»   » 'ಚಿತ್ರಕಥೆ-ಸಂಭಾಷಣೆ' ಬರೆಯುವುದು ಹೇಳಿಕೊಡಲಿದ್ದಾರೆ 'ಮಠ' ಗುರುಪ್ರಸಾದ್

'ಚಿತ್ರಕಥೆ-ಸಂಭಾಷಣೆ' ಬರೆಯುವುದು ಹೇಳಿಕೊಡಲಿದ್ದಾರೆ 'ಮಠ' ಗುರುಪ್ರಸಾದ್

Posted By:
Subscribe to Filmibeat Kannada

ನಿಮಗೆ ಸಿನಿಮಾ ಸ್ಕ್ರಿಪ್ಟ್, ಸಂಭಾಷಣೆ, ಚಿತ್ರಕಥೆ ಬರೆಯುವ ಆಸಕ್ತಿ ಇದೆಯಾ? ಚಿತ್ರಗಳಿಗೆ ಹೇಗೆ ಸ್ಕ್ರಿಪ್ಟ್ ಬರೆಯುತ್ತಾರೆ ಎಂಬುದನ್ನ ತಿಳಿದುಕೊಳ್ಳಬೇಕು ಅಥವಾ ಕಲಿಯಬೇಕು ಎಂಬ ಆಸೆ ಇದೆಯಾ? ಆಸಕ್ತಿ ಇದ್ದರೂ ಅದು ಹೇಗೆ ಬರೆಯುವುದು ಎಂಬ ಗೊಂದಲ ಕಾಡುತ್ತಿದೆಯಾ? ಯೋಚನೆ ಮಾಡ್ಬೇಡಿ ಇದನ್ನೆಲ್ಲಾ ಕಲಿಯುವುದಕ್ಕೆ ನಿಮಗೊಂದು ಸುವರ್ಣ ಅವಕಾಶ ಸಿಕ್ಕಿದೆ.['ಮಠ' ಗುರುಪ್ರಸಾದ್-ಜಗ್ಗೇಶ್ ಕಾಂಬಿನೇಶನ್ ನಲ್ಲಿ ಮತ್ತೊಂದು ಸಿನಿಮಾ!]

ಕನ್ನಡದ ಖ್ಯಾತ ನಿರ್ದೇಶಕ ಗುರುಪ್ರಸಾದ್, ''ಗುರುಪ್ರಸಾದ್ ಇನ್ಸಿಟ್ಯೂಟ್ ಆಫ್ ಸ್ಕ್ರಿಪ್ಟ್ ಅಂಡ್ ಫಿಲ್ಮ್ ಡೈರೆಕ್ಷನ್'' ಎಂಬ ಹೆಸರಿನಲ್ಲಿ ತರಗತಿಗಳನ್ನ ಅಯೋಜಿಸಿದ್ದಾರೆ. ಈ ತರಗತಿಯಲ್ಲಿ ನಿಮಗೆ ಸಿನಿಮಾ ಚಿತ್ರಕಥೆ, ಸಂಭಾಷಣೆ ಬರೆಯುವುದು, ನಿರ್ದೇಶನ ಮಾಡುವುದು ಹೇಗೆ ಎಂದು ಹೇಳಿ ಕೊಡಲಿದ್ದಾರೆ. ಈ ಅವಕಾಶವನ್ನ ಬಳಸಿಕೊಂಡು, ಸಿನಿಮಾ ಕ್ಷೇತ್ರದಲ್ಲಿ ಯಶಸ್ಸು ಕಾಣಬಹುದು.

ಗುರು ಪ್ರಸಾದ್ ಅವರ ಈ ಶಿಬಿರದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ...

ಯಾವ ವಿಷಯಗಳನ್ನ ಹೇಳಿಕೊಡಲಾಗುವುದು

ಗುರುಪ್ರಸಾದ್ ಅವರ ಈ ಶಿಬಿರದಲ್ಲಿ ಸಿನಿಮಾ ಸ್ಕ್ರಿಪ್ಟ್ ಬರೆಯುವುದು, ಸಂಭಾಷಣೆ ಬರೆಯುವುದು, ಡೈರೆಕ್ಷನ್ ಮಾಡುವುದು ಹೇಗೆ ಎಂಬುದನ್ನ ಹೇಳಿಕೊಡಲಾಗುವುದು.[ಮಠ ಗುರುಪ್ರಸಾದ್ ಕಣ್ಣು ಸಾ.ರಾ.ಗೋವಿಂದ್ ಮಗನ ಮೇಲೆ ಬಿದ್ಬಿಟೈತೆ]

25 ಸೀಟುಗಳು ಮಾತ್ರ ಅವಕಾಶ

ಗುರು ಪ್ರಸಾದ್ ಅವರ ಈ ಶಿಬಿರದಲ್ಲಿ ಕೇವಲ 25 ಜನರಿಗೆ ಮಾತ್ರ ಅವಕಾಶವಿರುತ್ತದೆ. ಈಗಾಗಲೇ ಒಂದು ತಂಡಕ್ಕೆ ಯಶಸ್ವಿಯಾಗಿ ತರಗತಿಗಳು ಮುಗಿದಿದೆ. ಈಗ ಎರಡನೇ ತಂಡಕ್ಕೆ ಸಜ್ಜಾಗುತ್ತಿದ್ದಾರೆ.

ಹೇಗೆ ತರಗತಿಗೆ ಆಯ್ಕೆ?

ಅಂದ್ಹಾಗೆ, ಗುರುಪ್ರಸಾದ್ ಅವರ ಈ ಶಿಬಿರಕ್ಕೆ ಪಾಲ್ಗೊಳ್ಳಲು ಇಚ್ಛಿಸುವವರನ್ನ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಕನ್ನಡ ಭಾಷೆ, ಕನ್ನಡ ಪ್ರತಿಭೆಗಳಿಗೆ ಹೆಚ್ಚು ಒತ್ತು ನೀಡುವ ನಿರ್ದೇಶಕ ಗುರು ಪ್ರಸಾದ್, ಎಲ್ಲ ತರಗತಿಗಳನ್ನ ಕನ್ನಡದಲ್ಲಿ ನಡೆಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ....

ಆಗಸ್ಟ್ 15 ರಿಂದ ತರಗತಿ ಆರಂಭವಾಗುತ್ತಿದ್ದು, ಅಷ್ಟರೊಳಗೆ ಯಾರಿಗಾದ್ರೂ ಆಸಕ್ತಿ ಇದ್ದರೇ ಭಾಗವಹಿಸಿ. ಇನ್ನೂ ಈ ಶಿಬಿರದ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿದುಕೊಳ್ಳಲು ಗುರು ಪ್ರಸಾದ್ ಅವರ ಖಾಸಗಿ ಇ-ಮೇಲ್ ( directorguruprasad@gmail.com ) ಅಥವಾ (9108681469) ಈ ಮೊಬೈಲ್ ನಂಬರ್ ನ್ನ ಸಂಪರ್ಕಿಸಬಹುದು.

ಗುರುಪ್ರಸಾದ್ ಬಗ್ಗೆ....

ಗುರುಪ್ರಸಾದ್ ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಹಾಗೂ ಬರಹಗಾರ. 'ಮಠ', 'ಡೈರೆಕ್ಟರ್ ಸ್ಪೆಷಲ್', 'ಎದ್ದೇಳು ಮಂಜುನಾಥ', 'ಎರಡನೇ ಸಲ' ಅಂತಹ ವಿಭಿನ್ನ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ.['ಮಠ' ನಿರ್ದೇಶಕ ಗುರುಪ್ರಸಾದ್ ರವರ ಮತ್ತೊಂದು ಮುಖ ಅನಾವರಣ]

English summary
Kannada Director Guru Prasad Has Teaching How To Write Script and Dialogue for Films. Classes Starts From August.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada