»   » ರವಿಶಂಕರ್ ಧ್ವನಿ ಬಗ್ಗೆ ಯದ್ವಾತದ್ವಾ ಹೊಗಳಿದ ಕಿಚ್ಚ ಸುದೀಪ್

ರವಿಶಂಕರ್ ಧ್ವನಿ ಬಗ್ಗೆ ಯದ್ವಾತದ್ವಾ ಹೊಗಳಿದ ಕಿಚ್ಚ ಸುದೀಪ್

Posted By:
Subscribe to Filmibeat Kannada

ತೆರೆಮೇಲೆ ಯಾವಾಗಲು ಸುದೀಪ್ ಗೆ ರವಿಶಂಕರ್ ವಿಲನ್ ಆಗೇ ಕಾಣಿಸಿಕೊಳ್ಳುತ್ತಾರೆ. ಆದರೆ ತೆರೆ ಹಿಂದೆ ಈ ಇಬ್ಬರು ಕ್ಲೋಸ್ ಫ್ರೆಂಡ್ಸ್. ಈಗ 'ಹೆಬ್ಬುಲಿ' ಚಿತ್ರದಲ್ಲೂ ಕಿಚ್ಚನಿಗೆ ಎದುರಾಳಿಯಾಗಿ ಕಾಣಿಸಿಕೊಂಡಿದ್ದಾರೆ 'ಆರ್ಮುಗಂ'.[ಸುದೀಪ್ ಬದುಕಿನ ಮೊದಲ ಅತ್ಯಂತ ದೊಡ್ಡ ಸಾಧನೆ ಇದು..!]

ನಿಮಗೆಲ್ಲ ಗೊತ್ತಿರುವ ಹಾಗೆ ರವಿಶಂಕರ್ ಧ್ವನಿಗೆ ಪರಭಾಷೆಯಲ್ಲಿ ಡಿಮ್ಯಾಂಡ್ ಇದ್ರೆ, ಸುದೀಪ್ ದನಿಗೆ ಸ್ಯಾಂಡಲ್ ವುಡ್ ನಲ್ಲಿ ಸಖತ್ ಬೇಡಿಕೆ ಇದೆ. ಇಬ್ಬರ ವಾಯ್ಸ್ ಬಗ್ಗೆ ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲೂ ಚರ್ಚೆ ನಡೆಯಿತು. ಆಗ ರವಿಶಂಕರ್ ಧ್ವನಿ ಬಗ್ಗೆ ಸುದೀಪ್ ಏನು ಹೇಳಿದ್ರು ಗೊತ್ತಾ.?

'ಆರ್ಮುಗಂ' ವಾಯ್ಸ್ ಬಗ್ಗೆ ಸುದೀಪ್ ಕಾಮೆಂಟ್

'ಹೆಬ್ಬುಲಿ' ಪ್ರೆಸ್ ಮೀಟ್ ನಲ್ಲಿ ತೂರಿಬಂದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸುದೀಪ್, "ನೋಡಿ.. ನನ್ನ ವಾಯ್ಸ್ ಬಂದು.. ನನ್ನದೇ. ಅವರ (ರವಿಶಂಕರ್) ವಾಯ್ಸ್ ಬಂದು.... ಜೆನೆಟಿಕಲಿ ಡಿಸಾರ್ಡರ್" ಎಂದು ಹಾಸ್ಯ ಮಾಡಿದರು.[ಎಲ್ಲೇ ಹೋದ್ರೂ ಸುದೀಪ್ 'ರನ್ನ' ನೆನೆಯದೇ ರವಿಶಂಕರ್ ಮಾತು ಮುಗಿಸೋಲ್ಲ.!]

ಫ್ಯಾಮಿಲಿಯಲ್ಲೇ ದೊಡ್ಡ ಕಾಂಪಿಟೇಶನ್ ಇದೆ

"ರವಿಶಂಕರ್ ವಾಯ್ಸ್ ಗೆ ಕಾಂಪಿಟೇಶನ್ ಅವರ ಫ್ಯಾಮಿಲಿಯಲ್ಲೇ ಇದೆ. ನನ್ನ ಜೊತೆ ಅಲ್ಲ. ಅವರ ಮೂವರು ಅಣ್ಣ ತಮ್ಮಂದಿರು ಒಂದೇ ತರಹ" -ಕಿಚ್ಚ ಸುದೀಪ್ [ಕಿಚ್ಚ ಬಿಚ್ಚಿಟ್ಟ 'ಹೆಬ್ಬುಲಿ' ಹೇರ್ ಸ್ಟೈಲ್ ಕಹಾನಿ..!]

ಅದ್ಭುತ ನೋಡಬೇಕೇ?

"ರವಿಶಂಕರ್ ಮತ್ತು ಅವರ ಅಣ್ಣತಮ್ಮಂದಿರನ್ನು ಒಟ್ಟಿಗೆ ನಿಲ್ಲಿಸಿ ಮಾತಾಡಲು ಬಿಟ್ರೆ ಅದೇ ಒಂದು ದೃಶ್ಯ. ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ಹೇ...ಹೇ.. ಹೇ.. ಅಂತಾರೆ. ಅದೇ ಒಂದು ದೊಡ್ಡ ಅದ್ಭುತ" ಎಂದು ರವಿಶಂಕರ್ ಧ್ವನಿ ಬಗ್ಗೆ ಸುದೀಪ್ ಮಾತು ಮುಂದುವರೆಸಿದರು.

ಹೌ ಕ್ಯಾನ್ ಯು ಕಂಪೇರ್?

"ರವಿಶಂಕರ್ ವಾಯ್ಸ್ ಜೊತೆ ನನ್ನ ವಾಯ್ಸ್ ಕಂಪೇರ್ ಮಾಡಲು ಸಾಧ್ಯವೇ ಇಲ್ಲ. ಬಿಕಾಸ್ ಅವರ ವಾಯ್ಸ್ ನನ್ನ ವಾಯ್ಸ್ ಗಿಂತ ಅತ್ಯುತ್ತಮ" ಎಂದು ರವಿಶಂಕರ್ ಧ್ವನಿಯನ್ನು ಸುದೀಪ್ ಹೊಗಳಿದರು.

ಸುದೀಪ್ ನಿಂದ 'ಆರ್ಮುಗಂ', 'ಕೆಂಪೇಗೌಡ'

"ರವಿಶಂಕರ್ ಯಾವಾಗ್ಲೂ ಹೇಳ್ತಾನೆ ಸುದೀಪ್ ನಿಂದ 'ಆರ್ಮುಗಂ'.... ಅಂತ. ಅವನಿಂದ ಎಷ್ಟು ಕಲಾವಿದರು ಗೊತ್ತಾ? ಆಂಧ್ರ ಮತ್ತು ಬಾಂಬೆಯಲ್ಲಿ ಎಷ್ಟು ಜನ ಕಲಾವಿದರು ಮನೆ ಮಾಡಿ ಬದುಕುತ್ತಿದ್ದಾರೆ ಅಂದ್ರೆ ಬಿಕಾಸ್ ಆಫ್ ದಟ್ ಜೆಂಟಲ್ ಮ್ಯಾನ್ ರವಿಶಂಕರ್. ಅದಕ್ಕೆ ಕಾರಣ ಅವರ ವಾಯ್ಸ್. ಇವತ್ತಿಗೂ ರವಿಶಂಕರ್ ವಾಯ್ಸ್ ಗೆ ಆಲ್ಟರ್ನೇಟಿವ್ ಇಲ್ಲ" - ಕಿಚ್ಚ ಸುದೀಪ್

English summary
Kiccha Sudeep praised Ravishankar and his Voice in 'Hebbuli' Press Meet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada