»   » ಯು-ಪ್ರಮಾಣ ಪತ್ರ ಪಡೆದ 'ಪುಷ್ಪಕ ವಿಮಾನ: ರಿಲೀಸ್ ಗೆ ದಿನಗಣನೆ

ಯು-ಪ್ರಮಾಣ ಪತ್ರ ಪಡೆದ 'ಪುಷ್ಪಕ ವಿಮಾನ: ರಿಲೀಸ್ ಗೆ ದಿನಗಣನೆ

Written By:
Subscribe to Filmibeat Kannada

ನಟ ಕಮ್ ನಿರ್ದೇಶಕ ರಮೇಶ್‌ ಅರವಿಂದ್ ಹಾಗೂ ಡಿಂಪಲ್ ಕ್ವೀನ್ ರಚಿತ ರಾಮ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಪುಷ್ಪಕ ವಿಮಾನ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ತಂಡದ ಕಡೆಯಿಂದ ಬಂದಿರುವ ಹೊಸ ಸುದ್ದಿ ಎಂದರೆ 'ಪುಷ್ಪಕ ವಿಮಾನ' ಸಿನಿಮಾ ಸೆನ್ಸಾರ್ ಮಂಡಳಿಯಿಂದ ಯು-ಪ್ರಮಾಣ ಪತ್ರ ಪಡೆದುಕೊಂಡಿದೆ.

pushpaka vimana

'ಪುಷ್ಪಕ ವಿಮಾನ' ಸಿನಿಮಾಗೆ ಯು-ಪ್ರಮಾಣ ಪತ್ರ ನೀಡಿದ ಸೆನ್ಸಾರ್ ಮಂಡಳಿ ಸದಸ್ಯರು ಚಿತ್ರ ನೋಡಿ ಮೆಚ್ಚುಗೆ ಜೊತೆಗೆ ತಂಡದ ಪರಿಶ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.[ಹೊಸ ವರ್ಷದ ಆರಂಭದಲ್ಲಿ ಹಾರಲಿದೆ 'ಪುಷ್ಪಕ ವಿಮಾನ']

pushpaka vimana 1

ಸ್ಯಾಂಡಲ್‌ ವುಡ್‌ ನಲ್ಲಿ ಟ್ರೈಲರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಸೌಂಡ್ ಮಾಡಿರುವ 'ಪುಷ್ಪಕ ವಿಮಾನ' ಚಿತ್ರವನ್ನು ತೂಗುದೀಪ ಡಿಸ್ಟ್ರಿಬ್ಯುಟರ್ಸ್ ವಿತರಿಸುತ್ತಿದೆ. ಚಿತ್ರ 120 ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.[ಅಪ್ಪ-ಮಗಳ ಮುದ್ದಾದ 'ಪುಷ್ಪಕ ವಿಮಾನ' ನೋಡಿದ್ರಾ?]

pushpaka vimana 2

ರಮೇಶ್ ಅರವಿಂದ್ ಹಾಗೂ ಬೇಬಿ ಯುವಿನಾ ಜೋಡಿಯಲ್ಲಿ ತಂದೆ-ಮಗಳ ಬಾಂಧವ್ಯವನ್ನು ವಿವರಿಸುವ 'ಪುಷ್ಪಕ ವಿಮಾನ' ಚಿತ್ರದಲ್ಲಿ, ವಿಶೇ‍ಷ ಪಾತ್ರದಲ್ಲಿ ನಟಿ ಜೂಹಿ ಚಾವ್ಲಾ ಅಭಿನಯಿಸಿದ್ದಾರೆ. ಚಿತ್ರಕ್ಕೆ ನವ ನಿರ್ದೇಶಕ ಎಸ್ ರವೀಂದ್ರ ನಾಥ್ ಮೊದಲ ಬಾರಿಗೆ ಆಕ್ಷನ್‌ ಕಟ್ ಹೇಳಿದ್ದಾರೆ. ಚಿತ್ರ ಜನವರಿ 6, 2017 ರಂದು ಬಿಡುಗಡೆ ಆಗುತ್ತಿದೆ.[ಚಿತ್ರಗಳು: 'ಪುಷ್ಪಕ ವಿಮಾನ'ದಲ್ಲಿ ಜೂಹಿ ಅವರ ಗೆಟಪ್ ನೋಡಿದ್ರಾ?]

English summary
Pushpaka Vimana is an upcoming Indian Kannada drama film directed by S. Ravindranath. Pushpaka Vimana Film Censored U certificate.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada