»   » 'ಅಂಜನೀಪುತ್ರ' ಸಿನಿಮಾದಲ್ಲೂ ಮುಂದುವರೆದಿದೆ 'ಅಪ್ಪು ಡ್ಯಾನ್ಸ್'

'ಅಂಜನೀಪುತ್ರ' ಸಿನಿಮಾದಲ್ಲೂ ಮುಂದುವರೆದಿದೆ 'ಅಪ್ಪು ಡ್ಯಾನ್ಸ್'

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಡ್ಯಾನ್ಸ್ ನೋಡುವುದು ಅಂದ್ರೆ ಅಭಿಮಾನಿಗಳಿಗೆ ಏನೋ ಒಂಥರಾ ಖುಷಿ. ಅದೇ ಕಾರಣದಿಂದ ಪುನೀತ್ ಅವರ ಎಲ್ಲಾ ಸಿನಿಮಾಗಳಲ್ಲಿ ಒಂದಾದರೂ ಡ್ಯಾನ್ಸ್ ನಂಬರ್ ಇದೆ ಇರುತ್ತದೆ.

ಸದ್ಯ ಪುನೀತ್ ರಾಜ್ ಕುಮಾರ್ ರವರ 'ಅಂಜನೀಪುತ್ರ' ಸಿನಿಮಾದಲ್ಲಿ ಆ ರೀತಿಯ ಒಂದು ಹಾಡು ಇದೆ. ಅಲ್ಲದೆ ಈ ಹಾಡಿನ ಚಿತ್ರೀಕರಣ ಈಗಾಗಲೇ ನಡೆದಿದ್ದು, ಸಾಂಗ್ ಶೂಟಿಂಗ್ ನ ಕೆಲ ಮೇಕಿಂಗ್ ಫೋಟೋಗಳು ಹೊರಬಂದಿವೆ.['ಅಂಜನಿಪುತ್ರ' ಸೆಟ್ ನಲ್ಲಿ ಕಾಣಿಸಿಕೊಂಡ ಶಿವಗಾಮಿ ರಮ್ಯ ಕೃಷ್ಣ]

'ರಾಜಕುಮಾರ' ಸಿನಿಮಾದ 'ಅಪ್ಪು ಡ್ಯಾನ್ಸ್' ಸಖತ್ ಹಿಟ್ ಆಗಿತ್ತು. ಈಗ 'ಅಂಜನೀಪುತ್ರ' ಚಿತ್ರದಲ್ಲೂ ಸಹ ಪವರ್ ಸ್ಟಾರ್ ಒಂದು ಸಾಂಗ್ ನಲ್ಲಿ ಸಿಕ್ಕಾಪಟ್ಟೆ ಡ್ಯಾನ್ಸ್ ಮಾಡಿದ್ದಾರೆ. ಆ ಸೂಪರ್ ಸಾಂಗ್ ನ ಒಂದಷ್ಟು ಡೀಟೇಲ್ಸ್ ಮುಂದಿದೆ ಓದಿ...

ಇಂಟ್ರೊಡಕ್ಷನ್ ಸಾಂಗ್

ಪುನೀತ್ ಅಭಿನಯದ 'ಅಂಜನೀಪುತ್ರ' ಚಿತ್ರದ ಒಂದು ಹಾಡಿನ ಚಿತ್ರೀಕರಣ ಈಗಾಗಲೇ ನಡೆದಿದೆ. ಇದು ಸಿನಿಮಾದ ಇಂಟ್ರೊಡಕ್ಷನ್ ಸಾಂಗ್ ಆಗಿದ್ದು, ಈ ಹಾಡು ಕೇಳಿದರೆ ಪ್ರೇಕ್ಷಕರು ಹುಚ್ಚೆದ್ದು ಕುಣಿಯಲಿದ್ದಾರಂತೆ.

ಅದ್ದೂರಿ ಮೇಕಿಂಗ್

ಈ ಹಾಡನ್ನು ದೊಡ್ಡ ಸೆಟ್ ಹಾಕಿ ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ. ಸಖತ್ ರಿಚ್ ಆಗಿ ಹಾಡಿನ ಮೇಕಿಂಗ್ ಮಾಡಲಾಗಿದೆ.['ಪೋಸ್ ಲೈಕ್ ರಾಜಕುಮಾರ' ಸ್ಪರ್ಧೆಯಲ್ಲಿ ಗೆದ್ದಿದ್ದು ಇವರ ಪೋಸ್]

ಹರ್ಷ ನೃತ್ಯ ಸಂಯೋಜನೆ

ಸಿನಿಮಾದ ಈ ವಿಶೇಷ ಹಾಡಿಗೆ ನಿರ್ದೇಶಕ ಹರ್ಷ ಅವರೇ ನೃತ್ಯ ಸಂಯೋಜನೆ ಮಾಡಿದ್ದಾರೆ.

ಅಪ್ಪು ಜೊತೆ ಹರಿಪ್ರಿಯಾ

ಸಿನಿಮಾದ ಈ ಸ್ಪೆಷಲ್ ಹಾಡಿನಲ್ಲಿ 'ನೀರ್ ದೋಸೆ' ಬೆಡಗಿ ಹರಿಪ್ರಿಯಾ ಅಪ್ಪು ಹೆಜ್ಜೆ ಹಾಕಿರುವುದು ವಿಶೇಷ.[ಸರಳತೆಯ ಶ್ರೀಮಂತರು: ಅಂದು ಅಣ್ಣಾವ್ರು, ಇಂದು ಅಣ್ಣಾವ್ರ ಮಗ]

ಸ್ಪೆಷಲ್ ಸ್ಟೆಪ್ಸ್

ಈ ಹಾಡಿನಲ್ಲಿ ಹಿಂದೆ ಎಲ್ಲಿಯೂ ನೋಡಿರದ ಸ್ಪೆಷಲ್ ಸ್ಟೆಪ್ಸ್ ಗಳನ್ನು ಅಪ್ಪು ಟ್ರೈ ಮಾಡಿದ್ದಾರಂತೆ.

50 % ಚಿತ್ರೀಕರಣ ಮುಗಿದಿದೆ

'ಅಂಜನೀಪುತ್ರ' ಸಿನಿಮಾದ 50% ಶೂಟಿಂಗ್ ಮುಗಿದಿದೆ. ಸದ್ಯ ಪಾರ್ವತಮ್ಮ ರಾಜ್ ಕುಮಾರ್ ಅವರ ಅನಾರೋಗ್ಯದ ಹಿನ್ನಲೆಯಲ್ಲಿ ಪುನೀತ್ ಶೂಟಿಂಗ್ ಗೆ ಬರಲು ಸಾಧ್ಯವಾಗುತ್ತಿಲ್ಲ.

'ಅಂಜನೀಪುತ್ರ' ಸ್ಪೆಷಾಲಿಟಿ

'ಅಂಜನೀಪುತ್ರ' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಪುನೀತ್ ಗೆ ಜೋಡಿಯಾಗಿದ್ದಾರೆ. ರಮ್ಯ ಕೃಷ್ಣ ಅಪ್ಪು ತಾಯಿಯಾಗಿ ನಟಿಸಿರುವುದು ಚಿತ್ರದ ವಿಶೇಷತೆಗಳಲ್ಲಿ ಒಂದು.

English summary
Check out the exclusive photos of Kannada Actor Puneeth Rajkumar starrer 'Anjaniputra' Introduction Song making

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada