»   » ಕಾಫಿಗೆ ಹೊಸ ಅರ್ಥಕೊಟ್ಟ 'ಎರಡನೇ ಸಲ' ರಿಲೀಸ್ ಗೆ ದಿನಗಣನೆ ಶುರು

ಕಾಫಿಗೆ ಹೊಸ ಅರ್ಥಕೊಟ್ಟ 'ಎರಡನೇ ಸಲ' ರಿಲೀಸ್ ಗೆ ದಿನಗಣನೆ ಶುರು

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಡಿಫರೆಂಟ್ ಡೈರೆಕ್ಟರ್ ಗುರುಪ್ರಸಾದ್ ಆಕ್ಷನ್ ಕಟ್ ಹೇಳಿರುವ 'ಎರಡನೇ ಸಲ' ಚಿತ್ರದ ಎರಡೂ ಟ್ರೈಲರ್ ಗಳನ್ನು ನೀವೆಲ್ಲಾ ನೋಡಿರುತ್ತೀರಿ. ಪಡ್ಡೆ ಹೈಕಳಿಂದ ಹಿಡಿದು ದೊಡ್ಡವರ ತನಕ ಫೇವರಿಟ್ ಆದ ಈ ಚಿತ್ರ ಈಗ ತೆರೆ ಮೇಲೆ ಬರಲು ದಿನಗಣನೆ ಆರಂಭವಾಗಿದೆ.

'ಎರಡನೇ ಸಲ' ಚಿತ್ರದ ಮೊದಲ ಟ್ರೈಲರ್ ನಲ್ಲಿ ಕಾಫಿಗೆ ಹೊಸ ಅರ್ಥಕೊಟ್ಟಿದ್ದ ಗುರುಪ್ರಸಾದ್, ಎರಡನೇ ಟ್ರೈಲರ್ ನಲ್ಲಿ ಫಿಲ್ಟರ್ ಕಾಫಿಗೂ, ಟೀಗೂ ಇನ್ನೊಂದು ಅರ್ಥ ಕೊಟ್ಟಿದ್ದರು. ಈ ರೀತಿ ಡಬಲ್ ಮೀನಿಂಗ್ ಡೈಲಾಗ್ ಗಳ ಮೂಲಕ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದ್ದ ಸಿನಿಮಾ ಮಾರ್ಚ್ 3 ರಂದು ತೆರೆ ಮೇಲೆ ಅಪ್ಪಳಿಸುತ್ತಿದೆ.['ಎರಡನೇ ಸಲ' ಟ್ರೈಲರ್ ನೋಡಿದ್ರೆ, ಇನ್ಮುಂದೆ 'ಕಾಫಿ'ನೇ ಕುಡಿಯಲ್ಲಾ!]

Guruprasad's Diretorial 'Eradane Sala' Movie Releasing on march 3rd

ಈ ಹಿಂದೆ 'ಡೈರೆಕ್ಟರ್ ಸ್ಪೆಷಲ್' ಚಿತ್ರದಲ್ಲಿ ನಟಿಸಿದ್ದ ಸ್ಪೆಷಲ್ ಸ್ಟಾರ್ ಧನಂಜಯ್ ಮತ್ತೊಮ್ಮೆ ಗುರುಪ್ರಸಾದ್ ಅವರ ಕಾಂಬಿನೇಷನ್ ಆಗಿದ್ದಾರೆ. 'ಎರಡನೇ ಸಲ' ಚಿತ್ರದಲ್ಲಿ ನಾಯಕ ಧನಂಜಯ್ ಗೆ ಸಂಗೀತಾ ಭಟ್ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಹಿರಿಯ ನಟಿ ಲಕ್ಷ್ಮಿ, ನಟ ಅವಿನಾಶ್, ಕಿರಿಕ್ ಕೀರ್ತಿ, ಗುರುಪ್ರಸಾದ್ ನಿರ್ದೇಶನದ ಜೊತೆಗೆ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.['ಎರಡನೇ ಸಲ' ಚಿತ್ರದ 2ನೇ ಟ್ರೈಲರ್ ನಲ್ಲೂ ಕಾಫಿದ್ದೇ ಕಾರುಬಾರು]

eradane sala

ಗುರುಪ್ರಸಾದ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿರುವ 'ಎರಡನೇ ಸಲ' ಚಿತ್ರವನ್ನು ಯೋಗೇಶ್ ನಾರಾಯಣ್ ನಿರ್ಮಾಣ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ.

English summary
Kannada Actor Dhananjaya Starrer, Guruprasad's Diretorial 'Eradane Sala Movie Releasing on march 3rd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada