»   »  'ಮಠ' ಗುರುಪ್ರಸಾದ್-ಜಗ್ಗೇಶ್ ಕಾಂಬಿನೇಶನ್ ನಲ್ಲಿ ಮತ್ತೊಂದು ಸಿನಿಮಾ!

'ಮಠ' ಗುರುಪ್ರಸಾದ್-ಜಗ್ಗೇಶ್ ಕಾಂಬಿನೇಶನ್ ನಲ್ಲಿ ಮತ್ತೊಂದು ಸಿನಿಮಾ!

Posted By:
Subscribe to Filmibeat Kannada

'ಮಠ' ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಶನ್ ನಲ್ಲಿ ಮತ್ತೊಂದು ಸಿನಿಮಾ' ಬರಲಿದ್ಯಂತೆ. ಹಾಗಂತ, ಒಂದು ಸುದ್ದಿ ಸದ್ಯ ಗಾಂಧಿನಗರದಲ್ಲಿ ಜೋರಾಗಿ ಕೇಳಿ ಬರುತ್ತಿದೆ.

ಗುರು ಮತ್ತು ಜಗ್ಗೇಶ್ ಕಾಂಬಿನೇಶನ್ ನ ಹ್ಯಾಟ್ರಿಕ್ ಸಿನಿಮಾದ ವಿಷಯವನ್ನು ಸ್ವತಃ ನಿರ್ದೇಶಕ ಗುರುಪ್ರಸಾದ್ ಪ್ರಸ್ತಾಪ ಮಾಡಿದ್ದಾರೆ. ಮುಂದೆ ಓದಿ....[ಮಠ ಗುರುಪ್ರಸಾದ್ ಕಣ್ಣು ಸಾ.ರಾ.ಗೋವಿಂದ್ ಮಗನ ಮೇಲೆ ಬಿದ್ಬಿಟೈತೆ]

ಗುರುಪ್ರಸಾದ್ ಪ್ರಸ್ತಾಪ

ಇತ್ತೀಚಿಗಷ್ಟೆ ನಿರ್ದೇಶಕ ಗುರುಪ್ರಸಾದ್ ಫೇಸ್ ಬುಕ್ ಲೈವ್ ನಲ್ಲಿ ಜಗ್ಗೇಶ್ ಜೊತೆ ಸಿನಿಮಾ ಮಾಡುವ ವಿಷಯವನ್ನು ಮಾತನಾಡಿದ್ದಾರೆ.

ಅಭಿಮಾನಿಯ ಪ್ರಶ್ನೆ

ಫೇಸ್ ಬುಕ್ ಲೈವ್ ನಲ್ಲಿ ಅಭಿಮಾನಿ ಒಬ್ಬರು ಗುರುಪ್ರಸಾದ್ ಅವರಿಗೆ 'ನೀವು ಜಗ್ಗೇಶ್ ಅವರ ಜೊತೆ ಮತ್ತೊಂದು ಸಿನಿಮಾ ಮಾಡಬಹುದಾ?' ಅಂತ ಪ್ರಶ್ನೆ ಕೇಳಿದ್ದರು.[ವಿಮರ್ಶೆ: 'ಮಠ' ಗುರುಗಳ 'ಎರಡನೇ ಸಲ' ಸಖತ್ ನಾಟಿ]

ಗುರು ಉತ್ತರ

ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ಗುರುಪ್ರಸಾದ್ 'ಜಗ್ಗೇಶ್ ಅವರ ಜೊತೆ ಸಿನಿಮಾ ಮಾಡುವ ಆಸೆ ನನಗೂ ಇದೆ. ಅಲ್ಲದೆ ಜಗ್ಗೇಶ್ ಅವರು ಸಹ ನನ್ನ ಜೊತೆ ಸಿನಿಮಾ ಮಾಡುವ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ್ದಾರೆ' ಅಂತ ಹೇಳಿದ್ದರು.

ಹಾಗಾದ್ರೆ ಸಿನಿಮಾ ಬರುವುದು ಪಕ್ಕಾನಾ.?

ಗುರುಪ್ರಸಾದ್ ಅವರ ಪ್ರಕಾರ ಜಗ್ಗೇಶ್ ಜೊತೆ ಅವರು ಸಿನಿಮಾ ಮಾಡುವುದು ಪಕ್ಕಾ ಅಂತೆ. ಅಲ್ಲದೆ ಸದ್ಯ ಆ ಚಿತ್ರಕ್ಕಾಗಿ ನಿರ್ಮಾಪಕರ ಹುಡುಕಾಟದಲ್ಲಿದ್ದಾರಂತೆ.['ಮಠ' ನಿರ್ದೇಶಕ ಗುರುಪ್ರಸಾದ್ ರವರ ಮತ್ತೊಂದು ಮುಖ ಅನಾವರಣ]

ಸೂಪರ್ ಹಿಟ್ ಜೋಡಿ

ಜಗ್ಗೇಶ್ ಮತ್ತು ಗುರುಪ್ರಸಾದ್ ಕಾಂಬಿನೇಶನ್ 'ಮಠ' ಮತ್ತು 'ಎದ್ದೇಳು ಮಂಜುನಾಥ' ರೀತಿಯ ಎರಡು ಸೂಪರ್ ಹಿಟ್ ಸಿನಿಮಾ ನೀಡಿದೆ. ಈಗ ಹ್ಯಾಟ್ರಿಕ್ ಬಾರಿಸುವುದು ಖಂಡಿತ ಅಂತ ಗುರುಪ್ರಸಾದ್ ಹೇಳಿಕೊಂಡಿದ್ದಾರೆ.

'ಅದೇಮಾ' ಚಿತ್ರ

ಈಗ ಗುರುಪ್ರಸಾದ್ ನಿರ್ದೇಶನದಲ್ಲಿ 'ಅದೇಮಾ' ಸಿನಿಮಾ ಬರುತ್ತಿದೆ. ಈ ಚಿತ್ರದಲ್ಲಿ ಅನೂಪ್ ಸಾ.ರಾ.ಗೋವಿಂದ್ ನಾಯಕನಾಗಿದ್ದು, ಸದ್ಯ ನಾಯಕಿಯ ಹುಡುಕಾಟ ನಡೆಯುತ್ತಿದೆ. ಈ ಚಿತ್ರದ ಬಳಿಕ ಜಗ್ಗೇಶ್ ಜೊತೆಗಿನ ಸಿನಿಮಾ ಶುರುವಾಗುವ ಸಾಧ್ಯತೆ ಅಧಿಕವಾಗಿದೆ.[ಗುರುಪ್ರಸಾದ್ ಸಿನಿಮಾ ಶಾಲೆ ಬಗ್ಗೆ ವಿದ್ಯಾರ್ಥಿಗಳ ಫೀಡ್ ಬ್ಯಾಕ್]

English summary
Kannada Director Guruprasad is ready to make another movie with Kannada Actor Jaggesh
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada