜಾಹೀರಾತಿನಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿರುವುದು ನಿಮಗೆಲ್ಲ ತಿಳಿದಿರುವ ವಿಚಾರ.

ಜಾಹೀರಾತು ಸ್ಪರ್ಧೆಯಲ್ಲಿ ಸುದೀಪ್ ದಾಖಲೆ

ಬಚ್ಚನ್ ಚಿತ್ರ ಹುಟ್ಟು ಹಾಕಿರುವ ಕ್ರೇಜ್ ಮತ್ತು ಬಿಗ್ ಬಾಸ್ ಕಾರ್ಯಕ್ರಮ ಗಳಿಸುತ್ತಿರುವ ಜನಪ್ರಿಯತೆಯಿಂದ ಥ್ರಿಲ್ ಆದ ಆಲ್ ಕ್ಲಿಯರ್ ಬ್ರಾಂಡ್ ಒಡೆತನದ ಹಿಂದೂಸ್ಥಾನ್ ಯುನಿಲಿವರ್ ಸಂಸ್ಥೆ ಒಂದು ಸ್ಪರ್ಧೆಯನ್ನು ಏರ್ಪಡಿಸಿತ್ತು.

ಜಾಹೀರಾತು ಸ್ಪರ್ಧೆಯಲ್ಲಿ ಸುದೀಪ್ ದಾಖಲೆ

ಸಂಸ್ಥೆ ಈ ಹಿಂದೆ ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಸೆಲೆಬ್ರಿಟಿಗಳ ಜೊತೆ ಕೂಡಾ ಈ ಸ್ಪರ್ಧೆ ಏರ್ಪಡಿಸಿತ್ತು, ಆದರೆ ಕನ್ನಡದ ಮಟ್ಟಿಗೆ ಇದು ಹೊಸದು. ಸಂಸ್ಥೆ ನಡೆಸಿದ ಸ್ಪರ್ಧೆ ಏನಂದರೆ "ಈ ದೂರವಾಣಿ ನಂಬರಿಗೆ ಕಾಲ್ ಮಾಡಿ ಸುದೀಪ್ ಜೊತೆ ಮಾತನಾಡುವ ಅವಕಾಶವನ್ನು ಪಡೆಯಿರಿ, ಇದು ಲಿಮಿಟೆಡ್ ಅವಕಾಶ" ಎಂದು ಸ್ಪರ್ಧೆ ಏರ್ಪಡಿಸಿತ್ತು.

ಜಾಹೀರಾತು ಸ್ಪರ್ಧೆಯಲ್ಲಿ ಸುದೀಪ್ ದಾಖಲೆ

ಈ ಸ್ಪರ್ಧೆಗೆ ಹರಿದು ಬಂದ ಫೋನ್ ಕಾಲುಗಳನ್ನು ಕಂಡು ಸಂಸ್ಥೆಯ ಅಧಿಕಾರಿಗಳು ದಂಗು ಬಡಿದರಂತೆ. ಸ್ಪರ್ಧೆಯ ಕಾಲಾವಧಿ ಮುಗಿದ ನಂತರವೂ ಫೋನ್ ಗಳ ಸುರಿಮಳೆ ಬರುತ್ತಲೇ ಇತ್ತಂತೆ. ಸ್ಪರ್ಧೆಯ ಕಾಲಾವಧಿ ಮುಗಿಯುವ ತನಕದ ಅವಧಿಯಲ್ಲಿ ಸುಮಾರು 30 ಸಾವಿರ ಪೋನ್ ಕಾಲ್ ಗಳು ಬಂದಿದ್ದವಂತೆ.

ಜಾಹೀರಾತು ಸ್ಪರ್ಧೆಯಲ್ಲಿ ಸುದೀಪ್ ದಾಖಲೆ

ಈ ಹಿಂದೆ ಇತರ ಭಾಷೆಗಳಲ್ಲಿ ನಡೆಸಿದ ಸ್ಪರ್ಧೆಗೆ ಅತಿ ಹೆಚ್ಚು ಫೋನ್ ಬಂದಿದ್ದಂದರೆ ತೆಲುಗಿನ ರಾಮ್ ಚರಣ್ ತೇಜಾ ನಡೆಸಿಕೊಟ್ಟ ಕಾರ್ಯಕ್ರಮಕ್ಕೆ ಎಂದು ಹಿಂದೂಸ್ಥಾನ್ ಯುನಿಲಿವರ್ ಅಧಿಕಾರಿಗಳು ಹೇಳಿದ ಮಾತನ್ನು ಶಶಾಂಕ್ ನಮಗೂ ತಿಳಿಸಿದ್ದಾರೆ.

ಜಾಹೀರಾತಿನಲ್ಲಿ ಸುದೀಪ್

ಕಿಚ್ಚ ಸುದೀಪ್ ಜಾಯ್ ಅಲುಕಾಸ್ ಚಿನ್ನಾಭರಣ ಸಂಸ್ಥೆಯ ಜಾಹೀರಾತಿನಲ್ಲಿ ಕೂಡಾ ಕಾಣಿಸಿಕೊಂಡಿದ್ದಾರೆ.

English summary
Director Shashank reveals Hindustan Unilever All clear shampoo sponsored competition with Sudeep gets huge response from audience. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada