»   » ಕೆಂಡಸಂಪಿಗೆ ಟ್ವಿಟ್ಟರ್ ನಲ್ಲೂ ಘಮ ಘಮ ಪರಿಮಳ

ಕೆಂಡಸಂಪಿಗೆ ಟ್ವಿಟ್ಟರ್ ನಲ್ಲೂ ಘಮ ಘಮ ಪರಿಮಳ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕೆಲ ವರ್ಷಗಳ ಗ್ಯಾಪ್ ನಂತರ ನಮ್ಮ ಕನ್ನಡ ಚಿತ್ರರಂಗದ ಅದ್ಭುತ ಚಿತ್ರಕಥೆಗಾರ ದುನಿಯಾ ಸೂರಿ ನಿ ಅವರು ಮತ್ತೆ ರ್ದೇಶಿಸಿರುವ ಚಿತ್ರ 'ಕೆಂಡಸಂಪಿಗೆ' (ಪಾರ್ಟ್ 2 ಗಿಣಿಮರಿ ಕೇಸ್) ಸೆಪ್ಟೆಂಬರ್ 11 ರಂದು ರಾಜ್ಯದೆಲ್ಲೆಡೆ ಬಿಡುಗಡೆ ಆಗಿ ತುಂಬಿದ ಗೃಹ ಪ್ರದರ್ಶನ ಕಾಣುತ್ತಿದೆ. ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಕೆಂಡಸಂಪಿಗೆ ಸಕತ್ ಟ್ರೆಂಡಿಂಗ್ ನಲ್ಲಿದೆ.

ಆರ್.ಎಸ್.ಪ್ರೊಡಕ್ಷನ್ಸ್ ಬ್ಯಾನರ್ ನ ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಮತ್ತು ಕೆ.ಪಿ.ಶ್ರೀಕಾಂತ್ 'ಕೆಂಡಸಂಪಿಗೆ' ಚಿತ್ರದ ವಿತರಣಾ ಹಕ್ಕುಗಳನ್ನು ಪಡೆದುಕೊಂಡು ಕೊನೆಗೂ ಚಿತ್ರ ಬಿಡುಗಡೆ ಮಾಡಿದ್ದಾರೆ. ಸೆನ್ಸಾರ್ ಅಂಗಳದಿಂದ U/A ಸರ್ಟಿಫಿಕೇಟ್ ಪಡೆದು 'ಕೆಂಡಸಂಪಿಗೆ' ಪಾಸ್ ಆಗಿ ಪ್ರೇಕ್ಷಕರ ಮುಂದೆ ಬಂದಿದೆ. [ಸೂರಿ ಕಾರು ಚಾಲಕ 'ಕೆಂಡಸಂಪಿಗೆ' ಹೀರೋ ಆದ ಕಥೆ]

ಪಕ್ಕಾ ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿರುವ 'ಕೆಂಡಸಂಪಿಗೆ' ಚಿತ್ರದಲ್ಲಿ ಸಂತೋಷ್ ರೇವಾ ಮತ್ತು ಶ್ವೇತಾ ಕಾಮತ್ ಅಭಿನಯಿಸಿದ್ದಾರೆ. ಇಬ್ಬರಿಗೂ 'ಕೆಂಡಸಂಪಿಗೆ' ಮೊದಲ ಸಾಹಸ. ಉಳಿದಂತೆ ರಾಜೇಶ್ ನಟರಂಗ, ಪ್ರಕಾಶ್ ಬೆಳವಾಡಿ, ಚಂದ್ರಿಕಾ ತಾರಾಗಣದಲ್ಲಿದ್ದಾರೆ.[ಸೂರಿ 'ಕೆಂಡಸಂಪಿಗೆ'ಯಲ್ಲಿ ಅಂಥದ್ದೇನಿದೆ..?]

ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಮೊದಲ ದಿನದ ಮೊದಲ ಶೋ ನೋಡಿದ ಸಿನಿರಸಿಕರು ತಮ್ಮಮ್ಮ ಅಭಿಪ್ರಾಯ, ಅನಿಸಿಕೆ, ವಿಮರ್ಶೆ ಹಂಚಿಕೊಳ್ಳುತ್ತಿದ್ದಾರೆ. [ಈ ವಾರ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳು]

ಹೊಸ ಜೋಡಿಗೆ ಮಣೆ ಹಾಕಿದ ಸೂರಿ

ನಾಯಕಿ ಶ್ವೇತಾ ಕಾಮತ್ ಮಂಗಳೂರಿನ ರೇಡಿಯೋ ಒಂದರ ಜಾಕಿ. ಆಕೆ ಕೂಡ 'ಕೆಂಡಸಂಪಿಗೆ'ಗಾಗಿ ಮಾನ್ವಿತಾ ಹರೀಶ್ ಅಂತ ಹೊಸ ನಾಮಕರಣ ಮಾಡಿಕೊಂಡಿದ್ದಾರೆ. ಒಂದು ಪ್ರೇಮಕಥೆ ಮತ್ತು ಕೊಲೆಯ ವಿಚಾರಣೆ ಸುತ್ತ ನಡೆಯುವ 7 ದಿನಗಳ ಜರ್ನಿ ಈ 'ಕೆಂಡಸಂಪಿಗೆ'.

ಪಾರ್ಟ್ 1 ಏನಿದೆ? ಪಾರ್ಟ್ 2 ಗಿಣಿಮರಿ ಕೇಸ್

ಪಾರ್ಟ್ 1 ಏನಿದೆ? ಕಾಗೆ ಬಂಗಾರ, ಪಾರ್ಟ್ 2 ಗಿಣಿಮರಿ ಕೇಸ್

ಸೂರಿಯ ಕಾರು ಚಾಲಕ ಈಗ ಚಿತ್ರಕ್ಕೆ ನಾಯಕ

ಸಂತೋಷ್ ರೇವಾ ದುನಿಯಾ ಸೂರಿಯ ಕಾರು ಚಾಲಕ! ಕಳೆದ ಕೆಲ ವರ್ಷಗಳಿಂದ ಸೂರಿ ಬಳಿ ಕೆಲಸ ಮಾಡುತ್ತಿರುವ ಸಂತೋಷ್ ಗೆ ನಿರ್ದೇಶಕನಾಗುವ ಆಸೆ ಇತ್ತು. ಮೊದಲು ಯೋಗರಾಜ್ ಭಟ್ಟರ ಗರಡಿಯಲ್ಲಿ ಸಹಾಯಕನಾಗಿ ಕ್ಲಾಪ್ ಬೋರ್ಡ್ ಹಿಡಿಯುತ್ತಿದ್ದ ಸಂತೋಷ್, ನಂತರ ಸೂರಿಯ ಅವರು ತಮ್ಮ 'ಅಣ್ಣಾ ಬಾಂಡ್' ಮತ್ತು 'ಕಡ್ಡಿಪುಡಿ' ಚಿತ್ರಗಳಲ್ಲಿ ಅಸೋಸಿಯೇಟ್ ಆಗಿ ಕೆಲಸ ಕೊಟ್ಟರು ಅವರ ಕಾರು ಓಡಿಸುವ ರೇವಾ ಈಗ ಕೆಂಡಸಂಪಿಗೆಯ ನಾಯಕ.

ಕೆಂಡಸಂಪಿಗೆ ಮಧ್ಯಂತರದ ತನಕ

ಕೆಂಡಸಂಪಿಗೆ ಮಧ್ಯಂತರದ ತನಕ ಕಥೆಯ ಓಟ ಚೆನ್ನಾಗಿದೆ. ಚಿತ್ರಕಥೆ ಹಾಗೂ ನಿರೂಪಣೆ ಹೊಸ ಅನುಭವ ನೀಡುತ್ತಿದೆ.

ಕೆಂಡಸಂಪಿಗೆ' ಚಿತ್ರದ ಟ್ರೇಲರ್ ನೋಡ್ತಿದ್ರೆ

ಕೆಂಡಸಂಪಿಗೆ' ಚಿತ್ರದ ಟ್ರೇಲರ್ ನೋಡ್ತಿದ್ರೆ, ಇದು ಕ್ರೈಂ ಥ್ರಿಲ್ಲರ್ ಸಿನಿಮಾ ಅಂತ ಅನಿಸೋದು ಪಕ್ಕಾ. 18-19 ವರ್ಷದ ಯುವಕ-ಯುವತಿಯರ ಸುತ್ತ ಒಂದು ಪೊಲೀಸ್ ವಿಚಾರಣೆಯ ಬಗ್ಗೆ ಇರುವ ಕಥೆ ಇದು. ಅದಕ್ಕೆ 'ಪಾರ್ಟ್-2 ಗಿಣಿಮರಿ ಕೇಸ್' ಅಂತ ಕ್ಯಾಪ್ಷನ್ ಕೊಟ್ಟಿರುವ ಸೂರಿ, ಚಿತ್ರದ ಕೌತುಕವನ್ನ ಮತ್ತಷ್ಟು ಹೆಚ್ಚಿಸಿದ್ದಾರೆ

ಕೆಂಡಸಂಪಿಗೆ ಸಕತ್ ಟ್ರೆಂಡಿಂಗ್ ಗುರೂ

ಕೆಂಡಸಂಪಿಗೆ ಸಕತ್ ಟ್ರೆಂಡಿಂಗ್ ಗುರೂ ಭಾರತದಲ್ಲಿ ಒಂದು ಗಂಟೆ ಮುಂಚೆ 5ನೇ ಸ್ಥಾನದಲ್ಲಿತ್ತು. ಈ ಸಮಯಕ್ಕೆ 11.30ಕ್ಕೆ 3ನೇ ಸ್ಥಾನಕ್ಕೆ ಬಂದಿದೆ. ಕನ್ನಡ ಚಿತ್ರಗಳ ಟ್ರೆಂಡಿಂಗ್ ನೋಡಿ ಸಿನಿರಸಿಕರು ಖುಷಿಯಾಗಿದ್ದಾರೆ.

ಸೂರಿ ಅವರ ಅತ್ಯುತ್ತಮ ಚಿತ್ರ ಕೆಂಡಸಂಪಿಗೆ

ಸೂರಿ ಅವರ ಅತ್ಯುತ್ತಮ ಚಿತ್ರ ಕೆಂಡಸಂಪಿಗೆ- ಕ್ಲಾಸ್ ಮಾಸ್, ಕಲಾತ್ಮಕ, ಕಮರ್ಷಿಯಲ್ ಎಲ್ಲಕ್ಕೂ ಸಲ್ಲುವ ಚಿತ್ರ.

ಸಿನಿಲೋಕ ವಿಮರ್ಶೆ :4/5

ಸಿನಿಲೋಕ ವಿಮರ್ಶೆ ನೀಡಿ ಎಲ್ಲರೂ ನೋಡಲೇಬೇಕಾದ ಚಿತ್ರ ಎಂದಿದೆ.

ಶಶಿಪ್ರಸಾದ್ ಅವರ ಅನಿಸಿಕೆ 4.5/5

ಶಶಿಪ್ರಸಾದ್ ಅವರ ಅನಿಸಿಕೆ ಈ ಚಿತ್ರ ಮನೋಲ್ಲಾಸಭರಿತ, ಮನರಂಜನೆ ಸಹಿತ, ಬೇರೆಯವರಿಗೆ ನೋಡಿ ಎಂದು ಹೇಳಬಹುದಾದ ಚಿತ್ರ 4.5/5

English summary
Duniya Soori Directorial 'Kendasampige' got released today (Sep 11) across Karnataka. Kendasampige has Santosh Reva and Manvitha Harish in the lead roles. The movie got good response, Here is first day first show report and fans craze in twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada