»   » ಸರಳತೆಯ ಶ್ರೀಮಂತರು: ಅಂದು ಅಣ್ಣಾವ್ರು, ಇಂದು ಅಣ್ಣಾವ್ರ ಮಗ

ಸರಳತೆಯ ಶ್ರೀಮಂತರು: ಅಂದು ಅಣ್ಣಾವ್ರು, ಇಂದು ಅಣ್ಣಾವ್ರ ಮಗ

Posted By: Naveen
Subscribe to Filmibeat Kannada

'ಬೊಂಬೆ ಹೇಳುತೈತೆ... ಮತ್ತೆ ಹೇಳುತೈತೆ...ನೀನೆ ರಾಜಕುಮಾರ'. ಈ ಹಾಡು ನೂರಕ್ಕೆ ನೂರರಷ್ಟು ನಿಜ ಅನಿಸುವುದು ಪುನೀತ್ ರಾಜ್ ಕುಮಾರ್ ಅವರಿಗೆ. ಒಬ್ಬ ದೊಡ್ಡ ಸ್ಟಾರ್ ಆಗಿದ್ದರು ಅಪ್ಪು ಲೈಫ್ ಸ್ಟೈಲ್ ಒಬ್ಬ ಸಾಮಾನ್ಯರಿಗೂ ಮಾದರಿಯಾಗುವಂತಿದೆ .

ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕುತ್ತಿರುವ ಪುನೀತ್ ಸರಳತೆಯ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಡಾ.ರಾಜ್ ಕುಮಾರ್ ಸರಳತೆಯಲ್ಲಿ ಶ್ರೇಷ್ಠತೆ ಮೆರೆದ ನಟ. ಈಗ ಪುನೀತ್ ಸಹ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ.['ರಾಜಕುಮಾರ'ನ 'ಬೊಂಬೆ' ಹಾಡಿಗೆ ಮನಸೋತ ಪಾಕ್ ದೇಶದ ಯುವಕ]

ನಾನ್ನೊಬ್ಬ ಸೂಪರ್ ಸ್ಟಾರ್ ಎನ್ನುವ ಅಹಂ ಅವರಲ್ಲಿ ಕಂಡಿಲ್ಲ. ಅದನ್ನ ಮತ್ತೆ ಮತ್ತೆ ಸಾಬೀತು ಮಾಡುತ್ತಿರುವುದು ಅವರ ಗುಣಗಳು. ಹೌದು, ಪುನೀತ್ ರಾಜ್ ಕುಮಾರ್ ರಿಯಲ್ ಲೈಫ್ ನಲ್ಲಿಯೂ 'ರಾಜಕುಮಾರ'. ಅಪ್ಪುಗೆ ಸರಳತೆಯ 'ರಾಜಕುಮಾರ' ಅಂತ ಹೇಳುವುದು ಇದೇ ಕಾರಣಗಳಿಗೆ. ಮುಂದೆ ಓದಿ.... [ಚಿತ್ರಕೃಪೆ : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫ್ಯಾನ್ಸ್]

ಅಪ್ಪು ಸರಳತೆಗೊಂದು ಉದಾಹರಣೆ

ಸದ್ಯ, 'ರಾಜಕುಮಾರ' ಚಿತ್ರದ ವಿಜಯ ಯಾತ್ರೆಯಲ್ಲಿರುವ ಪುನೀತ್ ವಿಶೇಷವೆನಿಸಿಕೊಂಡಿದ್ದಾರೆ. ರಸ್ತೆ ಮಧ್ಯೆ ಇದ್ದ ಒಂದು ಚಿಕ್ಕ ಪೆಟ್ಟಿಗೆ ಅಂಗಡಿಯಲ್ಲಿ ಅಪ್ಪು-ಟೀ ಕುಡಿಯುವ ಮೂಲಕ ನಾನೊಬ್ಬ ಸಾಮಾನ್ಯ ವ್ಯಕ್ತಿ ಎಂಬುದನ್ನ ಸಾಬೀತು ಪಡಿಸಿದ್ದಾರೆ. ಈ ಪೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಇದು ಮೊದಲೇನಲ್ಲ

ಪುನೀತ್ ಈ ರೀತಿ ರಸ್ತೆ ಬದಿಯಲ್ಲಿ ಟೀ ಕುಡಿಯುವುದು ಇದು ಮೊದಲೇನಲ್ಲ. ಒಬ್ಬ ಸ್ಟಾರ್ ಆದರು ಯಾವುದೇ ಹಿಂಜರಿಕೆ ಇಲ್ಲದೆ ಅಪ್ಪು ದಿನ ನಿತ್ಯ ಇರುತ್ತಾರೆ.[ಅಣ್ಣಾವ್ರ ವರ್ಷನ್ ನಲ್ಲಿ ರಿಲೀಸ್ ಆಯ್ತು 'ಬೊಂಬೆ ಹೇಳುತೈತೆ' ಹಾಡು]

'ಮಕ್ಕಳು ದೇವರು, ದೇವರು ಒಂದು ಮಗು'

'ಮಕ್ಕಳು ದೇವರು, ದೇವರು ಒಂದು ಮಗು' ಇದು ಡಾ.ರಾಜ್ ಮಕ್ಕಳ ಬಗ್ಗೆ ಆಡಿದ ಮಾತು. ಅದೇ ರೀತಿ ಅಪ್ಪುಗೆ ಸಹ ಮಕ್ಕಳೆಂದರೆ ಪ್ರಾಣ.

ಜನರಿಗೂ ಅದೇ ಇಷ್ಟ

ಪುನೀತ್ ಒಬ್ಬ ನಟ ಎನ್ನುವುದಕ್ಕಿಂತ ಹೆಚ್ಚಾಗಿ ಅವರು ಒಬ್ಬ ಒಳ್ಳೆಯ ಮನಸಿನ ವ್ಯಕ್ತಿ ಎನ್ನುವ ಕಾರಣಕ್ಕಾಗಿನೇ ಎಲ್ಲರೂ ಅವರನ್ನು ಇಷ್ಟ ಪಡುತ್ತಾರೆ.[ಅಂದು 'ಅಪ್ಪು'ಗೆ ಸುದೀಪ್ ಸರ್ಪ್ರೈಸ್, ಇಂದು ಕಿಚ್ಚನಿಗೆ ಪುನೀತ್ ಸರ್ಪ್ರೈಸ್!]

ಅಭಿಮಾನಿಗಳೇ ನಮ್ಮನೆ ದೇವರು...

'ಅಭಿಮಾನಿಗಳೇ ನಮ್ಮನೆ ದೇವ್ರು' ಅಂತ ಹಾಡಿರುವ ಪುನೀತ್. ಒಬ್ಬ ಸಾಮಾನ್ಯ ಅಭಿಮಾನಿಯ ಮನೆಗೆ ಬೇಟಿ ಕೊಟ್ಟ ಕ್ಷಣದ ಫೋಟೋ ಇದು.

ಎಲ್ಲ ಇದ್ದು ಏನು ಇಲ್ಲದ ಹಾಗೆ ಬದುಕಿರುವ...

'ಎಲ್ಲ ಇದು ಏನು ಇಲ್ಲದ ಹಾಗೆ ಬದುಕಿರುವ' ರಾಜಕುಮಾರ ಸಿನಿಮಾದ ಹಾಡಿನಲ್ಲಿ ಬರುವ ಈ ಸಾಲು ನಿಜ ಅನಿಸುವುದು ಅಪ್ಪು ವ್ಯಕ್ತಿತ್ವದಿಂದ.

ಸರಳತೆಯ ಶ್ರೀಮಂತ

ಅದಷ್ಟು ಸರಳವಾಗಿ ಬದುಕಲು ಇಷ್ಟ ಪಡುವ ಪುನೀತ್ ಸೈಕಲ್, ಟ್ರಾಕ್ಟರ್ ಓಡಿಸುವಾಗ ಕ್ಲಿಕ್ಕಿಸಿದ ಅವರೂಪದ ಫೋಟೋ ಇದು.

ಸಾಮಾನ್ಯರಲ್ಲಿ ಸಾಮಾನ್ಯ

ಪುನೀತ್ ಗೆ ತಾನು ದೊಡ್ಡ ನಟ ಎನ್ನುವ ಹಮ್ಮು ಬಿಮ್ಮು ಇಲ್ಲ. ಅವರು ಯಾವಾಗಲು ಸಾಮಾನ್ಯರಲ್ಲಿಯೇ ಸಾಮಾನ್ಯನಾಗಿರುತ್ತಾರೆ.

ಹಿರಿಯರಿಗೆ ಗೌರವ

ಪುನೀತ್ ಹಿರಿಯರಿಗೆ ಗೌರವಿಸುವ ಪರಿಯನ್ನ ಎಲ್ಲರೂ ನೋಡಿ ಕಲಿಯಬೇಕು. ಕಿರಿಯರನ್ನ ಪ್ರೋತ್ಸಾಹಿಸುತ್ತಾ, ಹಿರಿಯರನ್ನ ಗೌರವಿಸುತ್ತಾ ಸಾಗುವ ಗುಣ ಅಪ್ಪು ಅವರದ್ದು.

ನಿನ್ನನು ಪಡೆದ ನಾವು 'ಪುನೀತ'

ಅಭಿಮಾನಿಗಳು ಪುನೀತ್ ರಾಜ್ ಕುಮಾರ್ ರಲ್ಲಿ ಅಣ್ಣಾವ್ರರನ್ನ ಕಾಣುತ್ತಿದ್ದಾರೆ. ನಿನ್ನನ್ನು ಪಡೆದ ನಾವು ಪುನೀತರೆಂದು ಹೇಳುತ್ತಾರೆ.

'ಯೋಗ್ಯತೆ ಒಂದೇ ಉಳಿವುದು ಕೊನೆಗೆ'

'ಯೋಗವು ಒಮ್ಮೆ ಬರುವುದು ನಮಗೆ, ಯೋಗ್ಯತೆ ಒಂದೇ ಉಳಿವುದು ಕೊನೆಗೆ' ಈ ಮಾತನ್ನ ಅಂದು ಪಾಲಿಸಿದ್ದು ರಾಜಣ್ಣ. ಇಂದು ಅದನ್ನ ಮುಂದುವರೆಸಿಕೊಂಡು ಹೋಗುತ್ತಿರುವುದು ರಾಜರತ್ನ ಪುನೀತ್ ರಾಜ್ ಕುಮಾರ್.

English summary
Kannada Actor 'Puneeth Rajkumar' simplicity

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada